ಬೆಂಗಳೂರಿಗೆ ಬರುವಾಗ ಪ್ರಸಿದ್ಧ ಮಲಯಾಳಂ ನಟನಿಗೆ ಅಪಘಾತ, ತಂದೆ ಸ್ಥಳದಲ್ಲೇ ಸಾವು!
ಮಲಯಾಳಂನ ಪ್ರಸಿದ್ಧ ನಟ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ಕಾರು ಅಪಘಾತ ಸಂಭವಿಸಿದ್ದು. ನಟನಿಗೆ ಗಾಯಗಳಾಗಿವೆ ಹಾಗೂ ಅವರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೇರಳದ ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಬರುವಾಗ ಭೀಕರ ಕಾರು ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಭದ್ರ ನೆಲೆ ಕಂಡುಕೊಳ್ಳುತ್ತಿದ್ದ ನಟನಿಗೆ ಆಘಾತ ಎದುರಾಗಿದೆ ಅವರ ತಂದೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟರು ಎಂದು ವರದಿಯಾಗಿದೆ.
ಶುಕ್ರವಾರ ಮುಂಜಾನೆ ತಮಿಳುನಾಡಿನ ಧರ್ಮಪುರಿಯಲ್ಲಿ ಈ ರಸ್ತೆ ಮಾರ್ಗವಾಗಿ ಬರುವಾಗ ಮಲಯಾಳಂನ ಪ್ರಸಿದ್ಧ ನಟ ಶೈನ್ ಟಾಮ್ ಚಾಕೊ ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಮುಂಭಾಗದಿಂದ ಬಂದ ಲಾರಿಗೆ ಗುದ್ದಿದ್ದರಿಂದ ಅಪಘಾತ ಸಂಭವಿಸಿದೆ. ಇನ್ನು ಇದೇ ಕಾರಿನಲ್ಲಿ ನಟ ಶೈನ್ ಅವರ ತಂದೆ ಸಿಪಿ ಜಾನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಟನ ತಾಯಿ, ಸಹೋದರ ಮತ್ತು ಕಾರು ಚಾಲಕ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಅಪಘಾತದಲ್ಲಿ ಗಾಯಗೊಂಡಿರುವ ನಟ ಚಾಕೋ ಹಾಗೂ ಇನ್ನುಳಿದವರನ್ನು ತಮಿಳುನಾಡಿನ ಪಲ್ಲಕೊಟ್ಟೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಶೈನ್ ಅವರ ವಿರುದ್ಧ ಹಲವು ಗಂಭೀರ ಆರೋಪಗಳು ಇವೆ. ಡ್ರಗ್ಸ್ ಕೇಸ್‌ನಲ್ಲಿ ಈ ನಟನನ್ನು ಕೇರಳದ ಪೊಲೀಸರು ಬಂಧಿಸಿದ್ದರು. ಅಲ್ಲದೇ ಹಲವು ವಿವಾದದಗಳಲ್ಲೂ ಶೈನ್ ಅವರ ಹೆಸರು ತಳಕು ಹಾಕಿಕೊಂಡಿತ್ತು. ಇನ್ನು ಇತ್ತೀಚಿನ ವರದಿಯ ಪ್ರಕಾರ, ನಟ ಶೈನ್ ಅವರು ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ಶೈನ್ ಅವರಿಗೆ ಹೆಚ್ಚುವರಿ ಚಿಕಿತ್ಸೆ ನೀಡುವ ಉದ್ದೇಶದಿಂದ ಅವರನ್ನು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಕರೆದುಕೊಂಡು ಬರಲಾಗುತ್ತಿತ್ತು ಎಂದು ಹೇಳಲಾಗಿದೆ.
ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ: ದುರಂತ
ಇನ್ನು ಬಹುಭಾಷಾ ನಟ ಶೈನ್ ಟಾಮ್ ಚಾಕೋ ಅವರು ಕೇರಳ ರಾಜ್ಯದ ತ್ರಿಶೂರ್‌ನವರು. ಇವರಿಗೀಗ 41 ವರ್ಷ ವಯಸ್ಸು. ತಮಿಳುನಾಡಿನ ಧರ್ಮಪುರಿ ಸಮೀಪದಲ್ಲಿ ಪಾಲಕೊಟ್ಟೈ ಬಳಿ ಕಾರು ಚಾಲಕ ನಿಯಂತ್ರಣ ತಪ್ಪಿ, ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಹಾನಿಯಾಗಿದೆ. ಅಪಘಾತದಲ್ಲಿ ಶೈನ್ ಟಾಮ್ ಚಾಕೋ ಅವರ ತಂದೆ ಸಿಪಿ ಚಾಕೋ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ನಟಿಯೊಂದಿಗೆ ವಿವಾದ: ಇನ್ನು ಶೈನ್ ಅವರು ಅತ್ಯುತ್ತಮ ನಟ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಅವರು ವಿವಾದಗಳಿಂದ ಖ್ಯಾತಿ ಗಳಿಸಿದ್ದೇ ಹೆಚ್ಚು. ಸಿನಿಮಾ ಚಿತ್ರೀಕರಣದಲ್ಲಿ ವಿವಾದ ಹಾಗೂ ಡ್ರಗ್ಸ್ ಸೇವನೆಯಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ನಟಿ ವಿನ್ಸಿ ಆಲೋಶಿಯಸ್ ಅವರು ಶೈನ್ ಟಾಮ್ ಚಾಕೋ ಡ್ರಗ್ಸ್ ಸೇವನೆ ಮಾಡುತ್ತಾರೆ. ಅಲ್ಲದೇ ಮಲಯಾಳಂ ಚಿತ್ರ ಸೂತ್ರವಾಕ್ಯಂ ಎನ್ನುವ ಚಿತ್ರೀಕರಣದ ಸೆಟ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿದ್ದರು.












Click it and Unblock the Notifications