Fake: ಲಡಾಕ್ ಕಾರ್ಯದರ್ಶಿ ಹೊಗಳಿ ಅಜಿತ್ ದೋವಲ್ ಪತ್ರ
ನವದೆಹಲಿ, ಮೇ 31: ಕೊರೊನಾವೈರಸ್ ಕಾಟದ ನಡುವೆ ಗಡಿಭಾಗದಲ್ಲಿ ಚೀನಾದಿಂದ ಉದ್ವಿಗ್ನ ಪರಿಸ್ಥಿತಿಯನ್ನು ಭಾರತ ಎದುರಿಸುತ್ತಿದೆ. ಈ ನಡುವೆ ಗಡಿಯಲ್ಲಿ ಪರಿಸ್ಥಿತಿ ಸುಧಾರಿಸಲು ತೆಗೆದುಕೊಂಡ ಕ್ರಮಗಳನ್ನು ಪ್ರಶಂಸಿಸಿ ಲಡಾಕ್ ಕಾರ್ಯದರ್ಶಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಲಡಾಕ್ ಆಯುಕ್ತರು ಹಾಗೂ ಕಾರ್ಯದರ್ಶಿಗಳನ್ನು ಪ್ರಶಂಸಿಸಿ ಎನ್ಎಸ್ ಎ ಅಜಿತ್ ಅವರು ಬರೆದಿರುವ ಪತ್ರ ಇಲ್ಲಿದೆ. ಎಲ್ಲಾ ಏಜೆನ್ಸಿ, ಸರ್ಕಾರಿ ಸಂಸ್ಥೆಗಳ ಒಗ್ಗೂಡಿದ ಪ್ರಯತ್ನದಿಂದ ಚೀನಾದ ಕೆಟ್ಟ ಯೋಜನೆಯನ್ನು ಹತ್ತಿಕ್ಕಲು ಸಾಧ್ಯವಾಯಿತು. ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ಎಂದು ರಿಗ್ಜಿನ್ ಸಾಂಫೆಲ್ ಅವರಿಗೆ ಬರೆದಿದ್ದಾರೆ ಎಂಬ ಪತ್ರ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ.

ಸತ್ಯಾಸತ್ಯತೆ: ಆದರೆ, ಇದೊಂಡು ನಕಲಿ ಪತ್ರವಾಗಿದ್ದು, ಭಾರತ ಹಾಗೂ ಚೀನಾ ನಡುವಿನ ಗಡಿ ಬಿಕ್ಕಟ್ಟು ತಿಳಿಗೊಳ್ಳುವ ಸಮಯದಲ್ಲಿ ಈ ಪತ್ರವನ್ನು ಹರಿಬಿಡಲಾಗಿದೆ. ಈ ರೀತಿ ಯಾವುದೇ ಪತ್ರವನ್ನು ಎನ್ಎಸ್ ಎ ಬರೆದಿಲ್ಲ. ಈ ನಡುವೆ ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆಯನ್ನು ಬಗೆಹರಿಸಲು ನಾನು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಆಫರನ್ನು ಉಭಯ ದೇಶಗಳು ತಿರಸ್ಕರಿಸಿವೆ.












Click it and Unblock the Notifications