ಮಕ್ಕಳ ದಹನ ಕೇಸ್‌ಗೆ ಟ್ವಿಸ್ಟ್: ಬೆಂಕಿ ಹತ್ತಿದ್ದು ಮನೆ ಒಳಗಿನಿಂದ

ಫರಿದಾಬಾದ್, ಅಕ್ಟೋಬರ್. 30: ದಲಿತ ಮಕ್ಕಳ ಸಜೀವ ದಹನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಫಾರೆನ್ಸಿಕ್ ತಜ್ಞರು ನೀಡಿರುವ ವರದಿ ಪ್ರಕಾರ ಕೋಣೆಯೊಳಗಿನಿಂದಲೇ ಹತ್ತಿಕೊಂಡ ಬೆಂಕಿ ಮಕ್ಕಳ ಸಾವಿಗೆ ಕಾರಣ ಎಂದು ಹೇಳಿದೆ.

ಹಾಸಿಗೆ ಪಕ್ಕದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿರುವ ಸೀಮೆಎಣ್ಣೆಯ ಪ್ಲಾಸ್ಟಿಕ್ ಬಾಟಲಿ ಮತ್ತು ಕೋಣೆಯ ಕಿಟಕಿ ಪಕ್ಕ ಸುಟ್ಟ ಬೆಂಕಿಕಡ್ಡಿಯನ್ನೂ ಫಾರೆನ್ಸಿಕ್ ತಜ್ಞರು ಪತ್ತೆ ಹಚ್ಚಿದ್ದಾರೆ.[ಇಬ್ಬರು ದಲಿತ ಮಕ್ಕಳ ಹತ್ಯೆಗೆ ಮೊಬೈಲ್ ಕಾರಣವಾಯ್ತೆ?]

Faridabad: Fire that killed Dalit kids started in room: Forensic experts

ಫಾರೆನ್ಸಿಕ್ ತಜ್ಞರು ವರದಿಯನ್ನು ಸಿಬಿಐಗೆ ಸಲ್ಲಿಸಲಿದ್ದಾರೆ. ಫರಿದಾಬಾದ್‌ನ ಬಲ್ಲಾಭಾಗ್ ಬಳಿಯಿರುವ ಸೋನ್ ಪೆಡ್‌ಗ್ರಾಮದ ಅಕ್ಟೋಬರ್. 2೦ ರಂದು ನಡೆದ ಘರ್ಷಣೆಯಲ್ಲಿ ದಲಿತರ ಮನೆಯೊಂದಕ್ಕೆ ಬೆಂಕಿ ತಗುಲಿ 2 ಮಕ್ಕಳು ಸಜೀವ ದಹನವಾಗಿದ್ದರು. ಘಟನೆ ನಂತರ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು.[ವರ್ಷದಲ್ಲಿ ದಲಿತರ ಮೇಲೆ 47,064 ಸಾರಿ ದೌರ್ಜನ್ಯ!]

ಜಿತೇಂದರ್ ಎಂಬ ದಲಿತನ ಮನೆ ಬೆಂಕಿಗಾಹುತಿಯಾಗಿತ್ತು. ಈ ಘಟನೆಯಲ್ಲಿ ಮಕ್ಕಳಾದ ಎರಡೂವರೆ ವರ್ಷದ ವೈಭವ್ ಮತ್ತು 11 ತಿಂಗಳ ದಿವ್ಯಾ ಸಜೀವ ದಹನಗೊಂಡಿದ್ದರು. ಇದಲ್ಲದೆ ಜಿತೇಂದರ್ ಪತ್ನಿ ರೇಖಾ ಅವರಿಗೆ ಗಂಭೀರ ಗಾಯಗಳಾಗಿದ್ದು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+