ಮಾಜಿ ರಾಜ್ಯಸಭಾ ಸದಸ್ಯ, ಪತ್ರಕರ್ತ ಚಂದನ್ ಮಿತ್ರಾ ನಿಧನ

ನವದೆಹಲಿ, ಸೆಪ್ಟೆಂಬರ್ 2: ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಪತ್ರಕರ್ತ ಚಂದನ್ ಮಿತ್ರಾ (65) ಬುಧವಾರ ತಡರಾತ್ರಿ ನಿಧನರಾಗಿದ್ದಾರೆ.

'ನನ್ನ ತಂದೆ ಬುಧವಾರ ತಡರಾತ್ರಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು' ಎಂದು ಅವರ ಪುತ್ರ ಕುಶನ್ ಮಿತ್ರಾ ಟ್ವೀಟ್ ಮಾಡಿದ್ದಾರೆ.

ರಾಜ್ಯಸಭಾ ಸದಸ್ಯರಾಗಿದ್ದ ಚಂದನ್ ಮಿತ್ರಾ, ಹಲವು ವರ್ಷಗಳ ಕಾಲ 'ದಿ ಪಯೊನಿಯರ್' ಪತ್ರಿಕೆ ಸಂಪಾದಕರಾಗಿದ್ದರು. ಎರಡು ಬಾರಿ ರಾಜ್ಯ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೊದಲಿಗೆ 2003 ರಿಂದ 2009ರವರೆಗೆ ನಾಮನಿರ್ದೇಶಿತ ಸಂಸದರಾಗಿ ಹಾಗೂ 2010ರಿಂದ 2016ರವರೆಗೆ ಮಧ್ಯಪ್ರದೇಶದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.

Former BJP MP Senior Journalist Chandan Mitra Passes Away

2018ರಲ್ಲಿ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ್ದರು. ಬಿಜೆಪಿಯ ಹಿರಿಯ ನಾಯಕ ವಾಜಪೇಯಿ ಹಾಗೂ ಎಲ್‌.ಕೆ. ಅಡ್ವಾಣಿಯವರಿಗೆ ಆಪ್ತರಾಗಿದ್ದರು.

ಪ್ರಧಾನಿ ಮೋದಿ ಸಂತಾಪ
ಚಂದನ್ ಮಿತ್ರಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 'ಚಂದನ್ ಮಿತ್ರಾ ಅವರು ತಮ್ಮ ಬೌದ್ಧಿಕ ಶಕ್ತಿ ಹಾಗೂ ಒಳನೋಟಗಳಿಂದ ಜನಮಾನಸದಲ್ಲಿ ಉಳಿಯುತ್ತಾರೆ. ಇಂಥ ವೈಶಿಷ್ಟ್ಯದ ಮೂಲಕ ಮಾಧ್ಯಮ ಹಾಗೂ ರಾಜಕೀಯ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ತುಂಬಾ ಬೇಸರವಾಗಿದೆ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಸಾಂತ್ವನ ಹೇಳುತ್ತೇನೆ' ಪ್ರಧಾನಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+