School Holiday: ರಣರಕ್ಕಸ ಮಳೆಗೆ ಬೆದರಿದ ಜನ: ವಿಮಾನ ಹಾರಾಟ, ರೈಲು, ಮೆಟ್ರೋ ಸೇವೆ ಸ್ಥಗಿತ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
School Holiday: ದೇಶದ ಹಲವೆಡೆ ಮತ್ತೆ ಮಳೆರಾಯ ಆರ್ಭಟ ಮುಂದುವರೆಸಿದ್ದಾನೆ. ಅದರಲ್ಲೂ ಪಶ್ಚಿಮ ಬಂಗಾಳದ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಹಿನ್ನೆಲೆ ಮನೆ-ಮಠಗಳು, ರಸ್ತೆಗಳು ಜಲಾವೃತವಾಗಿವೆ. ಪರಿಣಾಮ ಇಲ್ಲಿನ ಜನರು ಅಕ್ಷರಸಃ ನಲುಗಿಹೋಗಿದ್ದಾರೆ. ಅಲ್ಲದೆ, ಪ್ರಾಣ ಹಾನಿಗಳು ಕೂಡ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಭಾಗಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕು ಪಡೆದಿದೆ. ಇದೀಗ ಪಶ್ಚಿಮ ಬಂಗಾಳದ ಕೊಲ್ಕತ್ತಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿದ ಮಳೆಗೆ ಐವರು ಬಲಿಯಾಗಿದ್ದಾರೆ. ಜೊತೆಗ ಇಲ್ಲಿನ ಜನರ ಜೀವನ ಅಕ್ಷರಸಃ ಅಸ್ತವ್ಯಸ್ತವಾಗಿದೆ. ಈಗಲೂ ಕೂಡ ಭಾರೀ ಮಳೆ ಮುಂದುವರೆದ ಹಿನ್ನೆಲೆ ಇನ್ನೂ ಏನೆಲ್ಲಾ ಕಾದಿದೆಯೋ ಎನ್ನುವ ಆತಂಕದಲ್ಲಿ ಇಲ್ಲಿನ ಜನರಿದ್ದಾರೆ.

ಭಾರೀ ಮಳೆಯಿಂದಾಗಿ ಕೋಲ್ಕತ್ತಾದ ಬೆನಿಯಾಪುಕುರ್, ಕಾಳಿಕಾಪುರ್, ನೇತಾಜಿನಗರ ಗರಿಯಾಹತ್ ಮತ್ತು ಎಕ್ಸಾಲ್ಟುರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಸಾವುಗಳು ಸಂಭವಿಸಿವೆ. ರಸ್ತೆಗಳೆಲ್ಲಾ ಚರಂಡಿಯಂತೆ ಮಾರ್ಪಟ್ಟರೆ, ಉಪನಗರ ರೈಲು ಮತ್ತು ಮೆಟ್ರೋ ಸೇವೆಗಳಿಗೂ ಅಡಚಣೆಯಾಗಿದೆ. ಅಲ್ಲದೆ, ನಗರದ ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದೆ. ಈ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ.
ಮಾಹಿತಿ ಪ್ರಕಾರ, ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ರಣಮಳೆ ಸುರಿದಿದೆ. ಗರಿಯಾ ಕಾಮದಹರಿಯಲ್ಲಿ ಕೆಲವೇ ಗಂಟೆಗಳಲ್ಲಿ 332 ಮಿಲಿ ಮೀಟರ್, ಜೋಧಪುರ ಪಾರ್ಕ್ 285 ಮಿಲಿ ಮೀಟರ್, ಕಾಳಿಘಾಟ್‌ನಲ್ಲಿ 280 ಮಿಲಿ ಮೀಟರ್, ಟಾಪ್ತಿಯಾ 275 ಮಿಲಿ ಮೀಟರ್ ಹಾಗೂ ಬ್ಯಾಲಿಗಂಗೆಯಲ್ಲಿ 264 ಮಿಲಿ ಮೀಟರ್ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ನಿರಂತರವಾಗಿ ಸುರಿದ ರಣರಕ್ಕಸ ಮಳೆಯಿಂದ ಬೇರೆ ನಗರಗಳಿಂದ ಕೋಲ್ಕತ್ತಾಗೆ ಹೋಗುವ ಮತ್ತು ಅಲ್ಲಿನ ಹೊರಡುವ ವಿಮಾನಗಳ ಹಾರಾಟಕ್ಕೂ ಅಡಚಣೆಯಾಗಿದೆ. ಈಗಾಗಲೇ ಕೆಲವು ವಿಮಾನ ಸಂಸ್ಥೆಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಇಲ್ಲಿಂದ ಹೊರಡುವ ಹಾಗೂ ಬೇರೆ ನಗರಗಳಿಂದ ವಿಮಾನಗಳು ಬರುವ ಸಮಯ ವಿಳಂಬ ಆಗಬಹುದು ಅಂತಲೂ ಮುಂಜಾಗ್ರತಾ ಕ್ರಮವಾಗಿ ತಿಳಿಸಿವೆ.
ಮತ್ತೊಂದಡೆ ರೈಲು ಹಳಿಗಳು ಸಹ ಜಲಾವೃತವಾಗಿರುವ ಹಿನ್ನೆಲೆ ನಗರ ಮತ್ತು ಉಪನಗರಗಳಲ್ಲಿ ರೈಲು ಮತ್ತು ಮೆಟ್ರೋ ಸೇವೆಗಳು ವ್ಯತ್ಯಯ ಆಗಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಶಾಹಿದ್ ಖುದಿರಾಮ್ ಮತ್ತು ಮೈದಾನ್ ನಿಲ್ದಾಣಗಳ ನಡುವೆ ಬೆಳಗ್ಗೆಯಿಂದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೋಲ್ಕತ್ತಾ ಮೆಟ್ರೋ ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಭಾರೀ ಮಳೆ ಮತ್ತು ರಸ್ತೆಗಳು ಜಲಾವೃತಗೊಂಡ ಹಿನ್ನೆಲೆ ರಾಜ್ಯದ ಹಲವೆಡೆ ವಿದ್ಯಾರ್ಧತಿಗಳ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಮುಂದಿನ ಹಲವು ಗಂಟೆಗಳವರೆಗೂ ಭಾರೀ ಮಳೆ ಮುಂದುವರೆಯಲಿದೆ ಅಂತಲೂ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನ ರವಾನೆ ಮಾಡಿದೆ. ಮತ್ತೊಂದೆಡೆ ಚಂಡಮಾರುತ ಪ್ರಸರಣ ಹಿನ್ನೆಲೆ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ಎಚ್ಚರಿಕೆ ನೀಡಿದೆ.












Click it and Unblock the Notifications