ಮೋದಿಕೇರ್ ನಿಂದ ಇಂದ್ರಧನುಷ್ ವರೆಗೆ ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳು
ನವದೆಹಲಿ, ಅಕ್ಟೋಬರ್ 22: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ದೇಶದಲ್ಲಿ ಆರೋಗ್ಯ ಕಾಳಜಿಯ ಕುರಿತು ಹಲವಯ ಯೋಜನೆಗಳನ್ನು ಜಾರಿಗೆ ತಂದಿದೆ.
ರಾಷ್ಟ್ರೀಯ ಆರೋಗ್ಯ ರಕ್ಷಣೆ ಮಿಷನ್ ಅಡಿಯಲ್ಲಿ ಹಲವರು ಆರೋಗ್ಯ ವಿಮೆಯ ಸೌಲಭ್ಯ ಪಡೆಯುವಂತೆ ಮಾಡಲಾಗಿದೆ. ವಿಶ್ವದ ಅತೀದೊಡ್ಡ ಆರೋಗ್ಯ ವಿಮೆ ಎಂಬ ಖ್ಯಾತಿಗಳಿಸಿದ ಮೋದಿ ಕೇರ್ ಮೂಲಕ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗೆ ಆರೋಗ್ಯ ವಿಮಾ ಸೌಲಭ್ಯ ನೀಡಲಾಗುತ್ತಿದೆ.
ಇಂದ್ರಧನುಷ್ ಯೋಜನೆಯ ಮೂಲಕ 3.15 ಕೋಟಿ ಮಕ್ಕಳಿಗೆ ಮತ್ತು 80 ಲಕ್ಷದಷ್ಟು ಗರ್ಭಿಣಿಯರಿಗೆ ಚುಚ್ಚುಮದ್ದು ನೀಡಲಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುವುದು ಇದರ ಉದ್ದೇಶವಾಗಿದೆ. 528 ಜಿಲ್ಲೆಗಳಲ್ಲಿ ಈ ಯೋಜನೆ ವ್ಯಾಪಿಸಿದೆ.

ಆಯುಷ್ಮಾನ್ ಭಾರತ ಯೋಜನೆಯು ಸಮಾಜದ ಬಡ ವರ್ಗವನ್ನು ಮುಟ್ಟುವ ಉದ್ದೇಶವನ್ನು ಹೊಂದಿದೆ.
ಮೋದಿ ಕೇರ್ ನ ಮುಖ್ಯ ಲಕ್ಷಣಗಳು
* ಕುಟುಂಬದ ಗಾತ್ರ, ವಯಸ್ಸು ಮತ್ತು ಲಿಂಗದ ನಿರ್ಬಂಧವಿಲ್ಲ.
* ಎಸ್ ಇ ಸಿಸಿ ದತ್ತಾಂಶದ ಪ್ರಕಾರ ಎಲ್ಲಾ ಅರ್ಹ ಕುಟುಂಬಗಳೂ ಈ ಯೋಜನೆಯ ಫಲಾನುಭವಿಗಳು.
* ಆಸ್ಪತ್ರೆಗೆ ಸೇರಿದರೆ ಕುಟುಂಬ ಯಾವುದೇ ರೀತಿಯ ಹಣ ಕಟ್ಟುವ ಅಗತ್ಯವಿಲ್ಲ, ಇದು ನಗದು ರಹಿತ ಸೇವೆಯಾಗಿದೆ.
* ಆಸ್ಪತ್ರೆಗೆ ದಾಖಲಾಗುವ ಪೂರ್ವದ ಮತ್ತು ನಂತರದ ಎರಡೂ ಸಂದರ್ಭಗಳೂ ಈ ವಿಮೆಯ ವ್ಯಾಪ್ತಿಗೆ ಬರುತ್ತವೆ.
* ದೇಶದ ಯಾವುದೇ ಸರ್ಕಾರಿ ಮತ್ತು ಕೆಲವು ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಪಡೆಯಬಹುದು.
* ಯಾವುದೇ ಸರ್ಕಾರಿ ಗುರುತಿನ ಚೀಟಿಯೊಂದಿಗೆ ಈ ಸೌಲಭ್ಯವನ್ನು ಪಡೆಯಬಹುದು.












Click it and Unblock the Notifications