ನ್ಸೆಸ್ಲೆ ಮ್ಯಾಗಿ ನಂತರ ಇತರೆ ಫಾಸ್ಟ್ ಫುಡ್ ಉತ್ಪನ್ನಕ್ಕೂ ಭೀತಿ
ನವದೆಹಲಿ, ಜೂ.08: ನೆಸ್ಲೆ ಸಂಸ್ಥೆ ಮ್ಯಾಗಿ ಫಾಸ್ಟ್ ಫುಡ್ ಗುಣಮಟ್ಟದಲ್ಲಿ ಫೇಲ್ ಆದ ಮೇಲೆ ಇತರೆ ಫಾಸ್ಟ್ ಫುಡ್ ಬ್ರ್ಯಾಂಡ್ ಗಳ ಮೇಲೆ ಆಹಾರ ನಿಯಂತ್ರಣ ಪ್ರಾಧಿಕಾರ ಕಣ್ಣು ಬಿದ್ದಿದೆ.
ನೆಸ್ಲೆ ಅವರ 2 ಮಿನಿಟ್ ಫುಡ್ ಮ್ಯಾಗಿ ದೇಶದ ಹಲವೆಡೆ ನಿಷೇಧಕ್ಕೆ ಒಳಪಟ್ಟಿದೆ. ಈಗ ಟಾಪ್ ರಾಮೆನ್, ಫುಡ್ಲೆಸ್, ವೈ ವೈ ಮುಂತಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಏಳಕ್ಕೂ ಅಧಿಕ ಸಂಸ್ಥೆಗಳ ಉತ್ಪನ್ನಗಳ ಪರೀಕ್ಷೆ ನಡೆಸಲು ಎಫ್ಎಸ್ಎಸ್ಎಐ ಮುಂದಾಗಿದೆ.
ದೇಶದ ಎಲ್ಲಾ ರಾಜ್ಯಗಳ ಆಹಾರ ನಿಯಂತ್ರಣ ಪ್ರಾಧಿಕಾರ ವಿಭಾಗಗಳಿಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ಎಫ್ಎಸ್ಎಸ್ಎಐ ಸಿಇಒ ವೈಎಸ್ ಮಲ್ಲಿಕ್ ಹೇಳಿದ್ದಾರೆ. [ಕರ್ನಾಟಕದಲ್ಲಿ ಮ್ಯಾಗಿ ಮಾರಾಟವಿಲ್ಲ]

ಲಭ್ಯ ಮಾಹಿತಿ ಪ್ರಕಾರ ಸಿಇಒ ಮಲ್ಲಿಕ್ ಅವರು ಪ್ರಾಧಿಕಾರಗಳಿಗೆ ಪತ್ರ ಬರೆದು ನೆಸ್ಲೆ ಇಂಡಿಯಾ, ಐಟಿಸಿ, ನಿಸ್ಸಿನ್ ಫುಡ್ ಲಿ, ಜಿಎಸ್ ಕೆ ಕನ್ಸೂಮರ್ ಹೆಲ್ತ್ ಕೇರ್, ಸಿಜಿ ಫುಡ್ ಇಂಡಿಯಾ, ರುಚಿ ಇಂಟರ್ ನ್ಯಾಷನಲ್ ಹಾಗೂ ಎಎ ನ್ಯೂಟ್ರಿಷನ್ ಲಿ. ಸಂಸ್ಥೆಗಳ ಫಾಸ್ಟ್ ಫುಡ್ ಉತ್ಪನ್ನಗಳು ಪರೀಕ್ಷೆಗೊಳ ಪಡಬೇಕಾಗಿದೆ. [ಮ್ಯಾಗಿ ಮಾರಾಟ ವಾಪಸ್ ಪಡೆದ ನೆಸ್ಲೆ ಕಂಪನಿ]
ಎಫ್ಎಸ್ಎಸ್ಎಐ ಆದೇಶದಂತೆ ವೈವೈ ನೂಡಲ್ಸ್, ಭುಜಿಯಾ ಚಿಕನ್ ಸ್ನಾಕ್ಸ್- ಸಿಜಿ ಫುಡ್ಸ್; ಕೊಕಾ ನೂಡಲ್ಸ್-ರುಚಿ ಇಂಟರ್ ನ್ಯಾಷನಲ್, ಫುಡಲ್ಸ್-ಜಿಎಸ್ ಕೆ ಕನ್ಸೂಮರ್ ಹೆಲ್ತ್ ಕೇರ್,ಮ್ಯಾಗಿ ಎಲ್ಲಾ 9 ಬಗೆಗಳು ಗುಣಮಟ್ಟ ಪರೀಕ್ಷೆಗೆ ಒಳಪಡಬೇಕಿದೆ.
ಇದಲ್ಲದೆ, ಇಂಡೋ ನಿಸ್ಸಿನ್ ನ ಟಾಪ್ ರಾಮೆನ್ ಆಟಾ ಮಸಾಲಾ, ಐಟಿಸಿಯ ಮೂರು ಇನ್ಸ್ಟಂಟ್ ನೂಡಲ್ಸ್, ಎಎ ನ್ಯೂಟ್ರಿಷನ್ ನ ವೆಜ್ ನೂಡಲ್ಸ್, ಯಮ್ಮಿ ಚಿಕನ್ಸ್ ಕೂಡಾ ಪರೀಕ್ಷಿಸಬೇಕಿದೆ. [ಮ್ಯಾಗಿ ನ್ಯೂಡಲ್ಸ್ ತಿನ್ನದಂತೆ ಸೈನಿಕರಿಗೆ ಎಚ್ಚರಿಕೆ!]
ಮ್ಯಾಗಿಯಲ್ಲಿ ಮೊನೊ ಸೋಡಿಯಂ ಗ್ಲುಟಮೇಟ್ ಹಾಗೂ ಸೀಸ ಅಂಶ ಅಧಿಕವಾಗಿದ್ದು, ಮನುಷ್ಯರು ಸೇವಿಸಲು ಸಾಧ್ಯವಿಲ್ಲ ಎಂದು ಹತ್ತು ಹಲವು ಪರೀಕ್ಷಾ ವರದಿಗಳು ಹೇಳಿರುವ ಹಿನ್ನೆಲೆಯಲ್ಲಿ ನೆಸ್ಲೆ ಮ್ಯಾಗಿಗೆ ದೇಶದ ಹಲವೆಡೆ ಈಗಾಗಲೇ ನಿಷೇಧ ಹೇರಲಾಗಿದೆ. (ಪಿಟಿಐ)












Click it and Unblock the Notifications