ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಇನ್ನೂ ತಣ್ಣಗಾಗಿಲ್ಲ ಅನ್ನದಾತನ ಕ್ರೋಧದ ಕಿಚ್ಚು

|
Google Oneindia Kannada News

ಭೂಪಾಲ್ (ಮಧ್ಯಪ್ರದೇಶ), ಜೂನ್ 8: ಬೆಂಕಿಹೊತ್ತಿಕೊಂಡ ಬಸ್ಸುಗಳು, ರಸ್ತೆಯ ತುಂಬೆಲ್ಲ ಆಕ್ರಂದನ, ಹೋರಾಟ, ಹಿಂಸೆ, ಅಶಾಂತಿ... ಇವೆಲ್ಲ ಪ್ರಸ್ತುತ ಮಧ್ಯಪ್ರದೇಶದ ಚಿತ್ರಣ. ಒಂದೆಡೆ ಅನ್ನದಾತನ ಸಹನೆಯ ಕಟ್ಟೆಯೊಡೆದು ಕ್ರೋಧದ ಕಿಚ್ಚು ಮುಗಿಲುಮುಟ್ಟಿದ್ದರೆ, ಇತ್ತ ರಾಜಕೀಯ ಪಕ್ಷಗಳು ಬೇರೇನೋ ಲೆಕ್ಕಾಚಾರದಲ್ಲಿ ತೊಡಗಿವೆ.

ಆಡಳಿತ ಪಕ್ಷಕ್ಕೆ ಹಿಂಸೆಯನ್ನು ತಹಬಂದಿಗೆ ತರುವುದು ಸವಾಲೆನ್ನಿಸಿದರೆ, ವಿಪಕ್ಷಗಳಿಗೆ ಈ ಗಲಭೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಹೇಗೆ ಎಂಬ ಚಿಂತೆ. ಈ ಇಬ್ಬರ ನಡುವಲ್ಲಿ ಬಡವಾಗುವುದು ಮಾತ್ರ ಎಂದಿಗೂ ಅನ್ನದಾತನೇ ಎಂದುದು ವಿಷಾದದ ಸಂಗತಿ.[ಮಧ್ಯಪ್ರದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿರುವುದೇಕೆ?]

ಅನ್ನದಾತನ ಸಹನೆಯ ಕಟ್ಟೆಯೊಡೆದರೆ ರಾಜ್ಯದಲ್ಲಿ ಏನೆಲ್ಲ ಆಗಬಹುದು ಎಂಬುದಕ್ಕೆ ಮಧ್ಯಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಿಂಸೆಯೇ ಪ್ರತ್ಯಕ್ಷ ನಿದರ್ಶನ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂಬ ಬೇಡಿಕೆಯಿಂದಾಗಿ ಹೋರಾಟ ಆರಂಭವಾಗಿದ್ದು, ರೈತರ ಸಾಲಮನ್ನಾ ಬೇಡಿಕೆಯೂ ಇದರೊಂದಿಗೆ ಸೇರಿಕೊಂಡಿದೆ.[ಮಂಡಸೌರ್ ಪ್ರವೇಶಿಸುವ ಮುನ್ನವೇ ರಾಹುಲ್ ಗಾಂಧಿ ಅರೆಸ್ಟ್]

ಭೂಪಾಲ್ ನಿಂದ 325 ಕಿ.ಮೀ.ದೂರದಲ್ಲಿರುವ ಮಂಡಸೌರ್ ನಲ್ಲಿ ಜೂನ್ 1 ರಿಂದಲೇ ಹೋರಾಟದ ಕಿಚ್ಚು ಹತ್ತಿಕೊಂಡಿತ್ತು. ಐವರು ಅಮಾಯಕ ರೈತರು ಪೊಲೀಸರ ಗುಂಡಿನ ದಾಳಿಗೆ ಅಸುನೀಗಬೇಕಾಗಿದ್ದು ದುರಂತವೇ ಸರಿ. ಮಧ್ಯಪ್ರದೇಶದ ಕಿಚ್ಚಿನ ಸುದ್ದಿಯ ಜೊತೆಗೆ ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿವೆ...

ಹೊತ್ತಿ ಉರಿಯಿತು ಬಸ್ಸು

ಹೊತ್ತಿ ಉರಿಯಿತು ಬಸ್ಸು

ರೈತರ ಕ್ರೋಧದ ಸಂಕೇತ ಎಂಬಂತೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಹೊತ್ತಿ ಉರಿದ ಬಸ್ಸು ಕಂಡುಬಂದಿದ್ದು ಹೀಗೆ.

ನಿಶ್ಚಿಂತೆಯ ನಿದ್ದೆ

ನಿಶ್ಚಿಂತೆಯ ನಿದ್ದೆ

ಅತ್ತ ಮಧ್ಯಪ್ರದೇಶದಲ್ಲಿ ಕಿಚ್ಚುಹೊತ್ತಿಕೊಂಡಿದ್ದರೆ ಇತ್ತ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಶೂ ಪಾಲಿಶ್ ಮಾಡುತ್ತಿದ್ದ ವೃದ್ಧನೊಬ್ಬ 37 ಡಿಗ್ರಿ ಬಿಸಿಲಿನಲ್ಲೂ ನಿಶ್ಚಿಂತೆಯಿಂದ ನಿದ್ದೆ ಮಾಡಿದ್ದು ಹೀಗೆ!

ಸೇತುವೆಯ ಕೆಳಗೆ ಬಿದ್ದ ಶಾಲಾ ಬಸ್

ಸೇತುವೆಯ ಕೆಳಗೆ ಬಿದ್ದ ಶಾಲಾ ಬಸ್

ಮಧ್ಯಪ್ರದೇಶದ ಇಂದೋರ್ ನಲ್ಲಿ ಶಾಲಾ ಬಸ್ ವೊಂದು ಸೇತುವೆಯಿಂದ ಕೆಳಕ್ಕುರುಳಿದಾಗ ಕಂಡುಬಂದಿದ್ದು ಹೀಗೆ. ಘಟನೆಯಲ್ಲಿ ಸಂಭವಿಸಿದ ಸಾವು-ನೋವುಗಳ ಬಗ್ಗೆ ಯಾವುದೇ ವರದಿ ಬಂದಿಲ್ಲ.

ಅನ್ನದಾತನ ಮನೆಯಲ್ಲಿ ಊಟ

ಅನ್ನದಾತನ ಮನೆಯಲ್ಲಿ ಊಟ

ಬಿಜೆಪಿ ನಾಯಕಿ ಮತ್ತು ನಟಿ ಲೋಕಟ್ ಚಟರ್ಜಿ ಪಶ್ಚಿಮ ಬಂಗಾಳದ ಬಿರ್ಬುಮ್ ಜಿಲ್ಲೆಯ ರಾಂಪುರ್ಹತ್ ನ ರೈತರೊಬ್ಬರ ಮನೆಯಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕಂಡುಬಂದಿದ್ದು ಹೀಗೆ.

ಲಲನೆಯರ ಮಾರ್ಜಾಲ ನಡಿಗೆ

ಲಲನೆಯರ ಮಾರ್ಜಾಲ ನಡಿಗೆ

ಅಜ್ಮೇರ್ ನಲ್ಲಿ ನಡೆದ ಫ್ಯಾಶನ್ ಶೋ ಒಂದರಲ್ಲಿ ಕ್ಯಾಟ್ ವಾಕ್ ಮಾಡುತ್ತಿದ್ದ ಲಲನೆಯರು ಕಂಡುಬಂದಿದ್ದು ಹೀಗೆ.

ಗುವಾಹಟಿ

ಗುವಾಹಟಿ

ಅಸ್ಸಾಮಿನ ಗುವಾಹಟಿಯಲ್ಲಿ ನೀರಿನಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದ ಆನೆಗಳು ಕಾಣಿಸಿದ್ದು ಹೀಗೆ. ಈ ಸುಂದರ ದೃಶ್ಯ ಕಂಡುಬಂದಿದ್ದು ಟಾಕೂರ್ಕುಚಿ ಗ್ರಾಮದಲ್ಲಿ.

English summary
A charted bus in flames after it was torched by farmers at Bhopal-Indore highway in Dewas district on Wednesday.Farmers' protest in Madhya Pradesh is still continuing. 5 farmers died in the protest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X