• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಲ್ವಾರ್ ನಿಂದ ಮನುಷ್ಯನನ್ನು ಯಾಕೆ ಕೊಲ್ಲಲು ಸಾಧ್ಯವಿಲ್ಲ: ಭಾರತದ ವಿರುದ್ದ ಮಿಯಾಂದಾದ್

|

ಇಸ್ಲಾಮಾಬಾದ್, ಸೆ 1: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆದ ಭಾರತದ ವಿರುದ್ದ ಕಿಡಿಕಾರಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಹತ್ತಿರದ ನೆಂಟ ಜಾವೇದ್ ಮಿಯಾಂದಾದ್, ಅಸಂಬದ್ದ ಪದವನ್ನು ಬಳಸಿದ್ದಾರೆ.

ಈ ಸಂಬಂಧದ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಮಿಯಾಂದಾದ್, " ಜಮ್ಮು ಮತ್ತು ಕಾಶ್ಮೀರದ ನಾಗರೀಕರೆ, ನೀವು ತಲೆಕೆಡಿಸಿಕೊಳ್ಳಬೇಡಿ, ನಿಮ್ಮ ಜೊತೆ ನಾವೆಲ್ಲಾ ಇದ್ದೇವೆ" ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ 'ಗೂಗ್ಲಿ'ಗೆ ರಾಜನಾಥ್ ಸಿಂಗ್ 'ರಿವರ್ಸ್ ಸ್ವೀಪ್'

ಜೊತೆಗೆ, " ನನ್ನ ಬಳಿ ಬ್ಯಾಟ್ ಇತ್ತು, ಸಿಕ್ಸ್ ಹೊಡೆದಿದ್ದೆ, ಈಗ ನನ್ನ ಬಳಿ ತಲ್ವಾರ್ ಇದೆ. ಇನ್ನು ಮುಂದೆ ಇದನ್ನೇ (ಕತ್ತಿ) ಪ್ರಯೋಗಿಸುತ್ತೇನೆ. ಬ್ಯಾಟ್ ನಿಂದ ಸಿಕ್ಸ್ ಹೊಡೆಯಬಹುದಾದರೆ, ಕತ್ತಿಯಿಂದ ಮನುಷ್ಯನನ್ನು ಯಾಕೆ ಕೊಲ್ಲಲು ಸಾಧ್ಯವಿಲ್ಲ" ಎಂದು ಜಾವೇದ್ ಮಿಯಾಂದಾದ್ ಹೇಳಿದ್ದಾರೆ.

370 ವಿಧಿ ರದ್ದತಿಗೊಳಿಸಿದ ನಂತರ ಇದಕ್ಕೆ ಪ್ರತಿಕ್ರಿಯಿಸಿದ್ದ ಜಾವೇದ್ ಮಿಯಾಂದಾದ್, " ನಮ್ಮಲ್ಲಿ ಅಣ್ವಸ್ತ ಇರುವುದು ಸುಮ್ಮನೆ ಇಟ್ಟುಕೊಳ್ಳಲು ಅಲ್ಲ. ಅವಶ್ಯಕತೆ ಬಿದ್ದರೆ, ಅದನ್ನು ಪ್ರಯೋಗಿಸಿ, ಭಾರತವನ್ನು ಸರ್ವನಾಶ ಮಾಡುತ್ತೇವೆ" ಎನ್ನುವ ಹೇಳಿಕೆಯನ್ನು ನೀಡಿದ್ದರು.

" ಕಾಶ್ಮೀರದ ಮೇಲೆ ಭಾರತ ನಡೆಸುತ್ತಿರುವ ದೌರ್ಜನ್ಯವನ್ನು ತಡೆಯದಿದ್ದಲ್ಲಿ, ಎರಡು ಅಣ್ವಸ್ತ್ರ ರಾಷ್ಟ್ರಗಳು ಯುದ್ದಕ್ಕೆ ಇಳಿಯುವುದು ನಿಶ್ಚಿತ" ಎಂದು ಇಮ್ರಾನ್ ಖಾನ್ ಹೇಳಿದ್ದರು.

ಪಾಕ್ ಮುಖಂಡನ ಬಾಯಲ್ಲಿ 'ಸಾರೇ ಜಹಾಂ ಸೆ ಅಚ್ಛಾ

ಇದಕ್ಕೆ ತಿರುಗೇಟು ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಅಣ್ವಸ್ತ್ರವನ್ನು ನಾವು ಮೊದಲು ಬಳಸುವುದಿಲ್ಲ ಎನ್ನುವ ನಮ್ಮ ನಿಲುವಿಗೆ ನಾವು ಬದ್ದರಾಗಿದ್ದೇವೆ. ಆದರೆ, ಈ ನೀತಿ ಪರಿಸ್ಥಿತಿಯನ್ನು ನೋಡಿ ಬದಲಾಯಿಸ ಬೇಕಾಗಿ ಬರಬಹುದು" ಎನ್ನುವ ಎಚ್ಚರಿಕೆಯನ್ನು ನೀಡಿದ್ದರು.

1986ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾ - ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿತ್ತು. ಚೇತನ್ ಶರ್ಮಾ ಅವರ ಕೊನೆಯ ಬಾಲಿನಲ್ಲಿ ಜಾವೇದ್ ಮಿಯಾಂದಾದ್ ಸಿಕ್ಸರ್ ಹೊಡೆಯುವ ಮೂಲಕ, ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟಿದ್ದರು. ಇದನ್ನೇ ಮೇಲಿನ ಹೇಳಿಕೆಯಲ್ಲಿ ಪರೋಕ್ಷವಾಗಿ ಮಿಯಾಂದಾದ್ ಉಲ್ಲೇಖಿಸಿದ್ದು.

English summary
Former Pakistan Cricket Captain and close relative of underworld don Dawood Ibhrahim, Javed Miandad Brandishes Sword, Vows To Kill For Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X