ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹೆಚ್ಚಳ: ವಿಮಾನಗಳಲ್ಲಿ ಕೋವಿಡ್ ನಿಯಮ ಕಡ್ಡಾಯ ಪಾಲನೆಗೆ ಸೂಚನೆ

|
Google Oneindia Kannada News

ದೇಶದ ಹಲವಾರು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ಪ್ರಯಾಣಿಕರು ಕೋವಿಡ್ ನಿಯಮಗಳನ್ನು ಅನುಸರಿಸುವುದನ್ನು ಮತ್ತು ವಿಮಾನದೊಳಗೆ ತಮ್ಮ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ಪ್ರಯಾಣಿಕರು ನಿಯಮ ಅನುಸರಿಸಲು ನಿರಾಕರಿಸಿದರೆ, ವಿಮಾನಯಾನ ಸಂಸ್ಥೆಯು ಡಿಬೋರ್ಡಿಂಗ್ ಸೇರಿದಂತೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.

ವಿಮಾನಯಾನ ನಿಯಂತ್ರಕವು ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಪ್ರಯಾಣಿಕರು ಮಾಸ್ಕ್‌ಗಳನ್ನು ಸರಿಯಾಗಿ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಯಮಗಳನ್ನು ಅನುಸರಿಸಲು ವಿಫಲರಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.

ದೆಹಲಿ ಕೊರೊನಾ: ಆಸ್ಪತ್ರೆಗೆ ದಾಖಲಾತಿಯಲ್ಲಿ ಹೆಚ್ಚಳ- ಒಂದೇ ದಿನ 10 ಸಾವುದೆಹಲಿ ಕೊರೊನಾ: ಆಸ್ಪತ್ರೆಗೆ ದಾಖಲಾತಿಯಲ್ಲಿ ಹೆಚ್ಚಳ- ಒಂದೇ ದಿನ 10 ಸಾವು

ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನಗಳ ಒಳಗೆ ದಿಢೀರ್ ತಪಾಸಣೆಗಳನ್ನು ಸಹ ಕೈಗೊಳ್ಳಲಾಗುತ್ತದೆ. ವಿವಿಧ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ಇದೆ ಎಂದು ಏರ್‌ಲೈನ್ಸ್ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.

Follow Covid Protocol Inside Aircraft: DGCA Mandates Amid Rise In Cases

ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರ ಮೇಲೆ ಅಚ್ಚರಿಯ ತಪಾಸಣೆ ನಡೆಸಲಾಗುವುದು ಎಂದು ಡಿಜಿಸಿಎ ತಿಳಿಸಿದೆ. ಜೂನ್‌ನಲ್ಲಿ ಹೊರಡಿಸಲಾದ ಸುತ್ತೋಲೆಯನ್ನು ಸೂಚಿಸಿದ ಡಿಜಿಸಿಎ ಕಟ್ಟುನಿಟ್ಟಾದ ಅನುಸರಣೆ ಇರಬೇಕು ಎಂದು ಹೇಳಿದೆ.

ದೇಶದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಳ

ಜೂನ್‌ನಲ್ಲಿ ಹೊರಡಿಸಲಾದ ಆದೇಶಗಳ ಅಡಿಯಲ್ಲಿ, ವಿಶೇಷ ಸಂದರ್ಭಗಳಲ್ಲಿ ಮತ್ತು ಅನುಮತಿಸಲಾದ ಕಾರಣಗಳಿಗಾಗಿ ಮಾತ್ರ ಮಾಸ್ಕ್‌ಗಳನ್ನು ತೆಗೆದುಹಾಕಬಹುದು. ಮಾಸ್ಕ್ ಧರಿಸದವರಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಲು ಕೇಳಲಾಗಿದೆ. ವಿಮಾನ ನಿಲ್ದಾಣದ ಒಳಗೆ ಪ್ರಮುಖ ಸ್ಥಳಗಳಲ್ಲಿ ಸ್ಯಾನಿಟೈಸರ್‌ಗಳನ್ನು ಒದಗಿಸುವುದು ಸೇರಿದಂತೆ ಸರಿಯಾದ ಸ್ವಚ್ಛತಾ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ದೈನಂದಿನ ಬುಲೆಟಿನ್ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 9,062 ಕೊರೊನ ವೈರಸ್ ಸೋಂಕುಗಳು ವರದಿಯಾಗಿದ್ದು, 36 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

Follow Covid Protocol Inside Aircraft: DGCA Mandates Amid Rise In Cases

ಮುನ್ನೆಚ್ಚರಿಕೆ ವಹಿಸಲು ಸೂಚನೆ

ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 1,05,058 ರಷ್ಟಿದೆ, ಇದು ಒಟ್ಟಾರೆ ಸಂಖ್ಯೆಯ ಶೇಕಡಾ 0.24 ರಷ್ಟಿದೆ. ಸಚಿವಾಲಯದ ಅಂಕಿಅಂಶಗಳ ಪ್ರಕಾರ ಒಟ್ಟಾರೆ ಸಾವಿನ ಸಂಖ್ಯೆ 527,134 ಕ್ಕೆ ಏರಿಕೆಯಾಗಿದೆ.

ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿ.ಕೆ ಪಾಲ್, ಕೋವಿಡ್ -19 ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಜನರು ಜಾಗರೂಕರಾಗಿರಬೇಕು, ಎಲ್ಲರೂ ಮೂರನೇ ಡೋಸ್ ತೆಗೆದುಕೊಳ್ಳಬೇಕು ಎಂದು ಹೇಳಿದರು.

"ಪ್ರಕರಣಗಳ ಸಂಖ್ಯೆಯಲ್ಲಿನ ಬದಲಾವಣೆಗಳನ್ನು ನಾವು ಊಹಿಸಲು ಸಾಧ್ಯವಿಲ್ಲ, ಆದ್ದರಿಂದ ನಾವು ಮುಂಜಾಗ್ರತೆ ವಹಿಸಬೇಕು ಮತ್ತು ಮುನ್ನೆಚ್ಚರಿಕೆಯಾಗಿ ಲಸಿಕೆ ಪಡೆಯಬೇಕು. ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಈಗ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಪಡೆದವರಿಗೂ ನೀಡಬಹುದು" ಎಂದು ಡಾ. ಪಾಲ್ ತಿಳಿಸಿದ್ದಾರೆ.

English summary
Amid rise in Covid-19 cases in several parts of the country, Airlines have been asked to ensure that passengers wear masks inside planes and maintain hand hygiene, aviation regulator DGCA said. India reported 9,062 coronavirus infections and 36 related deaths in the last 24 hours, according to the daily bulletin by the Union health ministry of health and family welfare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X