ಪಂಜಾಬ್ ನ ಮಾಜಿ ಸೂಪರ್ ಕಾಪ್ ಕೆಪಿಎಸ್ ಗಿಲ್ ನಿಧನ

1988ರಿಂದ 1995ರ ಅವಧಿಯಲ್ಲಿ ಎರಡು ಬಾರಿ ಪಂಜಾಬ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರುವಲ್ಲಿ ಬಹುವಾಗಿ ಶ್ರಮಿಸಿದ್ದ ಕೆಪಿಎಸ್ ಗಿಲ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದ

ನವದೆಹಲಿ, ಮೇ 26: 80 ಹಾಗೂ 90ರ ದಶಕದಲ್ಲಿ ಪಂಜಾಬ್ ರಾಜ್ಯದ ಸೂಪರ್ ಕಾಪ್ ಎಂದೇ ಖ್ಯಾತರಾಗಿದ್ದ ಕೆಪಿಎಸ್ ಗಿಲ್ (82) ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದಾಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಶುಕ್ರವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

Former Punjab DGP KPS Gill passes away at 82

ಪಂಜಾಬ್ ರಾಜ್ಯಕ್ಕೆ ಎರಡು ಬಾರಿ (1980-1990 ಹಾಗೂ 1991-1995) ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅವರು ಪಂಜಾಬ್ ರಾಜ್ಯದಲ್ಲಿ ಆಗಿನ ಕಾಲಘಟ್ಟದಲ್ಲಿ ಹೇರಳವಾಗಿದ್ದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಿದ ಹಿರಿಮೆ ಅವರದ್ದು.

ಪೊಲೀಸ್ ಸೇವೆಯಿಂದ 1995ರಲ್ಲಿ ನಿವೃತ್ತಿಯಾದ ನಂತರ, ಅವರು ಆಂತರಿಕ ಗಲಭೆ ನಿರ್ವಹಣಾ ಸಂಸ್ಥೆಯ ಅಧ್ಯಕ್ಷರಾಗಿಯೂ, ಭಾರತೀಯ ಹಾಕಿ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿನ ಅವರ ಸೇವೆಯನ್ನು ಗುರುತಿಸಿ 1989ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಗೌರವ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+