5 ರಾಜ್ಯಗಳ ಚುನಾವಣಾ ಫಲಿತಾಂಶ; ತಪ್ಪು ಮಾಹಿತಿ ನಿಯಂತ್ರಿಸುವ ಸಲಹೆ ನೀಡಿದ 'ಕೂ' ಆ್ಯಪ್
ನವದೆಹಲಿ, ಮಾರ್ಚ್ 5: ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ಚುನಾವಣಾ ಫಲಿತಾಂಶಗಳಿಗೆ ಮುಂಚಿತವಾಗಿ, ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರಿಯುತ ರೀತಿಯಲ್ಲಿ ಬಳಸಿಕೊಳ್ಳಲು ಮತ್ತು ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ತಡೆಯಲು ಬಳಕೆದಾರರನ್ನು ಸಂವೇದನಾಶೀಲಗೊಳಿಸಲು ಕೂ ಆ್ಯಪ್ ಸಲಹೆಗಳನ್ನು ನೀಡಿದೆ.
ಕೂ ಆ್ಯಪ್ ಸಲಹೆಯ ಭಾಗವಾಗಿ, ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ 10 ಭಾಷೆಗಳಲ್ಲಿ ಕೂ ತನ್ನ ಸಮುದಾಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಭಾರತೀಯ ಸನ್ನಿವೇಶಕ್ಕೆ ತಕ್ಕಂತಿದ್ದು, ಜವಾಬ್ದಾರಿಯುತ ಆನ್‌ಲೈನ್ ವರ್ತನೆಯನ್ನು ವಿವರಿಸುವಾಗ ಹೊಸ ಬಳಕೆದಾರರಿಗೆ ಆರೋಗ್ಯಕರ ವಿಷಯವನ್ನು ಹಂಚಿಕೊಳ್ಳಲು ಬಳಕೆದಾರರನ್ನು ಸಶಕ್ತಗೊಳಿಸುತ್ತದೆ.
ಮಾರ್ಗಸೂಚಿಗಳು ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಗೆ ನಿರ್ದಿಷ್ಟ ಉಲ್ಲೇಖಗಳನ್ನು ಹೊಂದಿವೆ ಮತ್ತು ಪೋಸ್ಟ್ ಮಾಡುವ ಮೊದಲು ಮಾಹಿತಿಯನ್ನು ಪರಿಶೀಲಿಸುವ ಪ್ರಾಮುಖ್ಯತೆಯ ಕುರಿತು ಬಳಕೆದಾರರಿಗೆ ತಿಳಿಸುತ್ತದೆ, ಆದರೆ ಸಾಕಷ್ಟು ಪುರಾವೆಗಳಿಲ್ಲದೆ ಮಾಹಿತಿಯನ್ನು 'ನಕಲಿ' ಎಂದು ಕರೆಯುವುದನ್ನು ತಡೆಯುತ್ತದೆ.

ಚುನಾವಣಾ ಫಲಿತಾಂಶದ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯ ಹೆಚ್ಚಳ ಸಾಮಾನ್ಯವಾಗಿ ಕಂಡು ಬರುವುದರಿಂದ ಮಾಹಿತಿಯನ್ನು ದೃಢೀಕರಿಸುವುದಕ್ಕಾಗಿ ಕೂ ಬಳಕೆದಾರರನ್ನು ಪರಿಶೀಲಿಸುವ ಅನುಮತಿಯನ್ನು ಮೂರನೇ ವ್ಯಕ್ತಿಗಳಾದ ಸತ್ಯ- ಪರೀಕ್ಷಕರಿಗೆ ಸಕ್ರಿಯಗೊಳಿಸಿದೆ.
ಸಾಮಾಜಿಕ ಮಾಧ್ಯಮ ಮಧ್ಯವರ್ತಿಯಾಗಿರುವುದರಿಂದ, ಕೂ ಸ್ವತಃ ನಿಖರತೆಯನ್ನು ನಿರ್ಣಯಿಸುವುದಿಲ್ಲ ಅಥವಾ ಕಾನೂನಿನಿಂದ ಅಗತ್ಯವಿಲ್ಲದಿದ್ದರೆ ವಿಷಯದೊಂದಿಗೆ ಹಸ್ತಕ್ಷೇಪ ಮಾಡುವುದಿಲ್ಲ. ಹೀಗಾಗಿ ಸತ್ಯ-ಪರೀಕ್ಷಕರಿಗೆ ಪ್ರವೇಶವನ್ನು ಸಕ್ರಿಯಗೊಳಿಸುವ ಮೂಲಕ, ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಆನ್‌ಲೈನ್‌ನಲ್ಲಿ ನಿರ್ಮಿಸಲು ಅದರ ಬದ್ಧತೆಯನ್ನು ಪುನರುಚ್ಚರಿಸಿದೆ.
ಬಾಟ್‌ಗಳು ಅಥವಾ ಸ್ಪ್ಯಾಮ್ ಖಾತೆಗಳಿಂದ ನಕಲಿ ಸುದ್ದಿಗಳು ಹೆಚ್ಚಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ, ಕೂ- ವಿಶ್ವಾಸಾರ್ಹ ವೇದಿಕೆಯಾಗಿರುವುದರಿಂದ- ತಪ್ಪು ಮಾಹಿತಿಯನ್ನು ಮಿತಿಗೊಳಿಸಲು ಅಂತಹ ಖಾತೆಗಳ ಕ್ರಿಯೆಗಳನ್ನು ಮೊದಲೇ ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಿರ್ಬಂಧಿಸುತ್ತದೆ.
1ನೇ ಡಿಸೆಂಬರ್ 2021 ರಿಂದ 28 ಫೆಬ್ರವರಿ 2022 ರವರೆಗೆ, ಪ್ಲಾಟ್‌ಫಾರ್ಮ್ 4,720ಕ್ಕೂ ಹೆಚ್ಚು ಹ್ಯಾಂಡಲ್‌ಗಳನ್ನು ಗುರುತಿಸಿದೆ. ಸುದ್ದಿ ವಾಹಿನಿಗಳು ಅಥವಾ ಪತ್ರಕರ್ತರೆಂದು ಅಥವಾ ಸುದ್ದಿ ಮಾಧ್ಯಮಗಳಿಗೆ ಸಂಬಂಧಿಸಿದ್ದೆವೆಂದು ಗುರುತಿಸಿಕೊಂಡ 834 ಹ್ಯಾಂಡಲ್‌ಗಳನ್ನು ಸ್ಪ್ಯಾಮ್ ಅಥವಾ ಅನಗತ್ಯ ವಿಷಯದ ಕಾರಣ ನಿರ್ಬಂಧಿಸಲಾಗಿದೆ. ಕೂ ಅವರ ನಡವಳಿಕೆಯನ್ನು ಗಮನಿಸುತ್ತಲೇ ಇರುತ್ತಾರೆ.

ಕೂ, ಸಿಇಒ ಮತ್ತು ಸಹ-ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಹೇಳುವಂತೆ, "ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗಾಗಿರುವ ಸಾಮಾಜಿಕ ವೇದಿಕೆಯಾಗಿ ಬಳಕೆದಾರರನ್ನು ಅಭಿನಂದಿಸುತ್ತ, ಹೆಚ್ಚು ಸೃಜನಶೀಲತೆ ನಾವೀನ್ಯತೆಯನ್ನು ಪ್ರೋತ್ಸಾಹಿಸಲು ಆನ್‌ಲೈನ್‌ನಲ್ಲಿ ಹೆಚ್ಚು ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಶಕ್ತಿ ನೀಡುತ್ತ, ತಪ್ಪು ಮಾಹಿತಿಯು ಸಂದಿಗ್ದ ಘಟನೆಗಳ ಸಲಹೆ ಹಾಗೂ ಸೂಚನೆ ನೀಡುವ ಮೂಲಕ ಕೂ- ಜವಾಬ್ದಾರಿಯುತ ವೇದಿಕೆಯಾಗಿ- ನಕಲಿ ಸುದ್ದಿ ಮತ್ತು ದುರುದ್ದೇಶಪೂರಿತ ಪ್ರಸರಣವನ್ನು ನಿರ್ಬಂಧಿಸಲು ಸಹಾಯ ಮಾಡುತ್ತದೆ.
ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ, ಸಲಹೆಯು ಬಳಕೆದಾರರನ್ನು, ವಿಶೇಷವಾಗಿ ಹೊಸ ಬಳಕೆದಾರರನ್ನು ಆನ್‌ಲೈನ್‌ನಲ್ಲಿ ಹೆಚ್ಚು ಅರ್ಥಪೂರ್ಣ ಸಂಭಾಷಣೆಗಳನ್ನು ನಡೆಸಲು ಧನಾತ್ಮಕವಾಗಿ ಗೌರವಪೂರ್ವಕವಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಕೂ ಬಳಕೆದಾರರಿಗೆ ಸುರಕ್ಷಿತವಾಗಿ ತೊಡಗಿಸಿಕೊಳ್ಳುವ ಅನುಭವವನ್ನು ಒದಗಿಸಲು ನಿರಂತರ ಶ್ರಮಿಸುತ್ತಿದ್ದು, ಈ ವಿಷಯವಾಗಿ ಉತ್ತಮ ಅಭ್ಯಾಸಗಳನ್ನು ಗುರುತಿಸಲು ಕೂ ಪ್ರಯತ್ನಿಸುತ್ತದೆ.
ಚುನಾವಣೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮದ ನೈತಿಕ ಬಳಕೆಯನ್ನು ಬಯಸುತ್ತಿರುವ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಮೂಲಕ ಸ್ವಯಂಪ್ರೇರಿತ ನೀತಿ ಸಂಹಿತೆಗೆ ಸಹಿ ಹಾಕಿರುವ ಕೂ, ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ನಂಬಿಕೆಯನ್ನು ನಿರ್ಮಿಸಲು ಮತದಾರರಲ್ಲಿ ಅರಿವು ಮೂಡಿಸುತ್ತದೆ. ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಹಕ್ಕುಗಳು ಮತ್ತು ಜವಾಬ್ದಾರಿಗಳ ಆಧಾರದ ಮೇಲೆ ಮೊದಲ ಬಾರಿಗೆ ಮತದಾರರನ್ನು ಸಬಲೀಕರಣಗೊಳಿಸಲು, ವೇದಿಕೆಯು ಬಹು ಭಾಷೆಗಳಲ್ಲಿ ಚುನಾವಣೆಗೆ ಮುಂಚಿತವಾಗಿ ಕೂ ಮತದಾರರ ಮಾರ್ಗದರ್ಶಿ- ಮತ್ತು PledgeToVote, UP ಕಾ ಪ್ರಣಾಳಿಕೆಯಂತಹ ಮತದಾರರ ಜಾಗೃತಿ ಅಭಿಯಾನಗಳನ್ನು ಯಶಸ್ವಿಯಾಗಿ ಕೂ ಬಿಡುಗಡೆ ಮಾಡುವ ಮೂಲಕ ಕಾರ್ಯಗತಗೊಳಿಸಿದೆ.
ಕೂ ಬಗ್ಗೆ
Koo (ಕೂ) ಅಪ್ಲಿಕೇಶನ್ ಮಾರ್ಚ್ 2020ರಲ್ಲಿ ಭಾರತೀಯರು ಆನ್‌ಲೈನ್‌ನಲ್ಲಿ ತಮ್ಮ ಮಾತೃಭಾಷೆಯಲ್ಲಿಯೇ ಮನದಾಳದ ಮಾತುಗಳನ್ನು ವ್ಯಕ್ತಪಡಿಸಲು ಅನುವು ನೀಡುವ ಬಹು-ಭಾಷಾ, ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಆರಂಭವಾಯಿತು. Koo (ಕೂ) ಅಪ್ಲಿಕೇಶನ್‌ನ ಸ್ಮಾರ್ಟ್ ವೈಶಿಷ್ಟ್ಯಗಳು ಪ್ರಸ್ತುತ ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿ 10 ಭಾಷೆಗಳಲ್ಲಿ ಲಭ್ಯವಿದೆ.
ಭಾರತದಲ್ಲಿ ಶೇ.10ಕ್ಕಿಂತ ಹೆಚ್ಚು ಜನರು ಇಂಗ್ಲಿಷ್‌ನಲ್ಲಿ ಮಾತನಾಡುವುದಿಲ್ಲ. Koo (ಕೂ) ಅಪ್ಲಿಕೇಶನ್ ಅಂತಹ ಭಾರತೀಯರ ಧ್ವನಿಯಾಗಿದೆ. ಬಳಕೆದಾರರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಅವರ ಆಯ್ಕೆಯ ಭಾಷೆಯಲ್ಲಿ ಮುಕ್ತವಾಗಿ ತಮ್ಮ ಮನದಾಳವನ್ನು ವ್ಯಕ್ತಪಡಿಸಲು ಅವರಿಗೆ ಅವಕಾಶ ಕಲ್ಪಿಸುತ್ತಿದೆ. Koo (ಕೂ) ನಲ್ಲಿನ ಹೊಸ ಫೀಚರ್‌ಗಳಲ್ಲಿ, ಅನುವಾದವು ಮೂಲ ಪಠ್ಯದ ಭಾವನೆ ಮತ್ತು ಸಂದರ್ಭಗಳಿಗೆ ಚ್ಯುತಿಯಾಗದಂತೆ ಭಾರತೀಯ ಭಾಷೆಗಳಾದ್ಯಂತ ವಿಷಯದ ತಕ್ಷಣದ ಅನುವಾದವನ್ನು ನೀಡುತ್ತದೆ. ಇದು ಹೆಚ್ಚಿನ ಜನರನ್ನು ತಲುಪಲು ಸಹಕಾರಿಯಾಗಿದೆ ಮತ್ತು ಬಳಕೆದಾರರಿಗೆ ಹೆಚ್ಚು ಆಕರ್ಷಕವಾಗಿದೆ.
Koo (ಕೂ) ಅಪ್ಲಿಕೇಶನ್ ಈಗಾಗಲೇ 20 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದ್ದು ಎಮಿನೆನ್ಸ್ ಹೊಂದಿರುವ ರಾಜಕೀಯ, ಕ್ರೀಡೆ, ಮಾಧ್ಯಮ, ಮನರಂಜನೆ, ಆಧ್ಯಾತ್ಮಿಕತೆ ಮತ್ತು ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳ ಗಣ್ಯರು ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಅನುಯಾಯಿಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಒದಗಿಸುತ್ತದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್‌ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications