Lokniti-CSDS Exit Poll Result 2022: ಐದು ರಾಜ್ಯಗಳಲ್ಲಿ ಯಾರಿಗೆ ಗದ್ದುಗೆ?

ನವದೆಹಲಿ, ಮಾರ್ಚ್ 9: ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳಲಿದ್ದು, ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷವೇ ಪಟ್ಟ ಗಿಟ್ಟಿಸಿಕೊಳ್ಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳುವುದಕ್ಕೆ ಕೆಲ ಗಂಟೆಗಳು ಬಾಕಿ ಇರುವಂತೆ ಬುಧವಾರ ಲೋಕನೀತಿ-CSDS ಸಂಸ್ಥೆಯು ಮತದಾನೋತ್ತರ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯು ಶೇ.43ರಷ್ಟು ಮತಗಳನ್ನು ಗಳಿಸಲಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಶೇ.35ರಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ಪ್ರಮುಖ ಪ್ರತಿಸ್ಪರ್ಧಿ ಆಗಲಿದೆ ಎಂದು ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಯಾವ ಪಕ್ಷಕ್ಕೆ ಮತದಾರರು ಮಣೆ ಹಾಕಲಿದ್ದಾರೆ ಎಂಬ ಬಗ್ಗೆ ಹಲವು ಸುದ್ದಿಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ನಡೆಸಿವೆ. ಆದರೆ ಫಲಿತಾಂಶಕ್ಕೆ ಕೆಲವು ಗಂಟೆಗಳು ಬಾಕಿ ಇರುವಂತೆ ಪ್ರಕಟಿಸಿದ ಲೋಕನೀತಿ-CSDS ಎಕ್ಸಿಟ್ ಪೋಲ್ ಉಳಿದ ಸಮೀಕ್ಷೆಗಳಿಗಿಂತ ಹೇಗೆ ಭಿನ್ನವಾಗಿದೆ. ಈ ಸಮೀಕ್ಷೆಯ ಅಂಕಿ-ಅಂಶಗಳು ಏನು ಹೇಳುತ್ತವೆ?, ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರದ ಗದ್ದುಗೆ ಒಲಿಯಲಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಯುಪಿಗೆ ಸಂಬಂಧಿಸಿದ ಸಮೀಕ್ಷೆ ಚಿತ್ರಣ

ಯುಪಿಗೆ ಸಂಬಂಧಿಸಿದ ಸಮೀಕ್ಷೆ ಚಿತ್ರಣ

ಉತ್ತರ ಪ್ರದೇಶದ ಒಟ್ಟು 403 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವಿಗೆ 202 ಸ್ಥಾನಗಳು ಬೇಕು. ಯುಪಿಗೆ ಸಂಬಂಧಿಸಿದಂತೆ ಲೋಕನೀತಿ-CSDS ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಯಾವ ಪಕ್ಷಕ್ಕೆ ಎಷ್ಟು ಶೇಕಡಾವಾರು ಮತಗಳು ಸಿಗಲಿದೆ ಎಂಬುದನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಯುಪಿ ಲೋಕನೀತಿ-CSDS ಎಕ್ಸಿಟ್ ಪೋಲ್ ಫಲಿತಾಂಶ:

ಬಿಜೆಪಿ - ಶೇ.43

ಸಮಾಜವಾದಿ - ಶೇ.35

ಬಿಎಸ್ಪಿ - ಶೇ.15

ಕಾಂಗ್ರೆಸ್ - ಶೇ.3

ಇತರೆ - ಶೇ.4

ಪಂಜಾಬ್ ಚುನಾವಣೋತ್ತರ ಸಮೀಕ್ಷೆ ಚಿತ್ರಣ

ಪಂಜಾಬ್ ಚುನಾವಣೋತ್ತರ ಸಮೀಕ್ಷೆ ಚಿತ್ರಣ

ಪಂಜಾಬ್ ಒಟ್ಟು 117 ವಿಧಾನಸಭೆ ಕ್ಷೇತ್ರಗಳಲ್ಲಿ ಗದ್ದುಗೆ ಭಾಗ್ಯ ಒಲಿಯುವುದಕ್ಕೆ ಕನಿಷ್ಠ 59 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಪಂಜಾಬಿಗೆ ಸಂಬಂಧಿಸಿದಂತೆ ಲೋಕನೀತಿ-CSDS ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಯಾವ ಪಕ್ಷಕ್ಕೆ ಎಷ್ಟು ಶೇಕಡಾವಾರು ಮತಗಳು ಸಿಗಲಿದೆ ಎಂಬುದನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಪಂಜಾಬ್ ಲೋಕನೀತಿ-CSDS ಎಕ್ಸಿಟ್ ಪೋಲ್ ಫಲಿತಾಂಶ:

ಆಪ್ - ಶೇ.40

ಕಾಂಗ್ರೆಸ್ - ಶೇ.26

ಅಕಾಲಿ - ಶೇ.20

ಬಿಜೆಪಿ - ಶೇ.7

ಇತರೆ - ಶೇ.7

ಉತ್ತರಾಖಂಡದ ಲೋಕನೀತಿ ಎಕ್ಸಿಟ್ ಪೋಲ್ ಫಲಿತಾಂಶ

ಉತ್ತರಾಖಂಡದ ಲೋಕನೀತಿ ಎಕ್ಸಿಟ್ ಪೋಲ್ ಫಲಿತಾಂಶ

ಉತ್ತರಾಖಂಡದಲ್ಲಿ ಒಟ್ಟು 70 ವಿಧಾನಸಭೆಗಳಲ್ಲಿ 36 ಸ್ಥಾನಗಳನ್ನು ಗೆದ್ದುಕೊಂಡ ಪಕ್ಷವು ಸರ್ಕಾರ ರಚಿಸುವ ಅಧಿಕಾರವನ್ನು ಪಡೆದುಕೊಳ್ಳುತ್ತದೆ. ಉತ್ತರಾಖಂಡಕ್ಕೆ ಸಂಬಂಧಿಸಿದಂತೆ ಲೋಕನೀತಿ-CSDS ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಯಾವ ಪಕ್ಷಕ್ಕೆ ಎಷ್ಟು ಶೇಕಡಾವಾರು ಮತಗಳು ಸಿಗಲಿದೆ ಎಂಬುದನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಉತ್ತರಾಖಂಡ ಲೋಕನೀತಿ-CSDS ಎಕ್ಸಿಟ್ ಪೋಲ್ ಫಲಿತಾಂಶ:

ಬಿಜೆಪಿ - ಶೇ.43

ಕಾಂಗ್ರೆಸ್ - ಶೇ.38

ಆಪ್ - ಶೇ.3

ಬಿಎಸ್ ಪಿ - ಶೇ.4

ಇತರೆ - ಶೇ.12

ಗೋವಾಗೆ ಸಂಬಂಧಿಸಿದ ಎಕ್ಸಿಟ್ ಪೋಲ್ ಫಲಿತಾಂಶ

ಗೋವಾಗೆ ಸಂಬಂಧಿಸಿದ ಎಕ್ಸಿಟ್ ಪೋಲ್ ಫಲಿತಾಂಶ

ಗೋವಾದಲ್ಲಿ ಒಟ್ಟು 40 ವಿಧಾನಸಭೆಗಳಿಗೆ ಚುನಾವಣೆ ನಡೆದಿದ್ದು ಮ್ಯಾಜಿಕ್ ನಂಬರ್ 21 ಆಗಿದೆ. ಗೋವಾಗೆ ಸಂಬಂಧಿಸಿದಂತೆ ಲೋಕನೀತಿ-CSDS ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಯಾವ ಪಕ್ಷಕ್ಕೆ ಎಷ್ಟು ಶೇಕಡಾವಾರು ಮತಗಳು ಸಿಗಲಿದೆ ಎಂಬುದನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಗೋವಾದ ಲೋಕನೀತಿ-CSDS ಎಕ್ಸಿಟ್ ಪೋಲ್ ಫಲಿತಾಂಶ:

ಬಿಜೆಪಿ - ಶೇ.32

ಕಾಂಗ್ರೆಸ್ - ಶೇ.29

ಎಐಟಿಸಿ - ಶೇ.14

ಆಪ್ - ಶೇ.7

ಆರ್ ಜಿ - ಶೇ. 8

ಇತರೆ - ಶೇ.10

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+