ಕೆಲಸ ಕಳೆದುಕೊಂಡ ಸೇಡಿಗೆ ತನ್ನದೇ ಕಂಪನಿಯಲ್ಲಿ 21 ಲಕ್ಷ ದರೋಡೆ ಮಾಡಿದ ಮಾಜಿ ಉದ್ಯೋಗಿ: ಮಕ್ಕಳು ಆಡುವ ಗನ್ ವಶಕ್ಕೆ!

ಅಕಸ್ಮಾತ್ ಕೆಲಸ ಕಳೆದುಕೊಂಡರೆ ಒಬ್ಬ ಮಾಜಿ ಉದ್ಯೋಗಿ ಏನು ಮಾಡಬಹದು ಹೇಳಿ? ಹೆಚ್ಚು ಹೆಚ್ಚು ಅಂದ್ರೆ ಒಂದು ಕೇಸ್ ಹಾಕಬಹುದು. ಇದನ್ನೂ ಮೀರಿ ಕಂಪನಿಗೆ ಹೋಗಿ, ಗಲಾಟೆ ಮಾಡಬಹುದು. ಆದರೆ ಇಲ್ಲೊಬ್ಬ ಮಹಾಶಯ ತನ್ನನ್ನು ಕೆಲಸದಿಂದ ತೆಗೆದಿದ್ದಕ್ಕೆ ಏನು ಮಾಡಿದ್ದಾನೆ ಗೊತ್ತಾ? ಮಾಡಬಾರದ್ದನ್ನು ಮಾಡಿ ಮಾಜಿ ಉದ್ಯೋಗಿ ಇದೀಗ ಜೈಲು ಸೇರಿದ್ದೇಕೆ? ಸಖತ್ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ಮುಂದೆ ಓದಿ.

ಹೌದು, ತನನ್ನು ಕೆಲಸದಿಂದ ವಜಾ ಮಾಡಿದಕ್ಕೆ ರೊಚ್ಚಿಗೆದ್ದಿದ್ದ ಖಾಸಗಿ ಕಂಪನಿಯ ಒಬ್ಬ ಉದ್ಯೋಗಿ ಮಾಡಬಾರದ ಕೃತ್ಯ ಮಾಡಿದ್ದಾನೆ. ಫ್ಲಿಪ್‌ಕಾರ್ಟ್ ಅತೃಪ್ತ ಉದ್ಯೋಗಿ ಮಾಡಿದ ಕೃತ್ಯ ಈಗ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಹಿಂದಿನ ಕಂಪನಿ ಮೇಲೆ ಮುನಿಸಿಕೊಂಡಿದ್ದ ಮಾಜಿ ಉದ್ಯೋಗಿ ಒಬ್ಬ ಅದೇ ಕಂಪನಿಗೆ ನುಗ್ಗಿದ್ದಾನೆ. ಸಹಚರರ ಜೊತೆ ಸೇರಿ ದರೋಡೆ ಕೂಡ ಮಾಡಿದ್ದಾನಂತೆ. ಇಂತಹ ವಿಲಕ್ಷಣವಾದ & ವಿಚಿತ್ರವಾದ ಘಟನೆ ನಡೆದಿರುವುದು ಹರಿಯಾಣದ ಸೋನಿಪತ್‌ ಪ್ರದೇಶದಲ್ಲಿ.

former-flipkart-employee-robs-rs-21-lakhs-cash

21 ಲಕ್ಷ ರೂಪಾಯಿ ದರೋಡೆ!

ಅಂದಹಾಗೆ ಈ ಕೇಸ್ ಸಂಬಂಧ ಈಗ ಮೂವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಅಂದ್ರೆ ಈ ದರೋಡೆ ರೂವಾರಿಯಾದ ಮಾಜಿ ಉದ್ಯೋಗಿ ಸುಮಿತ್ ಎಂಬಾತ ಸೇರಿ ಆತನ ಇಬ್ಬರು ಸಹಚರರಾದ ಸಂದೀಪ್ & ಅನಿಲ್ ಪೈಕಿ ಇಬ್ಬರು ಅರೆಸ್ಟ್ ಆಗಿದ್ದಾರೆ. ಈ ಮೂವರು ಮಕ್ಕಳು ಆಡುವ ಗನ್ ಹಿಡಿದು ತಮ್ಮ ಹಿಂದಿನ ಕಂಪನಿಗೆ ನುಗ್ಗಿ ದರೋಡೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪಿ ಇಬ್ಬರ ಜೊತೆಗೆ ಕಳೆದ ತಿಂಗಳು ಫ್ಲಿಪ್‌ಕಾರ್ಟ್‌ನ ಸೋನಿಪತ್ ಕಚೇರಿಗೆ ನುಗ್ಗಿದ್ದ. ಟಾಯ್ ಗನ್ ಬಳಸಿ 21 ಲಕ್ಷ ರೂಪಾಯಿ ಮೌಲ್ಯದ ನಗದನ್ನ ದೋಚಿದ್ದ ಅಂತಾ ಆರೋಪ ಮಾಡಲಾಗಿದೆ. ಮೂವರ ಪೈಕಿ ಇನ್ನೂಬ್ಬ ಇದೀಗ ಎಸ್ಕೇಪ್ ಆಗಿದ್ದು, ಪೊಲೀಸ್ ಪಡೆ ಆತನಿಗೆ ಬಲೆ ಬೀಸಿದೆ.

ಕೆಲಸದಿಂದ ವಜಾ ಮಾಡಿದ್ದಕ್ಕೆ ರಿವೇಂಜ್?

ಇನ್ನು ಪ್ರಮುಖ ಆರೋಪಿಯನ್ನ ಸೆಪ್ಟೆಂಬರ್‌ನಲ್ಲಿ ಕೆಲಸದಿಂದ ವಜಾ ಮಾಡಿದ್ದರು ಅಂತಾ ಹೇಳಲಾಗಿದೆ. ಇದೇ ಕಾರಣಕ್ಕೆ ರೊಚ್ಚಿಗೆದ್ದಿದ್ದ ಈತ ತನ್ನ ಸಹಚರರ ಜೊತೆಗೆ ಸೇರಿ ಇಂಥ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಪೊಲೀಸರು ಹೇಳಿದಂತೆ ಆರೋಪಿ ಸುಮಿತ್ ಕಚೇರಿಯಲ್ಲಿನ ಹಣದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿದ್ದನಂತೆ. ಅಕ್ಟೋಬರ್ 16 ರಂದು ಸ್ಕೆಚ್ ಹಾಕಿ ಕಚೇರಿಗೆ ನುಗ್ಗಿ ಕೃತ್ಯ ಎಸಗಿದ್ದ ಎಂದು ಆರೋಪ ಮಾಡಲಾಗಿದೆ.

ಈ ಸಂಬಂಧ ಈಗ ಆರೋಪಿಗಳನ್ನ ಬಂಧಿಸಿರುವ ಪೊಲೀಸ್ ಪಡೆ ಒಟ್ಟು 6.3 ಲಕ್ಷ ರೂ. ಹಣ ಸೇರಿದಂತೆ ಒಂದು ಕಾರು, ಆಟವಾಡುವ ಗನ್ ಮತ್ತು ಕೊಡಲಿ ವಶಕ್ಕೆ ಪಡೆದಿದೆ. ಈ ಘಟನೆ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಜೊತೆಗೆ ಇಂತಹ ಕೃತ್ಯ ಎಸಗಿದ ಆರೋಪಿ ಬಗ್ಗೆ ಕಮೆಂಟ್‌ಗಳ ಸುರಿಮಳೆ ಸುರಿಯುತ್ತಿದೆ. ಆದರೆ ಕೆಲಸ ಹೋದ್ರು ಪರವಾಗಿಲ್ಲ ಅಂತಾ ನಿಯತ್ತಿನ ಹಾದಿಯಲ್ಲಿ ಇರುವುದು ಬಿಟ್ಟು, ಈಗ ಈ ಕಿರಾತಕ ತನ್ನ ತಪ್ಪಿನಿಂದಾಗಿ ಜೈಲು ಸೇರಿ ಕಂಬಿ ಎಣಿಸುವಂತಾಗಿದ್ದು ಮಾತ್ರ ದುರಂತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+