Get Updates
Get notified of breaking news, exclusive insights, and must-see stories!

ದೀಪಾವಳಿಗೆ ಭರ್ಜರಿ ಗಿಫ್ಟ್‌ ಸಿಗಲಿದೆ ಫ್ರೀ ಸಿಲಿಂಡರ್ ಎಲ್ಲಿ, ಯಾಕೆ

Deepavali Festival: ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಸಂದರ್ಭದಲ್ಲೇ ಜನರಿಗೆ ಅದ್ಭುತವಾದ ಗಿಫ್ಟ್‌ವೊಂದು ಸಿಕ್ಕಿದೆ. ಈಗಾಗಲೇ ದೇಶದ ವಿವಿಧ ಭಾಗದಲ್ಲಿ ಗ್ಯಾಸ್‌ ಸಿಲಿಂಡರ್‌ ಬೆಲೆ ಗಗನಮುಖಿಯಾಗಿದೆ. ಈ ನಡುವೆ ಈ ರಾಜ್ಯದಲ್ಲಿ ಗ್ಯಾಸ್‌ ಸಿಲಿಂಡರ್‌ ಉಚಿತವಾಗಿ ನೀಡುವ ಮೂಲಕ ದೀಪವಾವಳಿಗೆ ಭರ್ಜರಿ ಗಿಫ್ಟ್‌ ನೀಡಲಾಗುತ್ತಿದೆ.

ದೀಪಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಆಂಧ್ರಪ್ರದೇಶದ ಜನರಿಗೆ ಭರ್ಜರಿ ಗಿಫ್ಟ್‌ ಸಿಕ್ಕಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಅರ್ಹ ಫಲಾನುಭವಿ ಮಹಿಳೆಯರಿಗೆ ಉಚಿತವಾಗಿ ಅಡುಗೆ ಅನಿಲ (ಗ್ಯಾಸ್‌ ಸಿಲಿಂಡರ್‌) ಸಿಲಿಂಡರ್‌ ನೀಡಲಾಗುತ್ತಿದೆ. ಈ ಯೋಜನೆಗೆ ದೀಪಂ ಎಂದು ಹೆಸರಿಡಲಾಗಿದೆ. ಆಂಧ್ರಪ್ರದೇಶದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ದೀಪಂ ಯೋಜನೆಗೆ ಅಕ್ಟೋಬರ್‌ 31ರಂದು ಚಾಲನೆ ನೀಡುವುದಕ್ಕೆ ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದ್ದು, ದೀಪವಾಳಿಗೆ ಈ ರಾಜ್ಯದ ಜನರಿಗೆ ಭರ್ಜರಿ ಗಿಫ್ಟ್‌ ಸಿಕ್ಕಂತಾಗಿದೆ.

Free cylinder will get great gift for Diwali where and why

ಚುನಾವಣೆ ಭರವಸೆ: ಆಂಧ್ರಪ್ರದೇಶದಲ್ಲಿ ಈಚೆಗೆ ವಿಧಾನಸಭೆ ಚುನಾವಣೆ ನಡೆದಿದ್ದು, ತೆಲುಗುದೇಶಂ ಪಾರ್ಟಿ ಹಾಗೂ ಜನಸೇನಾ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಚುನಾವಣೆಗೂ ಮುಂಚೆ ಟಿಡಿಪಿ ಹಲವು ಪ್ರಮುಖ ಭರವಸೆಗಳನ್ನು ನೀಡಿತ್ತು. ಅದರಲ್ಲಿ ಪ್ರತಿ ವರ್ಷ ಅರ್ಹ ಮಹಿಳೆಯರಿಗೆ ಮೂರು ಗ್ಯಾಸ್‌ ಸಿಲಿಂಡರ್‌ಗಳನ್ನು ನೀಡುವುದು ಸಹ ಸೇರಿದೆ. ಈ ಭರವಸೆಗಳನ್ನು ಇದೀಗ ಈಡೇರಿಸಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ.

ಚುನಾವಣೆಗೂ ಮುಂಚೆ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಮೂರು ಗ್ಯಾಸ್‌ ಸಿಲಿಂಡರ್‌ ಸೇರಿದಂತೆ ಆರು ಪ್ರಮುಖ ಭರವಸೆಗಳನ್ನು ನೀಡಿತ್ತು. ಈಚೆಗೆ ಸಭೆ ನಡೆಸಿರುವ ಚಂದ್ರಬಾಬು ನಾಯ್ಡು ಅವರು ಅಮರಾವತಿಯ ಸಿಬ್ಬಂದಿ ಸಚಿವಾಲಯದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಗ್ಯಾಸ್‌ ಸಿಲಿಂಡರ್‌ ನೀಡುವ ಸಂಬಂಧ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿತ್ತು. ಆ ಸೂಚನೆಗಳನ್ನು ಇದೀಗ ಪರಿಶೀಲನೆ ಮಾಡಲಾಗಿದೆ.

ವಿರೋಧ ಪಕ್ಷಗಳು ಪ್ರಶ್ನಿಸಿದ್ದವು: ಚುನಾವಣೆ ಪೂರ್ವದಲ್ಲಿ ನೀಡಿದ್ದ ಆರು ಪ್ರಮುಖ ಭರವಸೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಂಧ್ರಪ್ರದೇಶದ ವಿರೋಧ ಪಕ್ಷಗಳು ಆರೋಪಿಸಿದ್ದವು. ಅಲ್ಲದೇ ಆಂಧ್ರಪ್ರದೇಶದಲ್ಲಿ ಚುನಾವಣೆ ವೇಳೆ ಚಂದ್ರಬಾಬು ನಾಯ್ಡು ಅವರು ಭಾರೀ ದೊಡ್ಡ ದೊಡ್ಡ ಭರವಸೆಗಳನ್ನೇ ನೀಡಿದ್ದರು. ಆದರೆ, ಅವುಗಳನ್ನು ಸಾಕಾರಗೊಳಿಸದೆ ಲಡ್ಡು ವಿವಾದವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ನ ಜಗನಗಗ ಮೋಹನ್‌ ರೆಡ್ಡಿ ಅವರು ದೂರಿದ್ದರು.

ಆಂಧ್ರಪ್ರದೇಶದಲ್ಲಿ ಚುನಾವಣೆ ಪೂರ್ವದಲ್ಲಿ ನೀಡಿದ್ದ ಆರು ಪ್ರಮುಖ ಭರವಸೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಅವರು ಒತ್ತಾಯ ಮಾಡಿದ್ದರು.

ಆಂಧ್ರಪ್ರದೇಶದಲ್ಲಿ ಆರು ಪ್ರಮುಖ ಭರವಸೆಗಳನ್ನು ನೀಡಿಯೇ ತೆಲುಗುದೇಶಂ ಪಕ್ಷವು ಚುನಾವಣೆಯಲ್ಲಿ ಸ್ಪರ್ಧೆ ಮಾಡಿತ್ತು. ಈ ಬಾರಿ ತೆಲುಗುದೇಶಂ ಪಾರ್ಟಿ ಹಾಗೂ ಆಂಧ್ರಪ್ರದೇಶದ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಪಾರ್ಟಿ ಭರ್ಜರಿ ಜಯಗಳಿಸಿದೆ. ವೈಎಸ್‌ಆರ್‌ ಕಾಂಗ್ರೆಸ್‌ ಈ ಬಾರಿ ನೆಲಕ್ಕಚ್ಚಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+