ಮಂಡಸೌರ್ ಪ್ರವೇಶಿಸುವ ಮುನ್ನವೇ ರಾಹುಲ್ ಗಾಂಧಿ ಅರೆಸ್ಟ್

ಮಂಡಸೌರ್ (ಮಧ್ಯಪ್ರದೇಶ), ಜೂನ್ 08 : "ಮಧ್ಯಪ್ರದೇಶದಲ್ಲಿನ ಬಿಜೆಪಿ ಸರಕಾರ ರೈತರ ಸಾಲ ಮನ್ನಾ ಮಾಡುತ್ತಲೂ ಇಲ್ಲ, ಅವರಿಗೆ ಬೋನಸ್ಸನ್ನೂ ನೀಡುತ್ತಿಲ್ಲ, ನೀಡುತ್ತಿರುವ ಬರೀ ಗುಂಡು..."

ಹೀಗೆಂದು ವ್ಯಂಗ್ಯವಾಡಿದವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಮಂಡಸೌರ್ ನಲ್ಲಿ ಗೋಳಿಬಾರ್ ನಲ್ಲಿ ಹತ್ಯೆಗೀಡಾಗಿರುವ ರೈತರ ಕುಟುಂಬವನ್ನು ಭೇಟಿ ಮಾಡಲು ಅವರು ಗುರುವಾರ ಬಂದಿದ್ದಾರೆ. [ಮಧ್ಯಪ್ರದೇಶದ ಗಲಭೆಯ ಚಿತ್ರಗಳು]

ಮಂಡಸೌರ್ ಪ್ರವೇಶಿಸುವುದಕ್ಕೆ ಪೊಲೀಸರು ಪರವಾನಗಿ ನೀಡದಿದ್ದರೂ ತಮ್ಮ ಬೆಂಬಲಿಗರೊಂದಿಗೆ ನುಗ್ಗಿದ ರಾಹುಲ್ ಅವರನ್ನು ನೀಮುಚ್ ಎಂಬಲ್ಲಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. [ಮಂಡಸೌರ್ ಉರಿಯುವ ಬೆಂಕಿಗೆ ವಿರೋಧಿಗಳ ರಾಜಕೀಯ ತುಪ್ಪ]

Rahul Gandhi detained by Police at Neemuch in Madhya Pradesh

ನನ್ನನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು ಬಂಧನಕ್ಕೆ ಯಾವ ಕಾರಣವನ್ನೂ ನೀಡಿಲ್ಲ. ವಿನಾಕಾರಣ ನನ್ನನ್ನು ಬಂಧಿಸಲಾಗಿದೆ. ಉತ್ತರಪ್ರದೇಶದ ಸಹರಣಪುರದಲ್ಲಿಯೂ (ದಲಿತರ ಹತ್ಯೆಯಾದಾಗ) ಹೀಗೆಯೇ ಆಗಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ರೈತರ ಕ್ರೋಧಾಗ್ನಿಗೆ ಸಿಕ್ಕು ಹೊತ್ತಿ ಉರಿಯುತ್ತಿದೆ ಮಧ್ಯಪ್ರದೇಶ]

ಗಲಭೆಯಿಂದ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿರುವಾಗ ಇಲ್ಲಿಗೆ ಇಷ್ಟು ತ್ವರಿತವಾಗಿ ಬರುವ ಅಗತ್ಯವಾದರೂ ಏನಿತ್ತು ಎಂದು ಸಚಿವ ಭೂಪೇಂದ್ರ ಸಿಂಗ್ ಅವರು ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+