ಮ್ಯಾಗಿ ಮಾರಾಟ ವಾಪಸ್ ಪಡೆದ ನೆಸ್ಲೆ ಕಂಪನಿ
ಬೆಂಗಳೂರು, ಜೂ. 05 : ಕೇವಲ ಎರಡು ನಿಮಿಷದಲ್ಲಿ ತಯಾರಾಗಿ ಮಕ್ಕಳಿಂದ ದೊಡ್ಡವರ ತನಕ ಎಲ್ಲರ ನಾಲಿಗೆ ರುಚಿ ತಣಿಸುತ್ತಿದ್ದ ಮ್ಯಾಗಿ ನಿಷೇಧದ ಭೀತಿ ಎದುರಿಸುತ್ತಿದೆ. ಮ್ಯಾಗಿ ಬಗ್ಗೆ ವಿವಾದವೆದ್ದಿರುವ ಹಿನ್ನಲೆಯಲ್ಲಿ ನೆಸ್ಲೆ ಕಂಪನಿ ಭಾರತದಲ್ಲಿ ಮ್ಯಾಗಿ ನೂಡಲ್ಸ್ ಮಾರಾಟವನ್ನು ವಾಪಸ್ ಪಡೆದಿದೆ.
ಶುಕ್ರವಾರ ಮುಂಜಾನೆ ಈ ಕುರಿತು ನೆಸ್ಲೆ ಕಂಪನಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ತಾತ್ಕಾಲಿಕವಾಗಿ ಭಾರತದಲ್ಲಿ ಮ್ಯಾಗಿ ಮಾರಾಟವನ್ನು ವಾಪಸ್ ಪಡೆಯಲಾಗುತ್ತಿದೆ. ಸದ್ಯಕ್ಕೆ ಕಂಪನಿ ಮ್ಯಾಗಿ ಮತ್ತು ಇದೇ ತರಹದ ಯಾವುದೇ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. [ಮ್ಯಾಗಿ ಕೆಟ್ಟದ್ದು ಎಂಬ ವಿವಾದದ ಬಗ್ಗೆ ಟ್ವಿಟ್ಟಿಗರು ಏನನ್ನುತ್ತಾರೆ?]

'ಗ್ರಾಹಕರ ನಂಬಿಕೆ ಮತ್ತು ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಭಾರತದಲ್ಲಿ ಮ್ಯಾಗಿ ಮಾರಾಟವನ್ನು ನಾವು ತಾತ್ಕಾಲಿಕವಾಗಿ ವಾಪಸ್ ಪಡೆಯುತ್ತಿದ್ದೇವೆ' ಎಂದು ನೆಸ್ಲೆ ಕಂಪನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. [ಬೆಂಗಳೂರಲ್ಲಿ ನ್ಯೂಡಲ್ಸ್ ವ್ಯಾಪಾರವೇನೂ ಕಡಿಮೆಯಾಗಿಲ್ಲ]
'ಮ್ಯಾಗಿ ಬಗ್ಗೆ ಸದ್ಯಕ್ಕೆ ಎದ್ದಿರುವ ವಿವಾದಗಳಿಂದ ಕಂಪನಿಯ ಉತ್ಪನ್ನದ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಿದೆ. ಆದ್ದರಿಂದ ಮ್ಯಾಗಿ ಮಾರಾಟವನ್ನು ವಾಪಸ್ ಪಡೆಯಲು ಕಂಪನಿ ನಿರ್ಧರಿಸಿದೆ' ಎಂದು ನೆಸ್ಲೆ ಹೇಳಿದೆ. ಇದರಿಂದಾಗಿ ಹಲವು ದಿನಗಳಿಂದ ಉಂಟಾಗಿದ್ದ ಗೊಂದಲ ಬಗೆಹರಿದಿದೆ.
In spite of MAGGI Noodles being safe, we have decided to take the products off the shelves http://t.co/PFNKhoIBbX
— Maggi India (@MaggiIndia) June 4, 2015 ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿದ್ದವು. ನಂತರ ದೇಶದೆಲ್ಲೆಡೆ ಮ್ಯಾಗಿ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿತ್ತು. ಹಲವು ರಾಜ್ಯಗಳು ಮ್ಯಾಗಿಯ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿವೆ. ಮ್ಯಾಗಿಯಲ್ಲಿ ವಿಷಕಾರಿ ಅಂಶಗಳಿವೆ ಎಂದು ವರದಿ ಬಂದರೆ ಮ್ಯಾಗಿ ದೇಶಾದ್ಯಂತ ನಿಷೇಧವಾಗುವ ಸಾಧ್ಯತೆ ಇದೆ.












Click it and Unblock the Notifications