ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್: ಮೊದಲ ಹಂತದಲ್ಲಿ ನಮಗೇ ಜಯ, ಕಾಂಗ್ರೆಸ್: ಇದು ಪಕ್ಕಾ ಫೇಕ್ ಎಂದ ಚಾಣಕ್ಯ

|
Google Oneindia Kannada News

ಶನಿವಾರ (ಡಿ 9) ನಡೆದ ಗುಜರಾತ್ ಅಸೆಂಬ್ಲಿಯ 89ಕ್ಷೇತ್ರಗಳಲ್ಲಿ ನಮಗೇ ಜಯ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಇದನ್ನು 'ಪಕ್ಕಾ ಫೇಕ್' ಎಂದು ಹೆಚ್ಚುಕಮ್ಮಿ ಕರಾರುವಕ್ಕಾಗಿ ಸಮೀಕ್ಷೆ ನಡೆಸುವ 'ಟುಡೇಸ್ ಚಾಣಕ್ಯ' ಸ್ಪಷ್ಟನೆ ನೀಡಿದೆ.

ಎಐಸಿಸಿಯ ರಾಷ್ಟ್ರೀಯ ಸಂಯೋಜಕ ಮತ್ತು ಗುಜರಾತ್ ಐಟಿ ಘಟಕದ ಚೇರ್ಮನ್ ಆಗಿರುವ ರೋಹನ್ ಗುಪ್ತಾ, 'ಕಾಂಗ್ರೆಸ್ ಜೀತ್ ರಹಾಹೇ' ಎಂದು ಚಾಣಕ್ಯ ಇಂಡಿಯಾ ಹೆಸರಿರುವ ಪಿಪಿಟಿ ಇಮೇಜ್ ಅನ್ನು ಲಗತ್ತಿಸಿ ಟ್ವೀಟ್ ಮಾಡಿದ್ದರು.

ಗುಜರಾತ್ ಚುನಾವಣೆ, ಇವಿಎಂ ಮೇಲೆ ಶಂಕೆ: ಚುನಾವಣಾ ಆಯೋಗ ನೀಡಿದ ಸ್ಪಷ್ಟನೆಗುಜರಾತ್ ಚುನಾವಣೆ, ಇವಿಎಂ ಮೇಲೆ ಶಂಕೆ: ಚುನಾವಣಾ ಆಯೋಗ ನೀಡಿದ ಸ್ಪಷ್ಟನೆ

ಈ ಟ್ವೀಟಿಗೆ ಕೂಡಲೇ ಪ್ರತಿಕ್ರಿಯಿಸಿರುವ ಚಾಣಕ್ಯ, ಇದು ಪಕ್ಕಾ ಫೇಕ್ ಸುದ್ದಿ, ಇದನ್ನು ನಂಬಬೇಡಿ, ಎಲ್ಲರೂ ನಮ್ಮ ಈ ಟ್ವೀಟ್ ಅನ್ನು ಶೇರ್ ಮಾಡಿ ಎಂದು ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದೆ.

ರೋಹನ್ ಗುಪ್ತಾ ಮಾಡಿರುವ ಟ್ವೀಟ್ ನಲ್ಲಿ, ನಾವು ಗೆಲ್ಲುತ್ತಿದ್ದೇವೆ, ನಮಗೆ 65, ಬಿಜೆಪಿ 22, ಇತರರು ಎರಡು ಕ್ಷೇತ್ರದಲ್ಲಿ ಗೆಲ್ಲಲಿದ್ದಾರೆಂದು ಟ್ವೀಟ್ ಮಾಡಿದ್ದರು. 'The first round goes in favour of Congress' ಎಂದು ಬರೆದು ನಂತರ ಗುಜರಾತಿ ಭಾಷೆಯಲ್ಲಿ ಜಿಎಸ್ಟಿ ಮುಂತಾದ ವಿಚಾರ ಪ್ರಸ್ತಾವಿಸಿ ರೋಹನ್ ಟ್ವೀಟ್ ಮಾಡಿದ್ದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ತಾನಿರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿರುವ ರೋಹನ್, ಗುಜರಾತ್ ಮೊದಲ ಹಂತದ ಚುನಾವಣೆಯ ಫಲಿತಾಂಶದ ಬಗ್ಗೆ ಚಾಣಕ್ಯ ಹೆಸರಿನಲ್ಲಿ ಸರ್ವೇ ಪ್ರಕಟಿಸಿ, ಟ್ವಿಟ್ಟಿಗರಿಂದ ಉಗಿಸಿಕೊಂಡಿದ್ದಾರೆ. ಮುಂದೆ ಓದಿ..

ಕಾಂಗ್ರೆಸ್ 65, ಬಿಜೆಪಿ 22, ಇತರರು ಎರಡು

ರೋಹನ್ ಗುಪ್ತಾ ಮಾಡಿರುವ ಟ್ವೀಟ್ ಮತ್ತು ಅದಕ್ಕೆ ಬಳಸಿಕೊಂಡ ಇಮೇಜ್ ಇಲ್ಲಿದೆ. ಗುಜರಾತಿ ಭಾಷೆಯಲ್ಲಿ ಬರೆದಿರುವ ಒಕ್ಕಣೆಗಳು, ಕಾಂಗ್ರೆಸ್ 65, ಬಿಜೆಪಿ 22, ಇತರರು ಎರಡು ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ತನ್ನ ಟ್ವೀಟ್ ನಲ್ಲಿ ಹೇಳಿದ್ದಾರೆ.

ಟುಡೇಸ್ ಚಾಣಕ್ಯ ಸ್ಪಷ್ಟಪಡಿಸಿದ ಮೇಲೆ, ಮತ್ತೆ ಟ್ವೀಟ್ ಮಾಡಿರುವ ರೋಹನ್

ಟುಡೇಸ್ ಚಾಣಕ್ಯ ಸ್ಪಷ್ಟಪಡಿಸಿದ ಮೇಲೆ, ಮತ್ತೆ ಟ್ವೀಟ್ ಮಾಡಿರುವ ರೋಹನ್

ರೋಹನ್ ಗುಪ್ತಾ ಮಾಡಿರುವ ಟ್ವೀಟಿಗೂ ನಮಗೂ ಏನೂ ಸಂಬಂಧವಿಲ್ಲ ಎಂದು ಟುಡೇಸ್ ಚಾಣಕ್ಯ ಸ್ಪಷ್ಟಪಡಿಸಿದ ಮೇಲೆ, ಮತ್ತೆ ಟ್ವೀಟ್ ಮಾಡಿರುವ ರೋಹನ್, ಗುಜರಾತ್ ಐಟಿ ಘಟಕ chanakyaindia.in ಮೂಲಕ ಆನ್ಲೈನ್ ಸರ್ವೇ ನಡೆಸಿತ್ತು. ಅದರ ಫಲಿತಾಂಶವನ್ನು ನಾನು ಹಾಕಿದ್ದು, ಟುಡೇಸ್ ಚಾಣಕ್ಯಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ ಎಂದು ರೋಹನ್ ಹೇಳಿದ್ದಾರೆ. chanakyaindia.in ಈ ವೆಬ್ಸೈಟ್ [email protected] ಈಮೇಲ್ ಐಡಿಯಲ್ಲಿ ನೊಂದಣಿಯಾಗಿದೆ.

ಟುಡೇಸ್ ಚಾಣಕ್ಯ ಮೊದಲೇ ರೆಡಿ ಮಾಡಿಕೊಂಡಿತ್ತೇ ಎನ್ನುವ ಸಂಶಯ

ಟುಡೇಸ್ ಚಾಣಕ್ಯ ಮೊದಲೇ ರೆಡಿ ಮಾಡಿಕೊಂಡಿತ್ತೇ ಎನ್ನುವ ಸಂಶಯ

ಡಿಸೆಂಬರ್ ಹದಿನಾಲ್ಕರಂದು ಎರಡನೇ ಹಂತದ ಚುನಾವಣೆ ಮುಗಿದ ನಂತರ ಹೊರಬೀಳುವ ಎಕ್ಸಿಟ್ ಪೋಲ್ ಫಲಿತಾಂಶವನ್ನು ಎಲ್ಲರಿಗಿಂತ ನಾವೇ ಮೊದಲು ನೀಡಬೇಕು ಎನ್ನುವ ಪೈಪೋಟಿ ಇರುವುದರಿಂದ, ರೋಹನ್ ಲಗತ್ತಿಸಿರುವ ಇಮೇಜನ್ನು, ಟುಡೇಸ್ ಚಾಣಕ್ಯ ಮೊದಲೇ ರೆಡಿ ಮಾಡಿಕೊಂಡಿತ್ತೇ ಎನ್ನುವ ಸಂಶಯ ಕೆಲವರಲ್ಲಿ ಕಾಡ ತೊಡಗಿದೆ. (ಚಿತ್ರದಲ್ಲಿ ರೋಹನ್ ಗುಪ್ತಾ)

ಕಾಂಗ್ರೆಸ್ ಸರ್ವೇಯನ್ನೂ ಫೇಕ್ ಮಾಡಲಾರಂಭಿಸಿದೆ

ಕಾಂಗ್ರೆಸ್ ಸರ್ವೇಯನ್ನೂ ಫೇಕ್ ಮಾಡಲಾರಂಭಿಸಿದೆ

ಕಾಂಗ್ರೆಸ್ ಸರ್ವೇಯನ್ನೂ ಫೇಕ್ ಮಾಡಲಾರಂಭಿಸಿದೆ, ಇದು ಮತದಾರರನ್ನು ದಾರಿತಪ್ಪಿಸುವ ಕೆಲಸ, ಕಾಂಗ್ರೆಸ್ ಐಟಿ ಘಟಕದ ಫೇಕ್ ಸರ್ವೇ ಮುಂತಾದ ಟ್ವೀಟುಗಳು.

ಬಿಜೆಪಿಯಿಂದಲೂ ಸುಳ್ಳುಸುಳ್ಳು ಸರ್ವೇ ಬಿತ್ತರಗೊಂಡಿದೆ

ಬಿಜೆಪಿಯಿಂದಲೂ ಸುಳ್ಳುಸುಳ್ಳು ಸರ್ವೇ ಬಿತ್ತರಗೊಂಡಿದೆ

ಸಾಮಾಜಿಕ ತಾಣವನ್ನು ಕಾಂಗ್ರೆಸ್ ದುರುಪಯೋಗ ಪಡಿಸಿಕೊಳ್ಳುತ್ತಿದೆ, ಕಾಂಗ್ರೆಸ್ಸಿಗರು ಸುಳ್ಳು ಸರ್ವೇಯನ್ನು ಹರಡುತ್ತಿದ್ದಾರೆ. ಬಿಜೆಪಿಯಿಂದಲೂ ಸುಳ್ಳುಸುಳ್ಳು ಸರ್ವೇ ಬಿತ್ತರಗೊಂಡಿದೆ.

English summary
First phase of Gujarat Assembly Elections for 89 seats, online survey by Gujarat Congress IT Cell. We have nothing to do with this survey, A clarification by Today's Chanakya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X