ಮುಂಬೈ: ಹುಟ್ಟುಹಬ್ಬದ ಪಾರ್ಟಿ ಬಿಲ್‌ಗಾಗಿ ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ
ಮುಂಬೈ, ಜೂನ್. 06: ಹುಟ್ಟುಹಬ್ಬದ ಪಾರ್ಟಿಯಲ್ಲಿ ಊಟದ ಬಿಲ್ ಹಂಚಿಕೊಳ್ಳುವ ಜಗಳದಲ್ಲಿ 20 ವರ್ಷದ ಯುವಕನನ್ನು ಆತನ ನಾಲ್ವರು ಸ್ನೇಹಿತರು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ.
ನಾಲ್ವರು ಆರೋಪಿಗಳಲ್ಲಿ, ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳು ಅಪ್ರಾಪ್ತರಾಗಿದ್ದ ಕಾರಣ ಅವರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮೃತನ ಹುಟ್ಟುಹಬ್ಬವು ಮೇ 31 ರಂದು ನಡೆದಿದೆ. ಆ ದಿನ ಮುಂಬೈನ ಶಿವಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋವಂಡಿಯಲ್ಲಿರುವ ಡಾಬಾದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಪಾರ್ಟಿ ಮಾಡಿದ್ದಾನೆ.

ಪಾರ್ಟಿ ಮಾಡಿದ ನಂತರ ಸುಮಾರು 10,000 ರೂಪಾಯಿ ಬಿಲ್ ಬಂದಿದೆ. ಎಲ್ಲಾ ಹಣವನ್ನು ಮೃತರೇ ಪಾವತಿ ಮಾಡಿದ್ದಾರೆ. ನಂತರ ಆತನಿಗೆ ಹಣ ಕೊಡುವುದಾಗಿ ಉಳಿದ ಸ್ನೇಹಿತರು ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆದರೆ, ಬಳಿಕ ಸಂತ್ರಸ್ತ ತನ್ನ ಸ್ನೇಹಿತರ ಬಳಿ ಹಣ ಕೇಳಿದಾಗ ಹಣ ಕೊಡಲು ನಿರಾಕರಿಸಿ ಬೆದರಿಕೆ ಹಾಕಿದ್ದಾರೆ.
ಇದಾದ ನಂತರ ಗಲಾಟೆ ಹೆಚ್ಚಾಗಿದ್ದು, ಎಲ್ಲಾ ನಾಲ್ವರು ಆರೋಪಿಗಳು ಸಂತ್ರಸ್ತನನ್ನು ಥಳಿಸಿ, ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಆತ ತೀವ್ರವಾಗಿ ಗಾಯಗೊಂಡಿದ್ದಾರೆ. ಗಲಾಟೆ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ನೀಡುವ ಮುನ್ನವೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಕೊಲೆಯ ನಂತರ, ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಲಾಯಿತು. ಇದಾದ ಬಳಿಕ ತಲೆಮರೆಸಿಕೊಂಡಿದ್ದ ಇತರ ಇಬ್ಬರು ಆರೋಪಿಗಳನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಂಧಿಸಲಾಗಿದೆ.












Click it and Unblock the Notifications