ಕೊನೆಗೂ ಕಾಶ್ಮೀರದ ವಿಧ್ವಂಸಕ ಉಗ್ರ ಅಬು ದುಜಾನ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 1: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಚರಿಸುತ್ತಿದ್ದ ಆತಂಕಕಾರಿ ಉಗ್ರ ಅಬು ದುಜಾನ ಕೊನೆಗೂ ಹತ್ಯೆಯಾಗಿದ್ದಾನೆ.

ಲಷ್ಕರ್ ಇ ತಯ್ಯಬಾ ಉಗ್ರ ಈ ಹಿಂದೆ ಹಲವು ಬಾರಿ ಭದ್ರತಾ ಪಡೆಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಕೂದಲೆಳೆ ಅಂತರದಲ್ಲಿ ಪರಾರಿಯಾಗಿದ್ದ. ಇದೀಗ ಕೊನೆಗೂ ಆತನನ್ನು ಕೊಲೆ ಮಾಡಲಾಗಿದೆ.

Finally dreaded terrorist Abu Dujana killed

ಇಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಹ್ಕರಿಪೊರಾ ಭಾಗದಲ್ಲಿ ಉಗ್ರರಿಗಾಗಿ ಭದ್ರತಾ ಪಡೆಗಳು ಹುಡುಕಾಟ ನಡೆಸುತ್ತಿದ್ದವು. ಈ ವೇಳೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು ದುಜಾನ ಸಾವನ್ನಪ್ಪಿದ್ದಾನೆ.

ಇದೀಗ ಸಂಘರ್ಷ ನಡೆಯುತ್ತಿದ್ದ ಜಾಗದಲ್ಲಿ ಗುಂಡಿನ ಮೊರೆತ ನಿಂತಿದೆ. ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. ಸ್ಥಳದಲ್ಲಿ ಸ್ಥಳೀಯರು ಭಾರೀ ಕಲ್ಲು ತೂರಾಟ ನಡೆಸುತ್ತಿದ್ದು ಇನ್ನೂ ಸೇನಾಪಡೆಗಳಿಗೆ ಉಗ್ರರ ಮೃತ ದೇಹಗಳು ಸಿಕ್ಕಿಲ್ಲ.

Amarnath Yatra 2017: Security Forces Drones To Ensure Safe Pilgrimage | Oneindia Kannada

ಹೀಗಾಗಿ ದುಜಾನಾ ಸತ್ತಿದ್ದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಜಮ್ಮು ಕಾಶ್ಮೀರ ಡಿಜಿಪಿ ಎಸ್.ಪಿ ವಾಯಿದ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The dreaded militant Abu Dujana has been killed by security forces in the Valley. The Lashkar-e-Tayiba militant, Dujana who had several miraculous escapes in the past year has finally been killed.
Please Wait while comments are loading...