ವಿಚ್ಛೇದನದ ವೇಳೆ ಅಗತ್ಯವಿದ್ದರೆ ಮಾತ್ರ ಕೂಲಿಂಗ್ ಆಫ್ ಅವಧಿ: ಸುಪ್ರೀಂ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 12: ವಿಚ್ಛೇದನ ನೀಡಲಿಚ್ಛಿಸುವ ಹಿಂದೂ ದಂಪತಿಗಳಿಗೆ ಸಾಮಾನ್ಯವಾಗಿ ನೀಡಲಾಗುವ 6 ತಿಂಗಳ ಕೂಲಿಂಗ್ ಆಫ್ ಅವಧಿಯನ್ನು ಅಗತ್ಯವಿದ್ದರೆ ಮಾತ್ರ ವಿಧಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಾಮಾನ್ಯವಾಗಿ ವಿಚ್ಛೇದನ ಬಯಸುವ ದಂಪತಿಗಳು ಕೌಟುಂಬಿಕ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ ತರುವಾಯ ವಿಚ್ಛೇದನ ಪಡೆಯಲು ಸುಮಾರು ಒಂದೂವರೆ ವರ್ಷದವರೆಗೆ ಕಾಯಬೇಕಿದೆ.

For Divorce, Supreme Court Changes 6-Month 'Cooling Off' Rule

ಇದರಲ್ಲಿ ಒಂದು ವರ್ಷದ ಅವಧಿಯು ಪ್ರತ್ಯೇಕವಾಗಿ ವಾಸಿಸುವುದು ಹಾಗೂ ಇನ್ನು ಆರು ತಿಂಗಳ ಅವಧಿಯನ್ನು ಕೂಲಿಂಗ್ ಅವಧಿಯೆಂತಲೂ ಪರಿಗಣಿಸಲಾಗುತ್ತದೆ.

ಆದರೆ, ಸುಪ್ರೀಂ ಕೋರ್ಟ್ ಹೇಳುವುದೇನೆಂದರೆ, ವಿಚ್ಛೇದನ ನೀಡಿ ವರ್ಷವಾದರೂ ದಂಪತಿ ನಡುವೆ ಯಾವುದೇ ಸೌಹಾರ್ದತೆ ಮೂಡಿಬರಲಿಲ್ಲವೆಂದರೆ, ವಿಚ್ಛೇದನ ಆಗುವುದು ಪಕ್ಕಾ ಎಂದಾದರೆ, ಅಂಥ ದಂಪತಿಗೆ ಆರು ತಿಂಗಳ ಹೆಚ್ಚಿನ ಕಾಲಾವಕಾಶ ಕೊಡುವ ಅಗತ್ಯವಿಲ್ಲ.

ಹಾಗಾಗಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಒಂದು ವರ್ಷವಾದ ಮೇಲೂ ದಂಪತಿಗಳು ಬೇರೆಯಾಗುವುದನ್ನು ಬಯಸಿದರೆ, ಅವರಿಗೆ ಕೂಡಲೇ ವಿಚ್ಛೇದನ ನೀಡಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆದರೆ, ಹಾಗೆ ವಿಚ್ಛೇದನ ಪಡೆಯುವುದರೊಳಗೆ, ಮಕ್ಕಳ ಭದ್ರತೆ, ಪರಿಹಾರ ಎಲ್ಲವೂ ನಿರ್ಧಾರವಾಗಬೇಕೆಂದು ಅದು ತಾಕೀತು ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ruling that it is pointless to "perpetuate a purposeless marriage and to prolong the agony of the parties", the Supreme Court today made a big change to the rules for Hindu couples looking to divorce.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ