'ದಿ ಬೆಸ್ಟ್' ಕರ್ನಾಟಕ: ಕೊರೊನಾವೈರಸ್ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿ!

ನವದೆಹಲಿ, ಜೂನ್.19: ಭಾರತದಲ್ಲಿ ಕೊರೊನಾವೈರಸ್ ಅಟ್ಟಹಾಸ ಮುಂದುವರಿದ್ದು ಒಂದೇ ದಿನ ಬರೋಬ್ಬರಿ 13,536 ಮಂದಿಗೆ ಸೋಂಕು ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,80,532ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 10,386 ಜನರು ಕೋವಿಡ್ - 19 ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 2,04,710 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದ ಮಟ್ಟಿಗೆ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ಕರ್ನಾಟಕವು ಕೊರೊನಾವೈರಸ್ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಸೈ ಎನಿಸಿಕೊಂಡಿದೆ. ಇದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದ್ದು, ಮಹಾಮಾರಿ ನಿಯಂತ್ರಿಸಲು ಕರ್ನಾಟಕವು ಅನುಸರಿಸುತ್ತಿರುವ ಮಾರ್ಗೋಪಾಯಗಳನ್ನೇ ಉಳಿದ ರಾಜ್ಯಗಳು ಪಾಲಿಸುವಂತೆ ಸಲಹೆ ನೀಡಿದೆ.

ಕರ್ನಾಟಕದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಕೇಂದ್ರ

ಕರ್ನಾಟಕದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಕೇಂದ್ರ

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕರ್ನಾಟಕವು ಅತ್ಯುತ್ತಮ ಕ್ರಮಗಳನ್ನು ಜಾರಿಗೊಳಸಿದೆ. ವಿಶೇಷವಾಗಿ ಐಟಿ ಆಧಾರಿತ ಸಮಗ್ರ ಸಂಪರ್ಕ ಪತ್ತೆ ಮತ್ತು 1.5 ಕೋಟಿ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗಿದೆ. ಕೊರೊನಾವೈರಸ್ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರವು ತೆಗೆದುಕೊಂಡ ಅತ್ಯುತ್ತಮ ಕ್ರಮಗಳನ್ನು ಕೇಂದ್ರ ಸರ್ಕಾರವು ಶ್ಲಾಘಿಸಿದೆ. ಕರ್ನಾಟಕದ ಪರಿಣಾಮಕಾರಿ COVID-19 ನಿರ್ವಹಣೆಗಾಗಿ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ತಂತ್ರಜ್ಞಾನದ ಬಳಕೆಯನ್ನು ಕೇಂದ್ರ ಶ್ಲಾಘಿಸಿದೆ.

ಕೊರೊನಾವೈರಸ್ ನಿರ್ವಹಣೆಯಲ್ಲಿ ಕರ್ನಾಟಕವೇ ಮಾದರಿ

ಕೊರೊನಾವೈರಸ್ ನಿರ್ವಹಣೆಯಲ್ಲಿ ಕರ್ನಾಟಕವೇ ಮಾದರಿ

ಕೊರೊನಾವೈರಸ್ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕವು ತೆಗೆದುಕೊಂಡಿರುವ ಕ್ರಮಗಳನ್ನು ಬೇರೆ ರಾಜ್ಯಗಳು ಕೂಡಾ ಅನುಸರಿಸಬೇಕು. ಆ ಮೂಲಕ ಮಹಾಮಾರಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಲಹೆ ನೀಡಿದೆ.

142 ಮಂದಿ ಸಾವು, 3827 ಮಂದಿಗೆ ಸೋಂಕು

142 ಮಂದಿ ಸಾವು, 3827 ಮಂದಿಗೆ ಸೋಂಕು

ಭಾರತದಲ್ಲೇ ಕೊರೊನಾವೈರಸ್ ನಿಂದ ಹೈರಾಣಾಗಿರುವ ರಾಜ್ಯವೇ ಮಹಾರಾಷ್ಟ್ರ. ಈ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ ಬರೋಬ್ಬರಿ 3827 ಜನರಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದೆ. ಒಂದೇ ದಿನ 142 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಈವರೆಗೂ 5893 ಮಂದಿ ಸಾವನ್ನಪ್ಪಿದ್ದರೆ, ಒಟ್ಟು ಸೋಂಕಿತರ ಸಂಖ್ಯೆ 1,24,331ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ 8281ಕ್ಕೆ ಏರಿದ ಸೋಂಕಿತರ ಸಂಖ್ಯೆ

ಕರ್ನಾಟಕದಲ್ಲಿ 8281ಕ್ಕೆ ಏರಿದ ಸೋಂಕಿತರ ಸಂಖ್ಯೆ

ಇನ್ನು, ಕೊರೊನಾವೈರಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡ ನಂತರವೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ಕರ್ನಾಟಕದಲ್ಲಿ 337 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯು ಬರೋಬ್ಬರಿ 8281ಕ್ಕೆ ಏರಿಕೆಯಾಗಿದೆ. ಇನ್ನು, ಮಹಾಮಾರಿಗೆ ಶುಕ್ರವಾರ 10 ಮಂದಿ ಪ್ರಾಣ ಬಿಟ್ಟಿದ್ದು, ಇದುವರೆಗೂ ಕೊರೊನಾ ವೈರಸ್ ಗೆ 124 ಮಂದಿ ಬಲಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+