ಮಹಾರಾಷ್ಟ್ರ: ಅಪರೂಪದ ವೈದ್ಯಕೀಯ ಸ್ಥಿತಿ, 36 ವರ್ಷಗಳ ಕಾಲ ಅವಳಿಗಳಿಗೆ ಗರ್ಭ ಧರಿಸಿದ್ದ 60 ವರ್ಷದ ವ್ಯಕ್ತಿ!
ಮುಂಬೈ, ಜೂನ್. 23: ಮಹಾರಾಷ್ಟ್ರದ ನಾಗ್ಪುರದ ವ್ಯಕ್ತಿಯೊಬ್ಬರು ತನ್ನ ಉಬ್ಬುವ ಹೊಟ್ಟೆಯೊಂದಿಗೆ "ಗರ್ಭಿಣಿ ಮನುಷ್ಯ" ಎಂದು ಅಡ್ಡಹೆಸರು ಹೊಂದಿದ್ದಾರೆ. ಹೌದು, ಇದು 36 ವರ್ಷಗಳಿಗೂ ಹೆಚ್ಚು ಕಾಲ ತನ್ನ ಅವಳಿ ಮಗುವಿಗೆ 60 ವರ್ಷದ ವೃದ್ಧರೊಬ್ಬರು ಗರ್ಭ ಧರಿಸಿರುವ ಅಪರೂಪದ ವೈದ್ಯಕೀಯ ಸ್ಥಿತಿಯನ್ನು ವೈದ್ಯರು ಪತ್ತೆಹಚ್ಚಿದ್ದಾರೆ.
ಈ ಅಪರೂಪದ ದೈಹಿಕ ಸ್ಥಿತಿಯನ್ನು "ಫೀಟಸ್ ಇನ್ ಫೆಟು" (Fetus in Fetu) ಎಂದು ಕರೆಯಲಾಗುತ್ತದೆ. ಇದು ವ್ಯಾನಿಶಿಂಗ್ ಟ್ವಿನ್ ಸಿಂಡ್ರೋಮ್‌ನ ಉದಾಹರಣೆಯಾಗಿದೆ. ಅಂದರೆ ಅವರ ಅವಳಿ ಗರ್ಭಾವಸ್ಥೆಯಲ್ಲಿ ಮರಣಹೊಂದಿದೆ. ಈ ದೊಡ್ಡ ಹೊಟ್ಟೆಯಿಂದಾಗಿ, ಅವರು ಇತರರಿಂದ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸುತ್ತಿದ್ದರು ಹೀಗಾಗಿ ಅವರನ್ನು "ಗರ್ಭಿಣಿ" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು.

ದಿ ಡೈಲಿ ಸ್ಟಾರ್ ಪ್ರಕಾರ, ಜೀವನೋಪಾಯಕ್ಕಾಗಿ ಕಷ್ಟಪಡುತ್ತಿದ್ದ ಸಂಜು ಭಗತ್, ಕೆಲಸ ಮುಂದುವರಿಸಲು ತಮ್ಮ ಹೊಟ್ಟೆ ಉಬ್ಬುತ್ತಿರುವುದನ್ನು ನಿರ್ಲಕ್ಷಿಸಿದರು ಮತ್ತು ತನ್ನ ಗೆಳೆಯರಿಂದ ಕೀಟಲೆ ಅನುಭವಿಸುತ್ತಿದ್ದರು. ಆದರೆ, ಅವರ ಕುಟುಂಬದ ಕಾಳಜಿಯಿಂದ ಸಹಿಸಿಕೊಂಡಿದ್ದರು. ಆದರೆ 1999 ರಲ್ಲಿ, ಹೊಟ್ಟೆ ಹೆಚ್ಚು ದೊಡ್ಡದಾಗಿ ಉಸಿರಾಡಲು ಕಷ್ಟವಾದಾಗ, ಅಂತಿಮವಾಗಿ ಅವರನ್ನು ಮುಂಬೈನ ಆಸ್ಪತ್ರೆಗೆ ಸಾಗಿಸಲಾಯಿತು. ಸಂಜು ಭಗತ್ ಅವರ ಪರಿಸ್ಥಿತಿಯನ್ನು ನೋಡಿದ ಡಾ ಅಜಯ್ ಮೆಹ್ತಾ ಅವರು ಮೊದಲ ನೋಟದಲ್ಲಿ ಆ ವ್ಯಕ್ತಿ ಗೆಡ್ಡೆಯಿಂದ ಬಳಲುತ್ತಿದ್ದಾರೆ ಎಂದು ತಕ್ಷಣವೇ ಊಹಿಸಿದರು.
ವೈದ್ಯರು ಸಂಜು ಭಗತ್‌ನ ಹೊಟ್ಟೆಯನ್ನು ಅಪರೇಷನ್ ಮಾಡಲು ತೆರದಾಗ ದೊಡ್ಡ ಕ್ಯಾನ್ಸರ್ ಗೆಡ್ಡೆ ಎಂದು ನಂಬಿದ್ದರು. ಆದರೆ, ಅದನ್ನು ತೆಗೆಯಲು ಒಳಗೆ ಕೂ ಹಾಕಿದಾಗ ಗೆಡ್ಡೆ ಬದಲಿಗೆ ಮಾನವನ ಮೂಳೆಗಳನ್ನು ಸಿಕ್ಕಿವೆ ಎಂದು ಸುದ್ದಿವಾಹಿನಿ ಹೇಳಿದೆ. ಹಿಸ್ಟರಿ ಡಿಫೈನ್ಡ್ ಪ್ರಕಾರ, "ಡಾ ಅಜಯ್ ಮೆಹ್ತಾ ಹೊಟ್ಟೆಯ ಒಳಗೆ ಕೈ ಹಾಕಿದರು. ಈ ವೇಳೆ ಒಳಗೆ ಬಹಳಷ್ಟು ಮೂಳೆಗಳಿ ಸಿಕ್ಕಿವೆ ಎಂದು ಹೇಳಿದರು" ಎಂದು ವೈದ್ಯರು ಹೇಳಿದ್ದಾರೆ.
"ಮೊದಲು ಒಂದು ಅಂಗ ಹೊರಬಂದಿತು, ನಂತರ ಮತ್ತೊಂದು ಅಂಗವು ಹೊರಬಂದಿತು, ನಂತರ ಜನನಾಂಗದ ಕೆಲವು ಭಾಗಗಳು, ಕೂದಲಿನ ಕೆಲವು ಭಾಗಗಳು, ಕೆಲವು ಅಂಗಗಳು, ದವಡೆಗಳು, ಕೈಕಾಲುಗಳು ಮತ್ತು ಕೂದಲು ಸಿಕ್ಕಿವೆ. ತಕ್ಷಣ ನಾವು ಗಾಬರಿಗೊಂಡೆವು, ನಮಗೆ ಗೊಂದಲ ಮತ್ತಿ ಆಶ್ಚರ್ಯ, ಭಯ ಉಂಟಾಯಿತು" ಎಂದಿದ್ದಾರೆ.
ಭ್ರೂಣದಲ್ಲಿ ಭ್ರೂಣ (Fetus in Fetu) ಎಂದರೇನು?
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, "ಫೀಟಸ್ ಇನ್ ಫ್ಯೂ" ಎಂಬುದು ಅಪರೂಪದ ವೈದ್ಯಕೀಯ ಸ್ಥಿತಿಯಾಗಿದ್ದು, ಅದರ ಅವಳಿ ದೇಹದೊಳಗೆ ಅಸಹಜ ಭ್ರೂಣ ಪತ್ತೆಯಾಗುತ್ತದೆ. ಒಂದು ಅವಳಿ ತನ್ನ ಆರಂಭಿಕ ಬೆಳವಣಿಗೆಯ ಸಮಯದಲ್ಲಿ ಇತರ ಅವಳಿಗಳಿಂದ ಆವರಿಸಿಲ್ಪಟ್ಟಾಗ ಅದು ಸಂಭವಿಸುತ್ತದೆ. ನಂತರ ಉಳಿದಿರುವ ಅವಳಿ ದೇಹದೊಳಗೆ ಗೆಡ್ಡೆಯಂತಹ ರಚನೆಯಾಗಿ ಬೆಳೆಯುತ್ತದೆ. ಈ ಸ್ಥಿತಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಅಗತ್ಯವಿದೆ.












Click it and Unblock the Notifications