ಗುಜರಾತ್ ಚುನಾವಣೆಗೂ ಮುನ್ನ ಬಿಜೆಪಿ ನಾಯಕಿಯ ಅಶ್ಲೀಲ ಫೋಟೋ ವೈರಲ್
Recommended Video

ಅಹಮದಾಬಾದ್, ನ 7: ಪಟೇದಾರ್ ಚಳುವಳಿಯ ಪ್ರಮುಖ ಮುಖಂಡ ಹಾರ್ಥಿಕ್ ಪಟೇಲ್ ಜೊತೆ ಗುರುತಿಸಿಕೊಂಡು ಇತ್ತೀಚೆಗೆ ಬಿಜೆಪಿಗೆ ನಿಷ್ಠೆ ಬದಲಿಸಿದ್ದ ಪಕ್ಷದ ನಾಯಕಿ, ರೇಷ್ಮಾ ಪಟೇಲ್ ಅವರ ಅಶ್ಲೀಲ ಫೋಟೊಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಗುಜರಾತ್ ಚುನಾವಣೆಗೆ ಹೆಚ್ಚುಕಮ್ಮಿ ಒಂದು ತಿಂಗಳು ಇರುವ ಈ ಹೊತ್ತಿನಲ್ಲಿ, ನನ್ನ ಮತ್ತು ಪಕ್ಷದ ಇಮೇಜಿಗೆ ಧಕ್ಕೆ ತರಲು ಮಾಡಿರುವಂತಹ ಕೆಲಸವಿದು ಎಂದು ರೇಷ್ಮಾ ಪಟೇಲ್, ಪೊಲೀಸರಿಗೆ ದೂರು ನೀಡಿದ್ದಾರೆಂದು ದೈನಿಕ್ ಭಾಸ್ಕರ್ ಪತ್ರಿಕೆ ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರನ್ನು ಹಾಳು ಮಾಡುವ ಅಭಿಯಾನ ನಡೆಯುತ್ತಿದೆ, ಸನ್ನಿ ಪಟೇಲ್ ಎನ್ನುವ ವ್ಯಕ್ತಿ ಇದಕ್ಕೆಲ್ಲಾ ಸೂತ್ರಧಾರ ಎಂದು ರೇಷ್ಮಾ ಪಟೇಲ್ ದೂರಿದ್ದು, ಪೊಲೀಸರು ಈತನ ವಿರುದ್ದ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಗುಜರಾತ್ ಕೋರ್ಟಿನಲ್ಲೂ ರೇಷ್ಮಾ ಈ ಬಗ್ಗೆ ದೂರು ಸಲ್ಲಿಸಿದ್ದು, ಸೈಬರ್ ಕ್ರೈಂ ಪೊಲೀಸರ ಮೂಲಕ ತನಿಖೆ ನಡೆಸಲು, ಕೋರ್ಟ್ ಸೂಚಿಸಿದೆ. ಪಟೇದಾರ್ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ರೇಷ್ಮಾ, ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು.
ರೇಷ್ಮಾ ಪಟೇಲ್, ಬಿಜೆಪಿಗೆ ಸೇರಿದ್ದು ಪಟೇದಾರ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು, ಉದ್ದೇಶಪೂರ್ವಕವಾಗಿ ರೇಷ್ಮಾ ಅವರ ತೇಜೋವಧೆ ಮಾಡಲು ಸನ್ನಿ ಪಟೇಲ್ ಈ ಕೆಲಸ ಮಾಡಿದ್ದಾನೆಂದು ದೂರಲಾಗಿದೆ.
ಗಂಡನಿಂದ ನಾನು ದೂರವಾಗಿದ್ದರೂ, ನನ್ನ ಇಬ್ಬರು ಮಕ್ಕಳು ಮತ್ತು ಪತಿಯನ್ನು ನೋಡಲು ಆವಾಗಾವಾಗ ಹೋಗುತ್ತಿರುತ್ತೇನೆ. ನನ್ನ ಕುಟುಂಬದಿಂದ ನಾನು ದೂರ ಉಳಿದಿರುವುದು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು. ನನ್ನ ಹೆಸರಿಗೆ ಕಳಂಕ ತರುವಂತಹ ಇಂತಹ ಘಟನೆಗಳು ಬೇಸರವನ್ನು ತರಿಸುತ್ತದೆ ಎಂದು ರೇಷ್ಮಾ ಪಟೇಲ್ ಹೇಳಿದ್ದಾರೆ.












Click it and Unblock the Notifications