ಮಹಾರಾಷ್ಟ್ರ: ಪ್ರಯಾಣಿಕರಿದ್ದ ರೈಲಿನ 5 ಬೋಗಿಗಳಲ್ಲಿ ದಿಢೀರ್ ಬೆಂಕಿ, ತಪ್ಪಿದ ಭಾರೀ ದುರಂತ
ಮುಂಬೈ, ಅಕ್ಟೋಬರ್ 16: ಮಹಾರಾಷ್ಟ್ರದ ಅಹ್ಮದ್‌ನಗರದಿಂದ ಹೊರಟಿದ್ದ ರೈಲಿನ ಐದು ಬೋಗಿಗಳಿಗೆ ಬೆಂಕಿ ತಗುಲಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಸ್ವಲ್ಪದರಲ್ಲಿಯೇ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಮಹಾರಾಷ್ಟ್ರ ರಾಜ್ಯದ ಉಪನಗರ ರೈಲು ಅಹ್ಮದ್ ನಗರದಿಂದ ನ್ಯೂ ಅಷ್ಠಿಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ರೈಲಿನ ಐದು ಬೋಗಿಗಳಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಯಾರಿಗೂ ಗಾಯಗಳು ಆದ ಬಗ್ಗೆ ತಿಳಿದು ಬಂದಿಲ್ಲ. ಯಾವ ಹಾನಿಯು ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮ ಸಿಬ್ಬಂದಿ ಬೆಂಕಿಯನ್ನು ರೈಲಿನ ಇನ್ನಿತರ ಬೋಗಿಗಳಿಗೆ ಹರಡುವ ಮುನ್ನವೇ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಅಗ್ನಿಶಾಮಕ ದಳದ ಜೊತೆಗೆ ರಕ್ಷಣಾ ತಂಡಕ್ಕೆ ಹೆಚ್ಚಿನ ನೆರವು ಒದಗಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಇನ್ನಷ್ಟು ಮಾಹಿತಿಗಳು ತಿಳಿದು ಬರಬೇಕಿದೆ.












Click it and Unblock the Notifications