ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಗಿ ನ್ಯೂಡಲ್ಸ್ ತಿನ್ನದಂತೆ ಸೈನಿಕರಿಗೆ ಎಚ್ಚರಿಕೆ!

By Mahesh
|
Google Oneindia Kannada News

ನವದೆಹಲಿ, ಜೂ.3: ದೇಶದೆಲ್ಲೆಡೆ ಮ್ಯಾಗಿ ಬಗ್ಗೆ ಉಂಟಾಗಿರುವ ಸಮೂಹ ಸನ್ನಿ ಈಗ ಭಾರತೀಯ ಸೇನೆಯ ಕ್ಯಾಂಪಿಗೂ ಹರಡಿದೆ. ಮ್ಯಾಗಿಯಲ್ಲಿರುವ ಸೀಸದ ಅಂಶದ ಬಗ್ಗೆ ಪರೀಕ್ಷೆ ವರದಿ ಬರುವ ಮೊದಲೇ ನಿಷೇಧಕ್ಕೆ ಒಳಗಾಗುತ್ತಿದೆ. ಮುಂದಿನ ಆದೇಶದ ತನಕ ಮಿಲಿಟರಿ ಕ್ಯಾಂಟೀನ್ ಗಳಲ್ಲಿ ಮ್ಯಾಗಿ ನ್ಯೂಡಲ್ಸ್ ತಯಾರಿ ಬಂದ್ ಆಗಿದೆ.

ಮೋನೊಸೋಡಿಯಂ ಗ್ಲುಟಮೇಟ್(ಎಂಎಸ್ ಜಿ) ಅಧಿಕವಾಗಿರುವ ಮ್ಯಾಗಿ ನ್ಯೂಡಲ್ಸ್ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ. ಸೀಸದ ಪ್ರಮಾಣದ ಬಗ್ಗೆ ಪರೀಕ್ಷಾ ವರದಿ ಬಂದ ಮೇಲೆ ನೋಡೋಣ.. ಅಲ್ಲಿ ತನಕ ನ್ಯೂಡಲ್ಸ್ ತಿನ್ನಬೇಡಿ ಎಂದು ಸೈನಿಕರಿಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Army asks personnel not to consume Maggi

ಸುಮಾರು 1000 ಕ್ಕೂ ಅಧಿಕ ಆರ್ಮಿ ಕ್ಯಾಂಟೀನ್ ಗಳಲ್ಲಿ 13 ಲಕ್ಷಕ್ಕೂ ಅಧಿಕ ಸೈನಿಕರಿಗೆ ಮ್ಯಾಗಿ ನ್ಯೂಡಲ್ಸ್ ನೆಚ್ಚಿನ ತ್ವರಿತ ಆಹಾರವಾಗಿತ್ತು.

ಕೆಲವೆಡೆ ನಿಷೇಧ: ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ರಾಜ್ಯದಲ್ಲಿ ಮುಂದಿನ ಆದೇಶದ ತನಕ ಮ್ಯಾಗಿ ಮಾರಾಟ ಸೇವನೆಗೆ ನಿರ್ಬಂಧ ಹೇರಲಾಗಿದೆ. ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಪರೀಕ್ಷೆ ಜಾರಿಯಲ್ಲಿದೆ. ದೆಹಲಿಯಲ್ಲಿ 15 ದಿನಗಳ ನಿಷೇಧ ಹೇರಲಾಗಿದೆ.

ಈ ನಡುವೆ ಅಮಿತಾಬ್ ಬಚ್ಚನ್ ಜಾಣತನ ಮೆರೆದು ನನಗೂ ನೆಸ್ಲಿ ಕಂಪನಿ ಮ್ಯಾಗಿಗೂ ಸಂಬಂಧವಿಲ್ಲ ಎಂದಿದ್ದಾರೆ. ಈ ನಡುವೆ ಅಮಿತಾಬ್, ಮಾಧುರಿ ದೀಕ್ಷಿತ್ ಹಾಗೂ ಪ್ರೀತಿ ಜಿಂಟಾ ಪರ ಶಿವಸೇನೆ ಬ್ಯಾಟಿಂಗ್ ಆರಂಭಿಸಿದೆ.

ಬಿಗ್ ಬಜಾರ್, ಫ್ಯೂಚರ್ ಬಜಾರ್, ರೀಟೈಲ್ ಮಳಿಗೆಗಳಲ್ಲಿ ಮ್ಯಾಗಿ ಪ್ಯಾಕೆಟ್ ಮಾಯವಾಗಿದೆ. ಅದರೆ, ನೆಸ್ಲೆ ಇಂಡಿಯಾ ಮಾತ್ರ ಮೂರು ದಶಕಗಳಲ್ಲಿ ಕಾಣದ ಸೀಸದ ಅಂಶ ಈಗ ಏಕೆ, ಹೇಗೆ ಕಾಣಿಸಿಕೊಳ್ಳಲು ಸಾಧ್ಯ? ವಿಶ್ವ ಶ್ರೇಷ್ಠ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿದ ಮೇಲೆ ನ್ಯೂಡಲ್ಸ್ ಮಾರುಕಟ್ಟೆಗೆ ಬರುತ್ತದೆ. ಇಲ್ಲದಿದ್ದರೆ ಆಹಾರ ನಿಯಂತ್ರಣ ಪ್ರಾಧಿಕಾರ ಲೈಸನ್ಸ್ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. (ಪಿಟಿಐ)

English summary
The Army issued an advisory asking its personnel not to consume Maggi noodles and directed military canteens to set aside the existing stock of the popular snack until further orders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X