Kolkata Airport: ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ!
ಕೊಲ್ಕತ್ತಾ: ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಢೀರ್ ಹೊತ್ತಿ ಉರಿದಿದೆ. ಭದ್ರತಾ ತಪಾಸಣೆ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ತಕ್ಷಣ ಸಿಬ್ಬಂದಿ ಪ್ರಯಾಣಿಕರನ್ನ ದೂರ ಕಳಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಶುರು ಮಾಡಿದ್ದಾರೆ.
ಇನ್ನು ದಿಢೀರ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಹೊತ್ತಿದ್ದನ್ನು ಕಂಡ ಪ್ರಯಾಣಿಕರು ಬೆಚ್ಚಿ ಬಿದ್ದರು. ಕೂಡಲೇ ಅಲರ್ಟ್ ಆಗಿದ್ದ ವಿಮಾನ ನಿಲ್ದಾಣದ ಸಿಬ್ಬಂದಿ, ಬೆಂಕಿ ಹೊತ್ತಿದ್ದ ವಿಭಾಗದಿಂದ ಜನರನ್ನ ದೂರ ಕಳುಹಿಸಿದರು. ಅಲ್ಲದೆ ಅಗ್ನಿಶಾಮಕ ಸಿಬ್ಬಂದಿ ಕೂಡ ಆ ತಕ್ಷಣವೇ ಅಲರ್ಟ್ ಆಗಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು.

ಹೀಗಾಗಿ ವಿಮಾನ ನಿಲ್ದಾಣದಲ್ಲಿ ಯಾರಿಗೂ ಸಮಸ್ಯೆ ಆಗಿಲ್ಲ ಎಂದು ತಿಳಿಸಲಾಗಿದೆ. ಬೆಂಕಿಯನ್ನ ಕೂಡಲೇ ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ಸಿಬ್ಬಂದಿ, ಘಟನೆಗೆ ಕಾರಣ ಏನು ಎಂಬುದನ್ನ ಈಗ ಹುಡುಕಾಡುತ್ತಿದ್ದಾರೆ.
#Breaking: Massive fire breaks out at a check-in counter inside Kolkata airport. Several fire tenders rushed at the spot. Pax being evacuated from the check in zone of departures as the entire airport has been engulfed by smoke @ZeeNews pic.twitter.com/o1cEjVli53
— Pooja Mehta (@pooja_news) June 14, 2023
ಬೆಂಕಿ ಹೊತ್ತಿದ ತಕ್ಷಣ ಅಲರ್ಟ್
ರಾತ್ರಿ 9:12ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ, ಡಿಪಾರ್ಚರ್ ಲಾಂಜ್‌ನ ಡಿ ಪೋರ್ಟಲ್ ಬಳಿ ಈ ಘಟನೆ ನಡೆದಿದೆ. ಕೊಲ್ಕತ್ತಾ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಪ್ರಯಾಣಿಕರು ಬೆಚ್ಚಿಬಿದ್ದರು. ಅಲ್ಲದೆ ಈ ವೇಳೆ ಏನಾಗುತ್ತಿದೆ ಅಂತಾ ನೋಡಲು ಜನರು ಗುಂಪು ಸೇರಲು ಶುರು ಮಾಡಿದ್ದರು. ಆ ತಕ್ಷಣ ವಿಮಾನ ನಿಲ್ದಾಣದ ಸಿಬ್ಬಂದಿ ಅಲರ್ಟ್ ಆಗಿ, ಕೂಡಲೇ ಜನರನ್ನ ದೂರ ಕಳಿಸಿ ಆಪಾಯ ತಪ್ಪಿಸಿದ್ದಾರೆ. ಕೆಲವೇ ನಿಮಿಷದಲ್ಲಿ ಅಲ್ಲಿಗೆ ಬಂದ 3 ಅಗ್ನಿಶಾಮಕ ವಾಹನಗಳು ಬೆಂಕಿಯನ್ನ ಹಿಡಿತಕ್ಕೆ ತಂದಿವೆ.
9:12ಕ್ಕೆ ಹೊತ್ತಿದ ಬೆಂಕಿ 9:40ಕ್ಕೆ ಖತಂ!
ಕೊಲ್ಕತ್ತಾ ವಿಮಾನ ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ ಅದೆಷ್ಟು ಮುತುವರ್ಜಿ ವಹಿಸಿ ಈ ಕಾರ್ಯಚರಣೆ ನಡೆಸಿದರು ಎಂದರೆ, ಕೆಲವೇ ನಿಮಿಷದಲ್ಲಿ ಬೆಂಕಿ ಆರಿ ಹೋಗಿತ್ತು. ಇಲ್ಲ ಎಂದರೆ ಭೀಕರ ದುರಂತಕ್ಕೆ ಇಂದು ಕೊಲ್ಕತ್ತಾ ವಿಮಾನ ನಿಲ್ದಾಣ ಸಾಕ್ಷಿ ಆಗಬೇಕಾಗಿತ್ತು. ಆದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ & ಅಗ್ನಿಶಾಮಕ ದಳದ ಸಮಯ ಪ್ರಜ್ಞೆ ಘೋರ ಆ ದುರಂತವನ್ನ ಕಂಟ್ರೋಲ್ ಮಾಡಿತ್ತು. ಕೇವಲ 30 ನಿಮಿಷದ ಅಂತರದಲ್ಲಿ ಬೆಂಕಿಯನ್ನ ನಿಯಂತ್ರಣಕ್ಕೆ ತಂದಿದ್ದರು. ಇನ್ನು ಈ ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.
ಪ್ರಯಾಣಿಕರ ಮೊಬೈಲ್‌ನಲ್ಲಿ ವಿಡಿಯೋ
ಅಗ್ನಿ ದುರಂತ ಸಂಭವಿಸಿದಾಗ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲೇ ಇದ್ದ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಘಟನೆಯ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನು ಇದ್ದಕ್ಕಿದ್ದಂತೆ ಹೊತ್ತಿಕೊಂಡ ಬೆಂಕಿಯು, ದಿಢೀರ್ ಧಗಧಗಿಸಿದೆ. ಕೂಡಲೇ ಬೆಂಕಿ ನಂದಿಸುವ ಕಾರ್ಯ ಶುರುವಾಗಿದ್ದರಿಂದ ಪರಿಸ್ಥಿತಿ ತಕ್ಷಣಕ್ಕೆ ನಿಯಂತ್ರಣಕ್ಕೆ ಬಂದಿದೆ. ವಿಡಿಯೋದಲ್ಲಿ ಬೆಂಕಿಯ ರುದ್ರ ನರ್ತನ ರೆಕಾರ್ಡ್ ಆಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications