ರಸ್ತೆ ಬದಿಯಲ್ಲಿ ಅಡುಗೆ ಮಾಡುತ್ತಿದ್ದ ಲಾರಿ ಡ್ರೈವರ್ ಈಗ ಕೋಟ್ಯಧಿಪತಿ ಯೂಟ್ಯೂಬರ್: ಐಷಾರಾಮಿ ಟ್ರಕ್ ನಿರ್ಮಿಸಿದ ರಾಜೇಶ್ ರವಾನಿ

ಜಾರ್ಖಂಡ್‌ನ ಜಾಮ್ತಾರಾ ಜಿಲ್ಲೆಯ ರಾಜೇಶ್ ರವಾನಿ ಕಳೆದ 25 ವರ್ಷಗಳಿಂದ ಸರಕು ಸಾಗಣೆ ಲಾರಿ ಓಡಿಸುವ ಸಾಮಾನ್ಯ ಚಾಲಕರಾಗಿದ್ದರು. ಆದರೆ ಇಂದು ಅವರು ಭಾರತದ ಅತ್ಯಂತ ಜನಪ್ರಿಯ ಡಿಜಿಟಲ್ ಕ್ರಿಯೇಟರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಎಂದರೆ ನೀವು ನಂಬುತ್ತೀರಾ?.

ಹೌದು. ನೀವು ನಂಬಲೇಬೇಕು. ರಸ್ತೆ ಬದಿಯಲ್ಲಿ ಅಡುಗೆ ಮಾಡುತ್ತಿದ್ದ ಸಾಮಾನ್ಯ ಲಾರಿ ಡ್ರೈವರ್ ಒಬ್ಬರು, ತಮ್ಮ ಕಠಿಣ ಪರಿಶ್ರಮದಿಂದ ಇಂದು ಭಾರತದ ಅತ್ಯಂತ ಐಷಾರಾಮಿ ಟ್ರಕ್ ನಿರ್ಮಿಸುವ ಹಂತಕ್ಕೆ ಬೆಳೆದಿರುವ ರೋಚಕ ಯಶೋಗಾಥೆ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.

From Truck Driver To YouTube Star Rajesh Rawani Builds India s Most Luxurious Truck In Jharkhand

ಆರ್ ರಾಜೇಶ್ ವ್ಲಾಗ್ಸ್ ಯೂಟ್ಯೂಬ್ ಚಾನೆಲ್ ಆರಂಭ

ರಾಜೇಶ್ ರವಾನಿ ಅವರ ಡಿಜಿಟಲ್ ವೃತ್ತಿಜೀವನ ಪ್ರಾರಂಭವಾಗಿದ್ದು ಅವರಲಿದ್ದ ಅಡುಗೆಯ ಮೇಲಿನ ಅಪಾರ ಆಸಕ್ತಿಯಿಂದ. ದೂರದ ಊರುಗಳಿಗೆ ಸರಕು ಸಾಗಿಸುವಾಗ, ಹೆದ್ದಾರಿಯ ಬದಿಯಲ್ಲಿ ಲಾರಿ ನಿಲ್ಲಿಸಿ ಚಿಕನ್, ಮಟನ್, ಮೀನು ಮತ್ತು ಪನೀರ್‌ ಖಾದ್ಯಗಳನ್ನ ಅಡುಗೆ ಮಾಡುವುದು ಅವರ ದಿನಚರಿಯಾಗಿತ್ತು. ತಾವು ಎಲ್ಲಿದ್ದೇವೆ ಮತ್ತು ಏನು ಮಾಡುತ್ತಿದ್ದೇವೆ ಎಂಬುದನ್ನು ತಿಳಿಸಲು ಅವರು ಈ ಅಡುಗೆಯ ವಿಡಿಯೋಗಳನ್ನ ವಾಟ್ಸಾಪ್ ಮೂಲಕ ತಮ್ಮ ಕುಟುಂಬಕ್ಕೆ ಕಳುಹಿಸುತ್ತಿದ್ದರು.

ಈ ವಿಡಿಯೋಗಳಲ್ಲಿದ್ದ ವಿಶೇಷತೆಯನ್ನ ಗಮನಿಸಿದ ಅವರ ಮಗ ಸಾಗರ್ ರವಾನಿ, 2021ರಲ್ಲಿ ಆರ್ ರಾಜೇಶ್ ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ ಓಪನ್‌ ಮಾಡಿ ಅದರಲ್ಲಿ ವಿಡಿಯೋಗಳನ್ನ ಅಪ್ಲೋಡ್ ಮಾಡಲು ಶುರುಮಾಡಿದರು. ಒಮ್ಮೆ ವೀಕ್ಷಕರು ಅಡುಗೆ ಮಾಡುವವರ ಮುಖ ನೋಡಬೇಕೆಂದು ಬೇಡಿಕೆ ಇಟ್ಟಾಗ, ಸಾಗರ್ ಮಾಡಿದ ಫೇಸ್-ರಿವೀಲ್ ವಿಡಿಯೋ ಕೇವಲ 24 ಗಂಟೆಗಳಲ್ಲಿ 4.5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ವೈರಲ್ ಆಯಿತು.

ಇದು ರಾಜೇಶ್ ಅವರ ಬದುಕಿಗೆ ಸಿಕ್ಕ ದೊಡ್ಡ ತಿರುವಾಗಿತ್ತು.

ಲಾರಿ ಡ್ರೈವರ್‌ಗೆ ಲಕ್ಷ ಲಕ್ಷ ಯೂಟ್ಯೂಬ್ ಆದಾಯ

ಲಾರಿ ಚಾಲಕನಾಗಿ ರಾಜೇಶ್ ಅವರು ತಿಂಗಳಿಗೆ ಕೇವಲ 25 ರಿಂದ 30 ಸಾವಿರ ರೂಪಾಯಿ ಸಂಪಾದಿಸುತ್ತಿದ್ದರು. ಆದರೆ, ಯೂಟ್ಯೂಬ್‌ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಅವರ ಆದಾಯದಲ್ಲಿ ಭಾರಿ ಏರಿಕೆಯಾಯಿತು. ಪ್ರಸ್ತುತ ಅವರು ಯೂಟ್ಯೂಬ್ ಮೂಲಕ ತಿಂಗಳಿಗೆ 4 ರಿಂದ 5 ಲಕ್ಷ ರೂಪಾಯಿ ಗಳಿಸುತ್ತಿದ್ದು, ಕೆಲವೊಮ್ಮೆ ಈ ಬರೋಬ್ಬರಿ 18 ಲಕ್ಷ ರೂಪಾಯಿಗಳನ್ನು ಮುಟ್ಟಿದ್ದೂ ಇದೆ.

ಅವರ ಈ ಸಾಧನೆ ಮತ್ತು ಪರಿಶ್ರಮವನ್ನ ಮೆಚ್ಚಿ, ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ರಾಜೇಶ್ ಅವರನ್ನ ನಿಜವಾದ ಸ್ಫೂರ್ತಿಯ ಸಂಕೇತ ಎಂದು ಕೊಂಡಾಡಿದ್ದರು.

ಕನಸಿನ ಭಾರತದ ಐಷಾರಾಮಿ ಟ್ರಕ್ ನಿರ್ಮಾಣ

ತಮ್ಮ ಯೂಟ್ಯೂಬ್ ಆದಾಯವನ್ನ ಬಳಸಿಕೊಂಡು ರಾಜೇಶ್ ಅವರು ತಮ್ಮದೇ ಆದ ಒಂದು ಸುಸಜ್ಜಿತ ಹಾಗೂ ಐಷಾರಾಮಿ ಟ್ರಕ್ ಅನ್ನ ನಿರ್ಮಿಸಿದ್ದಾರೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಈ ಟ್ರಕ್‌ನ ನವೀಕರಣದ ಹಂತ ಹಂತದ ವಿಡಿಯೋಗಳನ್ನ ಅವರು ಹಂಚಿಕೊಂಡಿದ್ದರು.

ಈ ಹೊಸ ಟ್ರಕ್‌ನಲ್ಲಿ ಆರಾಮದಾಯಕ ಒಳಾಂಗಣ ವಿನ್ಯಾಸ, ಕಸ್ಟಮ್-ಬಿಲ್ಟ್ ಸ್ಟೋರೇಜ್ ಕ್ಯಾಬಿನೆಟ್‌ಗಳು, ಸಂಪೂರ್ಣ ಎಸಿ ವ್ಯವಸ್ಥೆ ಮತ್ತು ಅತ್ಯಾಧುನಿಕ ಮೊಬೈಲ್ ಕಿಚನ್ ಸೌಲಭ್ಯಗಳಿವೆ. ಸುದೀರ್ಘ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ಈ ವಾಹನವನ್ನ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಅತ್ಯಂತ ಐಷಾರಾಮಿ ಟ್ರಕ್ ಎಂದು ಕರೆಯಲಾಗುತ್ತಿದೆ.

ಹಿಂದೆ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ತಮ್ಮ ಕೈಗೆ ಗಂಭೀರ ಪೆಟ್ಟಾಗಿದ್ದರೂ, ಆರ್ಥಿಕ ಸಮಸ್ಯೆಯ ನಡುವೆಯೂ ಛಲ ಬಿಡದೆ ದುಡಿದು ಇಂದು ಸ್ವಂತ ಮನೆ ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಅವರ 'ಆರ್ ರಾಜೇಶ್ ವ್ಲಾಗ್ಸ್' ಯೂಟ್ಯೂಬ್ ಚಾನೆಲ್ 3 ದಶಲಕ್ಷ (3 ಮಿಲಿಯನ್) ಸಬ್‌ಸ್ಕ್ರೈಬರ್ಸ್ ಹೊಂದಿದ್ದು, ಒಂದು ಬಿಲಿಯನ್‌ಗಿಂತ ಅಧಿಕ ವೀಕ್ಷಣೆ ಪಡೆದಿದೆ.

ಇನ್‌ಸ್ಟಾಗ್ರಾಮ್‌ನಲ್ಲೂ 2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಎಷ್ಟೇ ಜನಪ್ರಿಯತೆ ಗಳಿಸಿದರೂ, ಇಂದಿಗೂ ತಮ್ಮ ಹಳೆಯ ಲಾರಿ ಚಾಲಕನ ವೃತ್ತಿಯನ್ನು ಮರೆಯದೆ, ಕೋಟ್ಯಂತರ ವೀಕ್ಷಕರ ಪ್ರೀತಿಯೊಂದಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾಜೇಶ್ ರವಾನಿ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+