ಯಾಸಿನ್ ಬಾಂಬ್ ತಯಾರಿಕೆಗೆ ಶಿವಮೊಗ್ಗದ ಸಿಲ್ವರ್ ವುಡ್!

By: ವಿಕಾಸ್ ನಂಜಪ್ಪ
Subscribe to Oneindia Kannada

ಅಹ್ಮದಾಬಾದ್, ಏಪ್ರಿಲ್ 14: "ಬಾಂಬ್ ತಯಾರಿಕೆಯೂ ಒಂದು ಕಲೆ, ನಾನು ಶಿವಮೊಗ್ಗದ ಸಿಲ್ವರ್ ವುಡ್ ಅನ್ನು ಬಾಂಬ್ ತಯಾರಿಕೆಗೆ ಬಳಸುತ್ತಿದ್ದೆ" ಎಂಬ ಆಘಾತಕಾರಿ ಮಾಹಿತಿಯನ್ನು ಇಂಡಿಯನ್ ಮುಜಾಹಿದ್ದಿನ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಯಾಸಿನ್ ಭಟ್ಕಳ್ ಹೊರಹಾಕಿದ್ದಾನೆ.

ಸದ್ಯಕ್ಕೆ ಅಹ್ಮದಾಬಾದಿನ ಸಾಬರಮತಿ ಜೈಲಿನಲ್ಲಿರುವ ಭಟ್ಕಳ್ ವಿಚಾರಣೆಗೊಳಪಟ್ಟ ಸಂದರ್ಭದಲ್ಲಿ ಹಲವು ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದಾನೆ.[ಹಳೆ ನೋಟುಗಳಿಂದ ದಂಡ ಕಟ್ಬಹುದಾ ಅಂತಾನೆ ಯಾಸಿನ್!]

For Yasin Bhatkal, preparing bombs was a passion

ಬಾಂಬ್ ತಯಾರಿಕೆಯ ಕುರಿತು ಆತ ಎಂದಿಗೂ ಅಂತರ್ಜಾಲದಲ್ಲಿ ಮಾಹಿತಿ ಹುಡುಕುತ್ತಿರಲಿಲ್ಲ. ಏಕೆಂದರೆ ತಂತ್ರಜ್ಞಾನ ಯಾವತ್ತಿದ್ದರೂ ಅಪಾಯಕಾರಿ, ನಾವಿರುವ ಸ್ಥಳವನ್ನು ಪತ್ತೆ ಮಾಡುವುದಕ್ಕೆ ಅದು ಸುಲಭ ವಿಧಾನ, ಅದಕ್ಕೆಂದೇ ತಾನು ಯಾರಿಗೂ ಕರೆಯನ್ನೂ ಮಾಡುತ್ತಿರಲಿಲ್ಲ, ಅಂತರ್ಜಾಲವನ್ನೂ ಬಳಸುತ್ತಿರಲಿಲ್ಲ ಎಂದು ಭಟ್ಕಳ್ ಹೇಳಿದ್ದಾನೆ.[ಅವನು ಯಾಸಿನ್ ಅಲ್ಲ, ಅಹ್ಮದ್: ಉಗ್ರ ಭಟ್ಕಳ್ ತಾಯಿ]

2008 ರಲ್ಲಿ ಅಹ್ಮದಾಬಾದ್ ನಲ್ಲಿ 21 ಕಡೆ ಸರಣಿ ಬಾಂಬ್ ಸ್ಫೋಟಿಸುವಾಗ ಬಳಸಿದ ಬಾಂಬ್ ಅನ್ನು ಶಿವಮೊಗ್ಗದ ಸಿಲ್ವರ್ ವುಡ್ ನಿಂದಲೇ ತಯಾರಿಸಲಾಗಿತ್ತಂತೆ! ಅಷ್ಟೇ ಅಲ್ಲ, ಬಾಂಬಿಗೆ ಬಳಸುವ ಅಲ್ಯುಮಿನಿಯಂ ಹಾಳೆಯನ್ನು ಉಡುಪಿಯಿಂದ ಪಡೆಯಲಾಗುತ್ತಿತ್ತಂತೆ!

ತಾನು ಫೋನ್ ಕರೆ ಮಾಡಿದರೆ ಸಿಕ್ಕಿಹಾಕಿಕೊಳ್ಳುವ ಸಂಭವ ಹೆಚ್ಚು ಎಂದು ಆತ ಯಾವತ್ತಿಗೂ, ಫೋನ್ ಕರೆ ಮಾಡುತ್ತಲೇ ಇರಲಿಲ್ಲ, ಆದರೂ ನೂರಾರು ಅಮಾಯಕರ ಸಾವಿಗೆ ಕಾರಣನಾಗಿದ್ದ ಆತನ ಪಾಪದ ಕೊಡ ಒಂದಲ್ಲ ಒಂದು ದಿನ ತುಂಬಲೇ ಬೇಕಲ್ಲ! ದುರದೃಷ್ಟಕ್ಕೆ 2013 ರ ಆಗಸ್ಟ್ ನಲ್ಲಿ ನೇಪಾಳದಲ್ಲಿದ್ದ ಆತ ಯಾವುದೂ ತುರ್ತು ಕೆಲಸಕ್ಕಾಗಿ ತನ್ನ ಪತ್ನಿಗೆ ಕರೆ ಮಾಡಿದ್ದ. ಗುಪ್ತಚರ ಇಲಾಖೆಗೆ ಇಷ್ಟೇ ಸಾಕಾಯ್ತು. 2013 ಆಗಸ್ಟ್ 28ರಂದು ಭಾರತ-ನೇಪಾಳದ ಗಡಿಯಲ್ಲಿ ಆತನನ್ನು ಬಂಧಿಸಲಾಯ್ತು.

ಆತನನ್ನು ಬಂಧಿಸುವ ಆರು ವರ್ಷ ಮೊದಲೇ, ಅಂದರೆ 2007 ರಲ್ಲೇ ಗುಪ್ತಚರ ಇಲಾಖೆಗೆ ಆತ ಶಿವಮೊಗ್ಗದ ಸಿಲ್ವರ್ ವುಡ್ ಅನ್ನು ಕೊಂಡೊಯ್ಯುತ್ತಿರುವ ಮಾಹಿತಿ ಸಿಕ್ಕಿತ್ತು. ಆತನನ್ನು ಬಂಧಿಸುವುದಕ್ಕೆ ಪೊಲೀಸರೂ ಸನ್ನದ್ಧರಾಗಿದ್ದರು. ಆದರೆ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬ ಈ ವಿಷಯವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಬಿಟ್ಟಿದ್ದ. ಹಸಿದುಕೊಂಡಿದ್ದ ಮಾಧ್ಯಮಗಳೂ ಅದನ್ನು ಎಲ್ಲೆಡೆ ಪ್ರಸಾರ ಮಾಡಿದ್ದವು.

ಯಾಸಿನ್ ಭಟ್ಕಳ್ ಎಂಬ ಮೋಸ್ಟ್ ವಾಂಟೆಂಡ್ ಭಯೋತ್ಪಾದಕ ಸುಲಭವಾಗಿ ತಪ್ಪಿಸಿಕೊಳ್ಳುವುದಕ್ಕೆ ಅಂದು ಸಹಾಯ ಮಾಡಿದ್ದು ಇದೇ ಮಾಧ್ಯಮಗಳು! ನಂತರ ಆರು ವರ್ಷದವರೆಗೆ ಆತನನ್ನು ಹಿಡಿಯುವುದಕ್ಕೆ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲೇ ಆತ ಅಹ್ಮದಾಬಾದ್, ಬೆಂಗಳೂರು, ಪುಣೆ ಸೇರಿದಂತೆ ಹಲವೆಡೆ ಬಾಂಬ್ ಸ್ಫೋಟಿಸಿ ಹಲವು ಅಮಾಯಕರ ಸಾವಿಗೆ ಕಾರಣವಾಗಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
For Yasin Bhatkal, preparing bombs was a passion and he often told his aides that it is an art. He had come up with innovative methods to prepare the bombs and had even sourced silver wood from Karnataka to prepare the explosives.
Please Wait while comments are loading...