ಕತುವಾ ಅತ್ಯಾಚಾರ ಪ್ರಕರಣ: ಕಣ್ಣಲ್ಲಿ ಕಣ್ಣಿಟ್ಟು ಸತ್ಯ ಹೇಳಲು ಕೇಳುವೆ

Posted By:
Subscribe to Oneindia Kannada

ಶ್ರೀನಗರ, ಏಪ್ರಿಲ್ 16: 'ಈ ಅಪರಾಧ ನೀನು ಮಾಡಿರುವುದು ನಿಜವೇ? ಆತನ ಕಣ್ಣಲ್ಲಿ ಕಣ್ಣಿಟ್ಟು ಹೀಗೆ ಕೇಳುತ್ತೇನೆ. ಆತ ನನಗೆ ಸತ್ಯ ಹೇಳುತ್ತಾನೆ ಎಂಬ ನಂಬಿಕೆ ಇದೆ. ತಪ್ಪು ಮಾಡಿಲ್ಲ ಎಂದು ಆತ ನಿರಾಕರಿಸಿದರೆ, ಮರಳಿ ಬರುವವರೆಗೂ ಕಾಯುತ್ತೇನೆ. ಇಲ್ಲದಿದ್ದರೆ, ಬೇರೆ ಹುಡುಗನನ್ನು ನೋಡುವಂತೆ ನನ್ನ ಪೋಷಕರಿಗೆ ಹೇಳುತ್ತೇನೆ' ಎಂದು ಕಣ್ಣಾಲಿಗಳನ್ನು ತುಂಬಿಕೊಂಡು ಹೇಳಿದರು ರೇಣು ಶರ್ಮಾ.

ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ 24 ವರ್ಷದ ರೇಣು ಶರ್ಮಾ, ಕತುವಾ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪೊಲೀಸ್ ಅಧಿಕಾರಿ ದೀಪಕ್ ಖಜುರಿಯಾ ಮದುವೆಯಾಗಬೇಕಿರುವ ಯುವತಿ.

ಕತುವಾ ಅತ್ಯಾಚಾರ-ಕೊಲೆ ಪ್ರಕರಣ: ಇಂದಿನಿಂದ ಆರೋಪಿಗಳ ವಿಚಾರಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್‌ ಈಗ ಕತುವಾದ ಜಿಲ್ಲಾ ಕಾರಾಗೃಹದಲ್ಲಿದ್ದಾನೆ. ಆತನನ್ನು ಭೇಟಿ ಮಾಡಿ ಮಾತನಾಡಬೇಕು ಎನ್ನುವುದು ರೇಣು ಶರ್ಮಾ ಬಯಕೆ. ಆದರೆ ಆಕೆಗೆ ದೀಪಕ್‌ನನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಲಾಗಿದೆ.

fiance of kathua case wants to ask him the truth

ಆಕೆ ಜೈಲಿಗೆ ಭೇಟಿ ನೀಡುವುದು ಸರಿಯಲ್ಲ. ಮಗನನ್ನು ನೋಡಲು ನಾನೂ ಸಹ ಹೋಗಿಲ್ಲ' ಎನ್ನುತ್ತಾರೆ ದೀಪಕ್‌ ತಾಯಿ ದರ್ಶನಾ ದೇವಿ.

ದೀಪಕ್ ಮತ್ತು ರೇಣು ನಡುವೆ ಕಳೆದ ಡಿಸೆಂಬರ್ 7ರಂದು ನಿಶ್ಚಿತಾರ್ಥವಾಗಿತ್ತು. ಎಲ್ಲವೂ ಸರಿಯಾಗಿದ್ದರೆ ಇದೇ ಏಪ್ರಿಲ್ 26ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಈಗ ದೀಪಕ್ ಜೈಲಿನಲ್ಲಿರುವುದರಿಂದ ಮದುವೆ ಅನಿಶ್ಚಿತವಾಗಿದೆ. ತನ್ನ ಭವಿಷ್ಯದ ಬಗ್ಗೆ ರೇಣು ಚಿಂತೆಗೀಡಾಗಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಅಪರಾಧ ದಳದ ಚಾರ್ಜ್‌ಷೀಟ್ ಪ್ರಕಾರ ದೀಪಕ್, ಬಾಲಕಿಯನ್ನು ಕೊಲ್ಲುವ ಮುನ್ನ ಕೊನೆಯ ಒಂದು ಬಾರಿ ಅತ್ಯಾಚಾರ ಮಾಡಲು ಬಯಸಿದ್ದ. ಆಕೆಯ ಕತ್ತನ್ನು ಮೊಣಕಾಲುಗಳ ನಡುವೆ ಇರಿಸಿ ಹಿಸುಕಿ ಕೊಲ್ಲಲು ಪ್ರಯತ್ನಿಸಿದ್ದ. ಆದರೆ ವಿಫಲನಾಗಿದ್ದ.

ಸಮವಸ್ತ್ರವೇ ನನ್ನ ಧರ್ಮ ಎನ್ನುತ್ತಾರೆ ಈ ಅಧಿಕಾರಿಣಿ

ನಿಶ್ಚಿತಾರ್ಥವಾಗಿ ನಾಲ್ಕು ತಿಂಗಳು ಕಳೆದರೂ ರೇಣು, ದೀಪಕ್‌ನನ್ನು ನೋಡಿರುವುದು ಒಮ್ಮೆ ಮಾತ್ರ. ಅದೂ ನಿಶ್ಚಿತಾರ್ಥದ ವೇಳೆ. ಇಬ್ಬರೂ ದೂರವಾಣಿ ಮೂಲಕವೇ ಮಾತುಕತೆ ನಡೆಸಿದ್ದರು.

ಅದುವರೆಗೆ ನಡೆಸಿದ ಮಾತುಕತೆಯ ಅನುಭವ ರೇಣು ಅವರಿಗೆ ದೀಪಕ್ ಈ ಕೃತ್ಯ ಎಸಗಿರಲಾರ ಎಂಬ ನಂಬಿಕೆ ಮೂಡಿಸಿದೆ. ಆದರೆ, ಆತನನ್ನು ದೂರುವುದೂ ಇಲ್ಲ, ನಿರಪರಾಧಿ ಎಂದು ಘೋಷಿಸುವುದೂ ಇಲ್ಲ. ನನಗೆ ವಾಸ್ತವ ತಿಳಿದಿಲ್ಲ. ಸಿಬಿಐ ತನಿಖೆ ನಡೆಸಿದ ಬಳಿಕವಷ್ಟೇ ಸತ್ಯ ಹೊರಬೀಳಲಿದೆ' ಎಂದಿದ್ದಾರೆ ರೇಣು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fiance of Kathua rape case accused Deepak Khajuria said, she want to look his eye and ask him if he really committed the crime

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ