Breaking: ಆರ್ಥಿಕ ಸಮಸ್ಯೆ: ಕಾರಿನಲ್ಲಿಯೇ ಪತ್ನಿ, ಮಗನಿಗೆ ಬೆಂಕಿ ಹಚ್ಚಿದ ವ್ಯಕ್ತಿ
ನಾಗ್ಪುರ, ಜುಲೈ 20: ಹಣಕಾಸಿನ ತೊಂದರೆಯಿಂದ ನಾಗ್ಪುರದ ಉದ್ಯಮಿಯೊಬ್ಬರು ಮಂಗಳವಾರ ಮಧ್ಯಾಹ್ನ ತನ್ನ ಕಾರಿನಲ್ಲಿಯೇ ತನ್ನ ಕುಟುಂಬಕ್ಕೆ ಬೆಂಕಿ ಹಚ್ಚಿ, ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಆತ ಮೃತಪಟ್ಟಿದ್ದಾರೆ.
ಬೆಂಕಿ ತಾಪದಿಂದ ಕಾರಿನ ಬಾಗಿಲು ತೆಗೆದು ಹೊರಬರುವಲ್ಲಿ ಆತನ ಪತ್ನಿ ಮತ್ತು ಮಗ ಯಶಸ್ವಿಯಾಗಿದ್ದಾರೆ. ಆದರೆ, ಇಬ್ಬರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ.
58 ವರ್ಷದ ರಾಮರಾಜ್ ಭಟ್ ಅವರು ತಮ್ಮ ಕುಟುಂಬವನ್ನು ಊಟಕ್ಕೊಂದು ಹೋಟೆಲ್‌ಗೆ ಕರೆದೊಯ್ದಿದ್ದರು. ದಾರಿಯಲ್ಲಿ ಇದ್ದಕ್ಕಿದ್ದಂತೆ ಗಾಡಿ ನಿಲ್ಲಿಸದೆ ತಮ್ಮ ಕಾರನ್ನು ಬೇರೆಡೆಗೆ ಓಡಿಸಿದ್ದಾರೆ. ಬಳಿಕ ಅವರು ಪ್ರತಿಕ್ರಿಯಿಸುವ ಮೊದಲೇ ಆತ ತನ್ನ ಪತ್ನಿ ಹಾಗೂ ಮಗನ ಮೇಲೆ ಪೆಟ್ರೋಲ್ ಸುರಿದು, ತಾನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ತೀವ್ರ ಸುಟ್ಟಗಾಯಗಳಿಂದ ರಾಮರಾಜ್ ಭಟ್ ಅಲ್ಲೇ ಮೃತಪಟ್ಟಿದ್ದಾರೆ. ಅವರ ಪತ್ನಿ 57 ವರ್ಷದ ಸಂಗೀತಾ ಭಟ್ ಮತ್ತು 25 ವರ್ಷದ ಮಗ ನಂದನ್, ಬೆಂಕಿ ತಾಪ ತಡೆಯಲಾಗದೇ ಹೇಗೋ ಬಾಗಿಲು ತೆರೆದು ಕಾರಿನಿಂದ ಜಿಗಿದಿದ್ದಾರೆ. ಆದರೆ, ಅವರು ಸಹ ತೀವ್ರವಾಗಿ ಸುಟ್ಟುಹೋಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಸುಟ್ಟು ಕರಕಲಾದ ಕಾರಿನಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ಒಂದು ಪತ್ರ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದು, ಉದ್ಯಮಿ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.












Click it and Unblock the Notifications