Drinking Water: ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಕುಡಿಯುವ ಮುನ್ನ ಈ ಸ್ಟೋರಿ ಓದಿ
ನೀವು ಎಲ್ಲೆಂದರಲ್ಲಿ ಕಾಸು ಕೊಟ್ಟು ವಾಟರ್ ಬಾಟಲ್ ಖರೀದಿಸಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದೀರಾ? ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಹೋಟೆಲ್, ಸಿನಿಮಾಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಸಿಗುವ ನೀರು ಕುಡಿಯುತ್ತಿದ್ದೀರಾ? ಹಾಗಾದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ! ಹೌದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈ ಆತಂಕಕಾರಿ ಮಾಹಿತಿಯನ್ನು ತಿಳಿಸಿದೆ. ಪ್ಯಾಕೇಜ್ ಮಾಡಿದ ಕುಡಿಯುವ ಖನಿಜಯುಕ್ತ ನೀರನ್ನು 'ಹೆಚ್ಚು ಅಪಾಯಕಾರಿ ಆಹಾರ' ಪಟ್ಟಿಯಲ್ಲಿ ಹೆಸರಿಸಿದೆ.
ಸಾರ್ವಜನಿಕರ ಆರೋಗ್ಯದ ಮೇಲೆ ಇದು ತೀವ್ರ ಪರಿಣಾಮ ಬೀರುವ ಅಪಾಯ ಇರುವ ಕಾರಣ, ಸುರಕ್ಷತೆಯ ಮಾನದಂಡಗಳನ್ನು ಮತ್ತಷ್ಟು ಕಠಿಣವಾಗಿಸಲು ನಿರ್ಧಾರ ಮಾಡಿದೆ. ಈ ಉತ್ಪನ್ನಗಳನ್ನು ಹೆಚ್ಚಿನ ತಪಾಸಣೆ ಮಾಡಲು ನಿರ್ದೇಶಿಸಿದ್ದು, ಮೂರನೇ ವ್ಯಕ್ತಿಯಿಂದ ಲೆಕ್ಕಪರಿಶೋಧನೆಗೆ ಒಳಗಾಗಲಿದೆ.

ಪ್ಯಾಕೇಜ್ಡ್ ನೀರಿನ ಉದ್ಯಮ ಆರಂಭಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನ ಪ್ರಮಾಣ ಪತ್ರದ ಅಗತ್ಯವನ್ನು ಕೇಂದ್ರ ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿ ತೆಗೆದುಹಾಕಿದ್ದು, ಈಗ ನಿಯಮಗಳು ಮತ್ತಷ್ಟು ಬಿಗಿಯಾಗಲಿವೆ.
ಎಫ್‌ಎಸ್‌ಎಸ್‌ಎಐ ವರದಿ ಹೇಳಿದ್ದೇನು?
ನವೆಂಬರ್ 29ರಂದು ನೀಡಿರುವ ಆದೇಶದಲ್ಲಿ ಎಫ್‌ಎಸ್‌ಎಸ್‌ಎಐ ಕೆಲವು ಉತ್ಪನ್ನಗಳ ತಯಾರಿಕೆಗೆ ಬಿಐಎಸ್ ಪ್ರಮಾಣಪತ್ರದ ಆದೇಶವನ್ನು ತೆಗೆದುಹಾಕುವ ನಿರ್ಧಾರ ಮಾಡಿದ್ದು, ಪ್ಯಾಕೇಜ್ ಮಾಡಲಾದ ಮತ್ತು ಖನಿಜಯುಕ್ತ ನೀರನ್ನು ಹೆಚ್ಚು ಅಪಾಯಕಾರಿ ಆಹಾರದ ವರ್ಗಗಳಿಗೆ ಸೇರಿಸಲು ನಿರ್ಧರಿಸಿದೆ. ಹೊಸ ನಿಯಮದ ಪ್ರಕಾರ ಪ್ಯಾಕೇಜ್ ನೀರು ತಯಾರಕರು ಪ್ರತಿ ವರ್ಷ ಅಪಾಯ ಆಧಾರಿಯ ತಪಾಸಣೆಗೆ ಒಳಗಾಗಬೇಕಿದ್ದು, ಗುಣಮಟ್ಟ ಕಾಪಾಡುವ ಗುರಿಯನ್ನು ಹೊಂದಿದೆ.
ಮುಂದಿನ ದಿನಗಳಲ್ಲಿ ಈ ಉದ್ಯಮಕ್ಕೆ ಪರವಾನಗಿ ನೀಡುವ ಮೊದಲು ಕಠಿಣ ತಪಾಸಣೆಗಳನ್ನು ನಡೆಸಲಾಗುತ್ತದೆ. ಪ್ಯಾಕೇಜ್ ನೀರಿನ ಉದ್ಯಮ ಆರಂಭಿಸಲು ಇನ್ನುಮುಂದೆ ಬಿಐಎಸ್ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ ಆದರೆಪರವಾನಗಿ ಅಥವಾ ನೋಂದಣಿಯನ್ನು ಪಡೆಯುವ ಮೊದಲು ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕುತ್ತದೆ ಎಂದು ಹೇಳಿದ್ದಾರೆ.
ಇಷ್ಟು ಮಾತ್ರವಲ್ಲದ ಹೆಚ್ಚಿನ ಅಪಾಯದ ಆಹಾರ ವರ್ಗದ ಅಡಿಯಲ್ಲಿ ಬರುವ ಎಲ್ಲಾ ಉತ್ಪನ್ನಗಳ ತಯಾರಕರು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಆಹಾರ ಸುರಕ್ಷತಾ ಏಜೆನ್ಸಿಯಿಂದ ವಾರ್ಷಿಕವಾಗಿ ಆಡಿಟ್‌ಗೆ ಒಳಗಾಗಬೇಕಾಗುತ್ತದೆ.
ಆರೋಗ್ಯದ ಬಗ್ಗೆ ಗಮನವಿರಲಿ
ಇದು ಮಾತ್ರವಲ್ಲದೆ ಇಂದು ಕೆಲವು ಜನಪ್ರಿಯ ಪ್ಯಾಕೇಜ್ ಕುಡಿಯುವ ನೀರಿನ ಕಂಪನಿಗಳ ಹೆಸರನ್ನೇ ಹೋಲುಕ ನಕಲಿ ಕಂಪನಿಗಳು ನಾಯಿಕೊಡೆಗಳಂತೆ ಹಬ್ಬಿದ್ದು ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ. ನೀವು ಕೂಡ ಆರೋಗ್ಯಬ ಬಗ್ಗೆ ಕಾಳಜಿ ವಹಿಸುವುದಾದರೆ ಮನೆಯಿಂದಲೇ ಬಾಟಲ್‌ನಲ್ಲಿ ಕುಡಿಯುವ ನೀರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಅಭ್ಯಾಸ ರೂಢಿಸಿಕೊಳ್ಳಿ.












Click it and Unblock the Notifications