ಕೇರಳದಲ್ಲಿ ಪಟಾಕಿ ಸಿಡಿದು ಭಾರೀ ಅಗ್ನಿ ದುರಂತ, 105 ಸಾವು

Posted By:
Subscribe to Oneindia Kannada

ಕೊಲ್ಲಂ, ಏಪ್ರಿಲ್ 10 : ಕೇರಳದ ಕೊಲ್ಲಂ ಜಿಲ್ಲೆಯ ಪಾರವೂರ್ ಮೂಕಾಂಬಿಕಾ ದೇವಾಲಯದ ವಾರ್ಷಿಕೋತ್ಸವ ಸಂಭ್ರಮದ ಸಮಯದಲ್ಲಿ, ಭಾನುವಾರ ಬೆಳಿಗ್ಗೆ 3.30ಕ್ಕೆ ಪಟಾಕಿ ಸಿಡಿದು ಸಂಭವಿಸಿದ ಭೀಕರ ದುರಂತದಲ್ಲಿ 105 ಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಭಕ್ತಾದಿಗಳು ಗಾಯಗೊಂಡಿದ್ದಾರೆ.

ಭಾನುವಾರ ನಸುಕಿನಲ್ಲಿ ದೇಗುಲದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಆಕಾಶದಲ್ಲಿ ಸಿಡಿಯಬೇಕಾಗಿದ್ದ ಬಾಣಬಿರುಸುಗಳು ಅವಘಡದಿಂದಾಗಿ ನೆಲದಲ್ಲಿಯೇ ಸಿಡಿದಿದ್ದರಿಂದ ಈ ಅನಾಹುತ ಸಂಭವಿಸಿದೆ. ಪಟಾಕಿ ಸಿಡಿತದ ತೀವ್ರತೆ ಯಾವ ಮಟ್ಟದ್ದಿತ್ತೆಂದರೆ ದೇವಸ್ಥಾನದ ಒಂದು ಭಾಗ ಕೂಡ ಕುಸಿದಿದೆ.

Fire tragedy in Kollam temple in Kerala as crackers burst accidentally

ಗಾಯಾಳುಗಳನ್ನು ಕೊಲ್ಲಂನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಪಟಾಕಿ ಸ್ಫೋಟಿಸಲು ಅನುಮತಿ ನೀಡಿರಲಾಗಿರಲಿಲ್ಲ. ಆದರೆ, ಕಡೆಯ ಘಳಿಗೆಯಲ್ಲಿ ಅನುಮತಿ ನೀಡಿದ್ದರಿಂದ, ಪಟಾಕಿ ಸಿಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆದರೆ, ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರಿಂದ ಭಾರೀ ಅನಾಹುತ ಸಂಭವಿಸಿದೆ.

ಪ್ರತಿವರ್ಷ ಪಟಾಕಿಯ ಸ್ಪರ್ಧೆಯನ್ನು ಇಲ್ಲಿ ಏರ್ಪಡಿಸಲಾಗುತ್ತದೆ. ಆದರೆ ಈ ಬಾರಿ ಸ್ಪರ್ಧೆ ಏರ್ಪಟ್ಟಿರಲಿಲ್ಲ. ಪಟಾಕಿ ಪ್ರದರ್ಶನಕ್ಕೆ ಅನುಮತಿಯನ್ನೂ ನೀಡಲಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಕಟ್ಟಡದ ಒಂದು ಭಾಗ ಕುಸಿದಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿದೆ. ಅಲ್ಲದೆ, ಸುತ್ತಲಿನ ಅನೇಕ ಮನೆಗಳಿಗೂ ಹಾನಿಯಾಗಿದೆ.


ದುರ್ಘಟನೆಯ ಬಗ್ಗೆ ಕೇರಳ ಮುಖ್ಯಮಂತ್ರಿ ಊಮನ್ ಚಾಂಡಿ ಆಘಾತ ವ್ಯಕ್ತಪಡಿಸಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಸಾವಿಗೀಡಾದವರು, ಗಾಯಾಳುಗಳ ಬಗ್ಗೆ ವಿವರ ತಿಳಿಯಲು ಸಹಾಯವಾಣಿ : 0474-2512344.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fire tragedy in Mookambika temple in Paravur in Kollam district in Kerala. Fire crackers burst accidentally. Thousands of devotees had gathered to participate in the annual festival. As per initial report more than 80 people have died and more than 200 injured.
Please Wait while comments are loading...