ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ವಿಮಾನ ಸೇವೆ

ಅಂದರೆ ಶಬರಿಮಲೆಯಿಂದ 80 ಕಿಮೀ ದೂರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ. ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಇನ್ನೂ 2 ವರ್ಷ ಕಾಯಬೇಕಿದೆಯಾದರೂ ಮುಂದಿನ ವರ್ಷದ ವೇಳೆಗೆ ಸಣ್ಣ ಪ್ರಮಾಣದಲ್ಲಿ ವಿಮಾನ ಯಾನ ಆರಂಭವಾಗುವ ಆಶಯವಿದೆ. ಕಳೆದ ವರ್ಷ ಸುಮಾರು 5 ಕೋಟಿ ಗೂ ಹೆಚ್ಚು ಜನ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಅಂದಹಾಗೆ ಪತ್ತನಂತಿಟ್ಟ ಜಿಲ್ಲೆಯ ಅರಂಮುಲ ಬಳಿ 700 ಎಕರೆ ಸುವಿಶಾಲ ಪ್ರದೇಶದಲ್ಲಿ ದೇಶದ ಮೊದಲ ಖಾಸಗಿ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬರಲಿದೆ. 2,000 ಕೋಟಿ ರೂ ವೆಚ್ಚದಲ್ಲಿ KGS Aranmula International Airport complex ನಿರ್ಮಾಣವಾಗಲಿದೆ.
ಕೇರಳದ ರಾಜಧಾನಿ ತಿರುವನಂತಪುರದಿಂದ 110 ಕಿಮೀ ದೂರದಲ್ಲಿ ಈ ವಿಮಾನ ನಿಲ್ದಾಣ ತಲೆಯೆತ್ತಲಿದೆ. ರಾಜ್ಯದಲ್ಲಿ ಇದುವರೆಗೂ Thiruvananthapuram, Kochi, Kozhikode ಮತ್ತು Kannur ನಲ್ಲಿ ವಿಮಾನ ನಿಲ್ದಾಣಗಳು ಅಸ್ತಿತ್ವದಲ್ಲಿವೆ. KGS Developers ಕಂಪನಿಯಲ್ಲಿ Anil Dhirubhai Ambani Group (ADAG) ಶೇ. 15ರಷ್ಟು ಪಾಲು ಹೊಂದಿದೆ. K Kumaran, Gigi George ಮತ್ತು P V Sanmugam KGS ಕಂಪನಿಯ ಪ್ರವರ್ತಕರು.
ವಿಶೇಷ ಆರ್ಥಿಕ ವಲಯದಲ್ಲಿ ತಲೆಯೆತ್ತಲಿರುವ ಈ ವಿಮಾನ ನಿಲ್ದಾಣದ ಬಳಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶಾಪಿಂಗ್ ಮಾಲ್ ಗಳು, ಸ್ಟಾರ್ ಹೋಟೆಲುಗಳು ಮತ್ತು ಅಂತಾರಾಷ್ಟ್ರೀಯ ಶಾಲೆ ನಿರ್ಮಾಣವಾಗಲಿದೆ. ಸುಮಾರು 5,000 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ.












Click it and Unblock the Notifications