ಕಣಿವೆ ರಾಜ್ಯದಲ್ಲಿ ಭೂ ಕುಸಿತ, ಪ್ರವಾಹಕ್ಕೆ ಜನ ಬಲಿ

ಶ್ರೀನಗರ, ಸೆ.4: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಾದ್ಯಂತ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ದೂಧ್-ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು 23 ಹಳ್ಳಿಗಳು ನೀರಿನಿಂದ ಆವೃತವಾಗಿವೆ. ಗಾಯದ ಮೇಲೆ ಬರೆ ಎಳೆದಂತೆ ಭೀಕರ ಅಫಘಾತ ಸಂಭವಿಸಿದ್ದು, ಪ್ರಯಾಣಿಕರು ತುಂಬಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಸುಮಾರು 35 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಹಲವು ದಿನಗಳಿಂದ ದಕ್ಷಿಣ ಕಾಶ್ಮೀರದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪೂಂಚ್, ರಾಜೌರಿ ಮತ್ತು ರೀಸಿಯಲ್ಲಿ, ಜಮ್ಮುವಿನ ಕುಲ್‌ಗಾಮ್, ಶೋಪಿಯನ್‌ಗಳಲ್ಲಿನ ನದಿಗಳು ಅಪಾಯದ ಮಟ್ಟವನ್ನು ಮೀರಿಹರಿಯುತ್ತಿವೆ. ಈಗಾಗಲೇ ಈ ಪ್ರದೇಶಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದ್ದು, ಇದೇ ಕಣಿವೆಯಲ್ಲಿ ಈ ಅಫಘಾತ ಸಂಭವಿಸಿದ್ದು, ಹಲವರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.[ಮೋದಿ ಅವರ 'ಎದೆಗಾರಿಕೆ' ಪ್ರಶ್ನೆ ಎತ್ತಿದ ಕಾಂಗ್ರೆಸ್]

ಸುಮಾರು 3-4 ಸಾವಿರ ಕುಟುಂಬಗಳು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳ ಅರಸಿಕೊಂಡು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೇ ಬರ್ಝಲ್ಗಾಹ್ ಪ್ರದೇಶ ಸಂಪೂರ್ಣವಾಗಿ ದ್ವೀಪದಂತಾಗಿದ್ದು, ಹೊರ ಪ್ರಪಂಚದ ಸಂಪರ್ಕದಿಂದ ಸಂಪೂರ್ಣವಾಗಿ ದೂರವಾಗಿವೆ. ಈ ಪ್ರದೇಶವು ಹೆಚ್ಚು ಜನ ಸಾಂದ್ರತೆಯಿಂದ ಕೂಡಿದ್ದು, ಎಲ್ಲರಿಗೂ ಸೂಕ್ತ ರಕ್ಷಣೆ ನೀಡುವುದಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ಯೂಸೂಪ್ ಮೀರ್ ಹೇಳಿದ್ದಾರೆ.

ದೂಧ್‍ಗಂಗಾ ನದಿಗೆ ಅಲ್ಲಲ್ಲಿ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆಗಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದೆ. ನಿರಾಶ್ರಿತರಿಗಾಗಿ ಕೇಂದ್ರಗಳನ್ನು ಆರಂಭಿಸಿದ್ದು ಜನ ಅಲ್ಲಿ ಆಶ್ರಯ ಪಡೆದಿದ್ದಾರೆ.

ರಜೌರಿ ಜಿಲ್ಲೆಯಲ್ಲಿ ಮಸಣ ಸೇರಿದ ದಿಬ್ಬಣ

ರಜೌರಿ ಜಿಲ್ಲೆಯಲ್ಲಿ ಮಸಣ ಸೇರಿದ ದಿಬ್ಬಣ

ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ಅಫಘಾತ ಸಂಭವಿಸಿದ್ದು, ಪ್ರಯಾಣಿಕರು ತುಂಬಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಸುಮಾರು 35 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ದಕ್ಷಿಣ ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಮದುವೆ ದಿಬ್ಬಣದ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಮಧ್ಯಾಹ್ನ 2 ಗಂಟೆಯ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬಸ್‌ನಲ್ಲಿ ಸುಮಾರು 50 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ರಸ್ತೆಯ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು, ಬಳಿಕ ಕಂದಕಕ್ಕೆ ಉರುಳಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸಹಾಯದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಹಸ ಪಡಬೇಕಾಗುತ್ತದೆ

ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಹಸ ಪಡಬೇಕಾಗುತ್ತದೆ

ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಹಸ ಪಡಬೇಕಾಗುತ್ತದೆ. ಯುವಕನೊಬ್ಬ ಕುಲ್ಗ್ರಾಮ್ ನ ಅಕ್ರಾನ್ ನೌಪೊರದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಯತ್ನಿಸುತ್ತಿದ್ದಾನೆ.

ನಿರಂತರವಾಗಿ ಏರುತ್ತಿರುವ ನೀರಿನ ಮಟ್ಟ

ನಿರಂತರವಾಗಿ ಏರುತ್ತಿರುವ ನೀರಿನ ಮಟ್ಟ

ನಿರಂತರವಾಗಿ ನೀರಿನ ಮಟ್ಟ ಏರುತ್ತಿದ್ದು, ಬೇಮಿನಾದ ಖುಮನಿ ಚೌಕ್ ನಲ್ಲಿರುವ ಸೇತುವೆಯ ಬಳಿ ಸೇರಿರುವ ಜನರು ಆತಂಕದಿಂದ ನಿಂತಿದ್ದಾರೆ.

ಯೋಧರಿಂದ ರಕ್ಷಣಾ ಕಾರ್ಯ

ಯೋಧರಿಂದ ರಕ್ಷಣಾ ಕಾರ್ಯ

ಸತತ ಸುರಿಯುತ್ತಿರುವ ಮಳೆಯ ನಡುವೆ ಕುಲ್ಗಾಂ ಜಿಲ್ಲೆಯ ಪ್ರವಾಹ ಪೀಡಿತ ಮಿರ್ಜ್ ಬಜಾರ್ ನಲ್ಲಿ ಜನರನ್ನು ರಕ್ಷಿಸುತ್ತಿರುವ ಯೋಧರು.

ಸ್ಥಳೀಯರಿಂದಲೂ ರಕ್ಷಣಾ ಕಾರ್ಯ

ಸ್ಥಳೀಯರಿಂದಲೂ ರಕ್ಷಣಾ ಕಾರ್ಯ

ಸ್ಥಳೀಯರಿಂದಲೂ ರಕ್ಷಣಾ ಕಾರ್ಯಕ್ಕೆ ಸಹಕಾರ ದೊರೆತಿದ್ದು, ಸುರಕ್ಷಿತ ಸ್ಥಳಗಳಿಗೆ ವೃದ್ಧರು, ಅಶಕ್ತರನ್ನು ಸಾಗಿಸುತ್ತಿದ್ದಾರೆ.

ಯೋಧರಿಂದ ಅವಿರತ ರಕ್ಷಣಾ ಕಾರ್ಯ

ಯೋಧರಿಂದ ಅವಿರತ ರಕ್ಷಣಾ ಕಾರ್ಯ

ಸತತ ಸುರಿಯುತ್ತಿರುವ ಮಳೆಯ ನಡುವೆ ಕುಲ್ಗಾಂ ಜಿಲ್ಲೆಯ ಪ್ರವಾಹ ಪೀಡಿತ ಮಿರ್ಜ್ ಬಜಾರ್ ನಲ್ಲಿ ಜನರನ್ನು ಯೋಧರು ರಕ್ಷಿಸುತ್ತಿದ್ದಾರೆ.

ಮಿರ್ಜ್ ಬಜಾರ್ ನಲ್ಲಿ ಜನರ ರಕ್ಷಣೆ

ಮಿರ್ಜ್ ಬಜಾರ್ ನಲ್ಲಿ ಜನರ ರಕ್ಷಣೆ

ಮಿರ್ಜ್ ಬಜಾರ್ ನಲ್ಲಿ ಜನರ ರಕ್ಷಣೆ ಕಾರ್ಯದ ಒಂದು ದೃಶ್ಯ

ಆತಂಕ ಕರ್ಮೋಡ ಗೋಚರಿಸುತ್ತಿದೆ

ಆತಂಕ ಕರ್ಮೋಡ ಗೋಚರಿಸುತ್ತಿದೆ

ಆತಂಕ ಕರ್ಮೋಡ ಗೋಚರಿಸುತ್ತಿದೆ. ಪ್ರಶಾಂತವಾಗಿದ್ದ ಕಣಿವೆ ರಾಜ್ಯದ ಸರೋವರಗಳು ಈಗ ಖಾಲಿಯಾಗಿವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+