Get Updates
Get notified of breaking news, exclusive insights, and must-see stories!

ಭಾರತಕ್ಕೆ ಆಗಮಿಸಿದ ಅಫ್ಘನ್ನರಿಗೆ ಫೋಲಿಯೋ ಲಸಿಕೆ ಉಚಿತ ಉಚಿತ!

ಕಾಬೂಲ್, ಆಗಸ್ಟ್ 22: ತಾಲಿಬಾನ್ ಭೀತಿಯಲ್ಲಿ ಅಫ್ಘಾನಿಸ್ತಾನ ತೊರೆದು ಭಾರತಕ್ಕೆ ಆಗಮಿಸಿದ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಉಚಿತ ಪೋಲಿಯೋ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಟ್ವೀಟ್ ಮಾಡಿದ್ದಾರೆ. ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಲಸಿಕೆ ವಿತರಣೆ ಫೋಟೋವೊಂದನ್ನು ಅವರು ಪೋಸ್ಟ್ ಮಾಡಿದ್ದಾರೆ.
ಅಫ್ಘಾನಿಸ್ತಾನದಿಂದ ಆಗಮಿಸಿದವರಿಗೆ ಏಕೆ ಪೋಲಿಯೋ ಲಸಿಕೆ ವಿತರಿಸಲಾಗುತ್ತಿದೆ ಎಂಬುದರ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಕಳೆದ 2014ರ ಮಾರ್ಚ್ 27ರಂದು ದಕ್ಷಿಣ ಏಷ್ಯಾದಲ್ಲೇ ಭಾರತವು "ಪೋಲಿಯೋ ಮುಕ್ತ ದೇಶ" ಎಂಬ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಜಗತ್ತಿನಲ್ಲಿ ಅತಿಹೆಚ್ಚು ಪೋಲಿಯೋ ಪ್ರಕರಣಗಳು ನೆರೆಯ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ವರದಿಯಾಗುತ್ತಿದ್ದವು.
ಎರಡು ದೇಶಗಳಲ್ಲಿ ಪೋಲಿಯೋ ನಿರ್ಮೂಲನೆ ಮಾಡದಿದ್ದರೆ ಮುಂದಿನ 10 ವರ್ಷಗಳಲ್ಲಿ ಪ್ರತಿವರ್ಷ 2 ಲಕ್ಷಕ್ಕಿಂತ ಹೆಚ್ಚು ಪೋಲಿಯೋ ಪ್ರಕರಣಗಳು ವರದಿಯಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಪೋಲಿಯೋದಿಂದ ರಕ್ಷಣೆಗೆ ಲಸಿಕೆಯೊಂದೇ ಮಾರ್ಗ:
ವೈಲ್ಡ್ ಪೋಲಿಯೋ ವೈರಸ್‌ಗಳಲ್ಲಿ ಮೂರು ವಿಧಗಳಿವೆ. ಟೈಪ್ 1, ಟೈಪ್ 2, ಮತ್ತು ಟೈಪ್ 3. ಈ ಮೂರು ವೈಲ್ಡ್ ಪೋಲಿಯೋ ವೈರಸ್‌ಗಳು ನೈಸರ್ಗಿಕವಾಗಿ ಪ್ರತ್ಯೇಕತೆವಾಗಿವೆ, ಅಥವಾ ನಿರಂತರವಾಗಿ ಸಮುದಾಯದಲ್ಲಿ ಹರಡುತ್ತವೆ ಎಂದು ಹೇಳಲಾಗುತ್ತದೆ. ಪೋಲಿಯೋ ರೋಗ ಬರದಂತೆ ತಡೆಯಲು ಎಲ್ಲಾ ಮೂರು ವಿಧದ ವೈರಸ್‌ಗಳಿಂದ ಜನರನ್ನು ರಕ್ಷಿಸಬೇಕಾಗಿದೆ ಎಂದು WHO ಹೇಳಿದೆ. ಇದರೆ ಜೊತೆ ಪೋಲಿಯೋದಿಂದ ಜನರನ್ನು ರಕ್ಷಿಸಲು ಲಸಿಕೆಯೊಂದೇ ಅತ್ಯುತ್ತಮ ಮಾರ್ಗವಾಗಿದೆ ಎಂದು ತಿಳಿಸಿದೆ.

Free Polio Vaccine to who came from Afghan at india : Health Ministry

ಪೋಲಿಯೋ ಮುಕ್ತ ಭಾರತಕ್ಕೆ ದೃಢ ಸಂಕಲ್ಪ:
"ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಸೇರಿದಂತೆ ಇನ್ನೂ ಕೆಲವು ದೇಶಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಅಫ್ಘಾನಿಸ್ತಾನದಿಂದ ಬಂದಿರುವ ಪ್ರಯಾಣಿಕರಿಗೆ ಪೋಲಿಯೋ ಲಸಿಕೆ ಹಾಕುವುದರಿಂದ ವೈರಸ್ ಸೋಂಕಿತ ಜನರಿಂದ ಸುತ್ತಮುತ್ತಲಿನ ಜನರಿಗೆ ಸೋಂಕು ಹರಡುವುದನ್ನು ನಿಯಂತ್ರಿಸಬಹುದು. ಆರೋಗ್ಯ ವ್ಯವಸ್ಥೆಯಲ್ಲಿ ರಾಜಿ ಮಾಡಿಕೊಂಡಿರುವ ಅಫ್ಘಾನಿಸ್ತಾನ ಇಂದಿನ ಈ ಪರಿಸ್ಥಿತಿ ಮುಖ್ಯ ಕಾರಣವಾಗಿದೆ. ಪೋಲಿಯೋ ಮುಕ್ತ ರಾಷ್ಟ್ರ ಎಂಬ ಭಾರತದ ಸ್ಥಾನಮಾನವನ್ನು ಉಳಿಸಿಕೊಳ್ಳುವುದಕ್ಕೆ ಸರ್ಕಾರದ ಕ್ರಮವು ಅತ್ಯಗತ್ಯವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಲಲಿತ್ ಕಾಂತ್ ಹೇಳಿದ್ದಾರೆ.

ಪೋಲಿಯೋ ಮುಕ್ತ ದೇಶವಾದ ಭಾರತ:
ಭಾರತದ ಪಲ್ಸ್ ಪೋಲಿಯೋ ಪ್ರತಿರಕ್ಷಣಾ ಕಾರ್ಯಕ್ರಮವನ್ನು 1994ರ ಅಕ್ಟೋಬರ್ 2ರಂದು ಮೊದಲ ಬಾರಿ ಜಾರಿಗೆ ತರಲಾಯಿತು. ಆಗ ಜಾಗತಿಕ ಪೋಲಿಯೊ ಪ್ರಕರಣಗಳ ಪೈಕಿ ಭಾರತದಲ್ಲೇ ಸುಮಾರು ಶೇಕಡಾ 60ರಷ್ಟಿತ್ತು. ತದನಂತರ ದೇಶಾದ್ಯಂತ ಸಮರೋಪಾದಿಯಲ್ಲಿ ಲಸಿಕೆ ವಿತರಣೆ ಅಭಿಯಾನವನ್ನು ನಡೆಸಲಾಯಿತು. ದಶಕದ ಹಿಂದೆ ಹೌರಾದಲ್ಲಿ ಜನವರಿ 13, 2011ರಂದು ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ವರದಿಯಾಗಿತ್ತು. ಅಂದಿನಿಂದ ದೇಶ ಪೋಲಿಯೋ ಮುಕ್ತವಾಗಿತು.

ಲಸಿಕೆ ವಿತರಣೆ ವ್ಯಾಪ್ತಿ ಹೆಚ್ಚಿಸುವ ಬಗ್ಗೆ ಉಲ್ಲೇಖ:
ಒಂದು ಸಮುದಾಯದ ಬಹುಪಾಲು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಯಶಸ್ವಿಯಾದರೆ ವೈರಸ್ ಪ್ರಮಾಣ ಸಾಯುತ್ತವೆ. ಹೀಗಾಗಿ ನೆರೆರಾಷ್ಟ್ರಗಳಿಂದ ಬದವರು ಸೋಂಕು ಹರಡಿಸುವ ಅಪಾಯ ಇರುವುದಿಲ್ಲ. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಲಸಿಕೆ ಅಭಿಯಾನ ನಡೆಸುವುದರಿಂದ ಏಕಾಏಕಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊವಿಡ್-19 ಭೀತಿಯಲ್ಲಿ ಪೋಲಿಯೋ ಲಸಿಕೆಗೆ ತಡೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ಭೀತಿಯಲ್ಲಿ ಮಕ್ಕಳು ಮತ್ತು ಆರೈಕೆದಾರರಿಗೆ ಪೋಲಿಯೋ ಲಸಿಕೆ ನೀಡುವುದಕ್ಕೆ 2020ರ ಮಾರ್ಚ್ ತಿಂಗಳಿನಲ್ಲಿ ಸ್ಥಗಿತಗೊಳಿಸಲಾಗಿತ್ತು. ಯುನಿಸೆಫ್ ಪ್ರಕಾರ, ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನದಲ್ಲಿ ಪೋಲಿಯೋ ಲಸಿಕೆ ಅಭಿಯಾನವನ್ನು ಪುನರಾರಂಭಿಸಲಾಯಿತು, ಕೋವಿಡ್ -19 ರಿಂದ 50 ಮಿಲಿಯನ್ ಮಕ್ಕಳು ಪೋಲಿಯೋ ಲಸಿಕೆ ಇಲ್ಲದೆ ಉಳಿದಿದ್ದಾರೆ. ಇದರ ಪರಿಣಾಮ ಅಫ್ಘಾನಿಸ್ತಾನದಲ್ಲಿ 34 ಪೋಲಿಯೋ ಪ್ರಕರಣ ವರದಿಯಾಗಿವೆ. 2020ರ ವೇಳೆಗೆ ಪಾಕಿಸ್ತಾನದಲ್ಲಿ 63 ಪೋಲಿಯೋ ಪ್ರಕರಣ ವರದಿಯಾಗಿವೆ, ಈ ಮಧ್ಯೆ ಜುಲೈ 2020 ರಲ್ಲಿ ಅಫ್ಘಾನಿಸ್ತಾನದ ಮೂರು ಪ್ರಾಂತ್ಯಗಳಲ್ಲಿ ಪೋಲಿಯೋ ಪ್ರತಿರಕ್ಷಣಾ ಕಾರ್ಯಕ್ರಮಗಳನ್ನು ಪುನರಾರಂಭಿಸಲಾಗಿದೆ ಎಂದು ಯುನಿಸೆಫ್ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ಲಸಿಕೆ ವಿತರಣೆಗೆ ಅಡ್ಡಿ:
ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳ ನೆರವಿನೊಂದಿಗೆ ಅಫ್ಘಾನಿಸ್ತಾನದಲ್ಲಿ ಪೋಲಿಯೋ ಲಸಿಕಾ ಅಭಿಯಾನವು ಸುಗಮವಾಗಿ ನಡೆಯುತ್ತಿತ್ತು. ಕಳೆದ ಆರು ತಿಂಗಳಲ್ಲಿ ತಾಲಿಬಾನ್ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಲಸಿಕೆ ವಿತರಣೆ ಕಾರ್ಯವೂ ಹಳಿ ತಪ್ಪಿತು. ಈ ಹಿಂದೆ ಅಫ್ಘಆನ್ ಪ್ರಜೆಗಳು ಭಾರತ ಪ್ರವೇಶಿಸಲು ವೀಸಾ ಪಡೆಯಲು ಪೋಲಿಯೋ ಲಸಿಕೆ ಹಾಕಿಸಿಕೊಂಡಿರುವುದೂ ಸಹ ಕಡ್ಡಾಯವಾಗಿತ್ತು. ಈಗ ಭಾರತೀಯ ರಾಯಭಾರ ಕಚೇರಿ ಮುಚ್ಚಿರುವುದರಿಂದ ಆರೋಗ್ಯ ವ್ಯವಸ್ಥೆ ತೀವ್ರ ಒತ್ತಡದಲ್ಲಿದೆ. ಭಾರತ ಪ್ರವೇಶಿಸಿದ ಅಫ್ಘನ್ನರಿಗೆ ಉಚಿತ ಪೋಲಿಯೋ ಲಸಿಕೆ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ "ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅಭಿವೃದ್ಧಿ ಮತ್ತು ಕಾರ್ಮಿಕ ಅಧ್ಯಯನ ವಿದ್ಯಾರ್ಥಿ ಜಲಾಲುದ್ದೀನ್ ಅಕ್ಬರ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+