ಗೂಗಲ್ ಸರ್ಚ್ ಇಂಡಿಯಾ: 'ಕೊರೊನಾ'ವನ್ನು ಹಿಂದೆ ಹಾಕಿದ 'ಸಿನಿಮಾ'
ನವ ದೆಹಲಿ, ಜೂನ್ 8: ಕೊರೊನಾ ವೈರಸ್ ಭಾರತಕ್ಕೆ ಬಂದ ನಂತರ ಎಲ್ಲಿ ನೋಡಿದರೂ ಅದೇ ಸುದ್ದಿಯಾಗಿದೆ. ಟಿವಿ, ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ, ಜನ ಕೂಡ ಅದನೇ ಮಾತನಾಡುತ್ತಾರೆ. ಹೀಗಾಗಿರುವಾಗ ಗೂಗಲ್‌ನಲ್ಲಿಯೂ ಕೊರೊನಾ ಬಗ್ಗೆಯೇ ಮಾಹಿತಿ ಹುಡುಕುವವರ ಸಂಖ್ಯೆ ಹೆಚ್ಚಿದೆ.
Recommended Video
ಅಚ್ಚರಿ ಅಂದರೆ, ಈಗ 'ಕೊರೊನಾ ವೈರಸ್'ಗಿಂತ 'ಸಿನಿಮಾ'ವನ್ನು ಜನ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ್ದಾರೆ. ಗೂಗಲ್ ಮೇ ತಿಂಗಳ ಸರ್ಚ್ ಡಾಟಾ ವರದಿ ನೀಡಿದೆ. ಇದರಲ್ಲಿ ಭಾರತದಲ್ಲಿ ಜನರು ಕೊರೊನಾ ಬಗ್ಗೆ ಹುಡುಕಾಟ ನಡೆಸುತ್ತಿರುವುದು ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಕೊರೊನಾಗಿಂತ ಜನರು ಸಿನಿಮಾಗಳ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡುವುದು ಹೆಚ್ಚಾಗಿದೆ.
ಕಳೆದ ತಿಂಗಳಿಗಿಂತ ಈ ತಿಂಗಳಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಪ್ರತಿ ದಿನವೂ ಪಾಸಿಟಿವ್ ಕೇಸ್‌ಗಳು ದೇಶದಲ್ಲಿ ಜಾಸ್ತಿಯಾಗುತ್ತಿವೆ. ಆದರೆ, ಏಪ್ರಿಲ್‌ಗೆ ಹೋಲಿಕೆ ಮಾಡಿದರೆ ಮೇ ತಿಂಗಳಿನಲ್ಲಿ ಗೂಗಲ್‌ನಲ್ಲಿ ಕೊರೊನಾ ಬಗ್ಗೆ ಸರ್ಚ್ ಮಾಡುವುದು ಇಳಿಕೆಯಾಗಿದೆ.

ಸಿನಿಮಾ, ಹವಮಾನ
ಮೇ ತಿಂಗಳಲ್ಲಿ ಗೂಗಲ್‌ನಲ್ಲಿ ಜನರು ಚಲನಚಿತ್ರಗಳು ಮತ್ತು ಹವಾಮಾನದಂತಹ ವಿಷಯಗಳನ್ನು ಹೆಚ್ಚು ಹುಡುಕಿದ್ದಾರೆ. ಎರಡು ತಿಂಗಳು ಕೊರೊನಾ.. ಕೊರೊನಾ.. ಎಂದು ಇದ್ದ ಜನರು ಈಗ ನಿಧಾನವಾಗಿ ತಮ್ಮ ಸಾಮಾನ್ಯ ಜೀವನಕ್ಕೆ ಮರಳುವ ಮನೋಭಾವಕ್ಕೆ ಬಂದಿದ್ದಾರೆ ಎನ್ನುವುದು ಈ ಮೂಲಕ ತಿಳಿಯುತ್ತದೆ. ಸಿನಿಮಾ (films), ಹವಾಮಾನ (weather), ಅರ್ಥ (meaning), ನ್ಯೂಸ್ (News) ಎಂಬ ಪದಗಳು ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗಿವೆ.

ಲಾಕ್‌ಡೌನ್ 4.0
ಮೇ ತಿಂಗಳ ಗೂಗಲ್‌ನಲ್ಲಿ ಟ್ರೆಂಡಿಂಗ್ ಪದದಲ್ಲಿ 'ಲಾಕ್‌ಡೌನ್ 4.0' ಇದೆ. ಅದರ ನಂತರ 'ಈದ್ ಮುಬಾರಕ್' ಇದೆ. ಮೇ ನಲ್ಲಿ ಭಾರತದಲ್ಲಿ ಲಾಕ್‌ಡೌನ್ 4.0 ಜಾರಿಗೆ ಬಂದಿತ್ತು. ಹಾಗೂ ಮೇ ತಿಂಗಳ ಕೊನೆಯಲ್ಲಿ ರಂಜಾನ್ ಹಬ್ಬ ಇದ್ದ ಕಾರಣ ಈ ಎರಡು ವಿಷಯಗಳನ್ನು ಗೂಗಲ್‌ನಲ್ಲಿ ಹೆಚ್ಚು ಹುಡುಕಲಾಗಿದೆ. ಮಾರ್ಚ್ 25 ರಿಂದ ಭಾರತದಲ್ಲಿ ಲಾಕ್‌ಡೌನ್ ಶುರು ಆಗಿದ್ದು, ನಂತರ ಹಂತ ಹಂತವಾಗಿ ಸಡಿಲಿಕೆ ಆಗುತ್ತಿದೆ.

ನೆಟ್ಟಿಗರ ಪ್ರಶ್ನೆಗಳು
'Which disease is related to coronavirus?' (ಯಾವ ರೋಗವು ಕೊರೊನಾ ವೈರಸ್‌ಗೆ ಸಂಬಂಧಿಸಿದೆ?), Can asymptomatic people spread coronavirus? (ರೊಗಲಕ್ಷಣ ರಹಿತ ಜನರು ಕೊರೊನಾ ವೈರಸ್ ಅನ್ನು ಹರಡಬಹುದೇ?), Will lockdown extend after 17 May? (ಮೇ 17 ರ ನಂತರ ಲಾಕ್‌ಡೌನ್ ವಿಸ್ತರಿಸುವುದೇ?) ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ.

ಔಷಧಿ ಬಗ್ಗೆ ಹೆಚ್ಚು ಸರ್ಚ್
ಕೊರೊನಾ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಕಡಿಮೆಯಾಗಿದ್ದರೂ, ಕೊರೊನಾ ಸೋಂಕಿಗೆ ಔಷಧಿ ಎಂದು ಹುಡುಕಾಟ ನಡೆಸಿದ್ದು ಹೆಚ್ಚಾಗಿದೆ. ಮೇ ತಿಂಗಳಿನಲ್ಲಿ ಗೋವಾ, ಮೇಘಾಲಯ, ಚಂಡೀಗಡ ಮತ್ತು ತ್ರಿಪುರದಲ್ಲಿ ಕೊರೊನಾ ವೈರಸ್ ಬಗ್ಗೆ ಹೆಚ್ಚಿನ ಹುಡುಕಾಟ ನಡೆಸಲಾಗಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 257000ಕ್ಕೆ ಏರಿಕೆಯಾಗಿದೆ. 7,200 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
-
Summer Alert: ಬೇಸಿಗೆಯಲ್ಲಿ ಫ್ರಿಜ್ ನೀರು ಕುಡಿಯುತ್ತಿದ್ದೀರಾ? ಮೊದಲು ಈ ವಿಷಯ ತಿಳಿದುಕೊಳ್ಳಿ -
ಅಪ್ಪನ ಸಕ್ಕರೆ ಚಟ ಬಿಡಿಸಲು ಮೋದಿ ಮೊರೆ ಹೋದ ಯುವಕ: ವಿಡಿಯೋ Viral, ಪ್ರಧಾನಿಯಿಂದ ಬಂತು ಅಚ್ಚರಿಯ ರಿಪ್ಲೈ -
ವಾಸ್ತು ಮಾತ್ರ ಸಾಲದು! ನಿಮ್ಮ ಜಾತಕವೇ ಯಶಸ್ಸನ್ನು ನಿರ್ಧರಿಸುತ್ತದೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications