ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಬೆಂಗಳೂರು-ಹೌರಾ ರೈಲು ಬೋಗಿಯಲ್ಲಿ ಬೆಂಕಿ, ಸ್ಪಷ್ಟನೆ

|
Google Oneindia Kannada News

ಚಿತ್ತೂರು, ನವೆಂಬರ್ 27; ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೋಗಿಯಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದು, ಬೆಂಕಿ ಹತೋಟಿಗೆ ಬಂದಿದೆ ಎಂಬ ಸುದ್ದಿ ಬಂದಿತ್ತು. ಈ ಸುದ್ದಿಗೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಭಾನುವಾರ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವರದಿಗಳು ಬಂದಿಲ್ಲ ಎಂಬ ಸುದ್ದಿಗಳು ಹಬ್ಬಿದ್ದವು.

ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಸುಂದರ ರೈಲ್ವೆ ನಿಲ್ದಾಣಗಳು ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಸುಂದರ ರೈಲ್ವೆ ನಿಲ್ದಾಣಗಳು

Fire Accident At Bengaluru Howrah Express Train Coach

ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಸ್ಥಳೀಯ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಸಹ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ಕೈಗೊಂಡರು ಎಂಬ ವರದಿಗಳಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

ಮೈಸೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗಾಗಿ ಬೇಡಿಕೆ ಮೈಸೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗಾಗಿ ಬೇಡಿಕೆ

ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸ್‌ಪ್ರೆಸ್ ರೈಲು ನೈಋತ್ಯ ರೈಲ್ವೆ ಬೆಂಗಳೂರು ವಲಯದ ಕುಪ್ಪಂ ರೈಲು ನಿಲ್ದಾಣದ ಸಮೀಪ ಬಂದಾಗ ಬೆಂಕಿ ಕಾಣಿಸಿಕೊಂಡಿತ್ತು ಎಂಬ ಟ್ವೀಟ್‌ಗಳು ಹರಿದಾಡುತ್ತಿದ್ದವು.

ರೈಲ್ವೆ ಇಲಾಖೆ ಸ್ಪಷ್ಟೀಕರಣ; ಚಿತ್ತೂರು ಜಿಲ್ಲೆಯಲ್ಲಿ ರೈಲಿಗೆ ಬೆಂಕಿ ಬಿದ್ದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪು ವರದಿಗಳು ಬಂದಿವೆ. ಈ ಕುರಿತು ಸ್ಪಷ್ಟಪಡಿಸಲಾಗುತ್ತಿದೆ ಎಂದು ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.

ಮುಂದಿನ ಬಜೆಟ್‌ನಲ್ಲಿ 400 ಹೊಸ ವಂದೇ ಭಾರತ್ ರೈಲು ಘೋಷಣೆ ಸಾಧ್ಯತೆಮುಂದಿನ ಬಜೆಟ್‌ನಲ್ಲಿ 400 ಹೊಸ ವಂದೇ ಭಾರತ್ ರೈಲು ಘೋಷಣೆ ಸಾಧ್ಯತೆ

ರೈಲು ಸಂಖ್ಯೆ 12246 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ - ಹೌರಾ ದುರೊಂತೋ ಎಕ್ಸ್‌ಪ್ರೆಸ್‌ ಚಿತ್ತೂರು ಜಿಲ್ಲೆ (ಬೆಂಗಳೂರು ವಿಭಾಗ/ ನೈರುತ್ಯ ರೈಲ್ವೆ) ಕುಪ್ಪಂ ನಿಲ್ದಾಣವನ್ನು ಸಮೀಪಿಸುತ್ತಿರುವಾಗ ರೈಲು ನಿರ್ವಾಹಕರು ಸುಮಾರು 12.50 ಗಂಟೆಗೆ ಒಂದು ಬೋಗಿಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದರು.

ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ, ರೈಲು ಸಿಬ್ಬಂದಿಯಿಂದ ತಕ್ಷಣವೇ ರೈಲನ್ನು ನಿಲ್ಲಿಸಿ ಪರಿಶೀಲಿಸಲಾಯಿತು. SE LWSCN 193669/S9 ಬೋಗಿಯಲ್ಲಿ ಬ್ರೇಕ್ ಬ್ಲಾಕ್‌ನ ಘರ್ಷಣೆಯಿಂದಾಗಿ ಬ್ರೇಕ್ ಬೈಂಡಿಂಗ್ ಮತ್ತು ಹೊಗೆ ಬಂದಿರುವುದು ಕಂಡುಬಂದಿದೆ.

ರೈಲು ಸಿಬ್ಬಂದಿ ತಕ್ಷಣ ಅದನ್ನು ಸರಿಪಡಿಸಿ 1.33 ಗಂಟೆಗೆ ರೈಲುಗಾಡಿ ಪುನಃ ಪ್ರಾರಂಭಿಸಿದರು. ಯಾವುದೇ ಪ್ರಯಾಣಿಕರಿಗೆ ಯಾವುದೇ ಗಾಯ/ ಹಾನಿ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.

English summary
Fire accident at Bengaluru-Howrah train coach at Chittoor, Andhra Pradesh. No casualties have yet been reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X