ವಿಮಾನ ಹೈಜಾಕ್ ಬೆದರಿಕೆ ಸುಳ್ಳು. ಮತ್ತೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಭಾನುವಾರ ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದ ವಿಮಾನ ಹೈಜಾಕ್ ಬೆದರಿಕೆ ಕರೆ ಸುಳ್ಳು ಎಂದು ತನಿಖೆಯಿಂದ ತಿಳಿದು ಬಂದಿದೆ.

ಭಾನುವಾರ ವಿಮಾನ ಹೈಜಾಕ್ ಮಾಡುವುದಾಗಿ ಇ-ಮೇಲ್ ಬಂದ ಹಿನ್ನಲೆಯಲ್ಲಿ ಚೆನ್ನೈ, ಮುಂಬೈ, ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಇದಾದ ನಂತರ ಈ ಹೈಜಾಕ್ ಕರೆಯ ತನಿಖೆ ನಡೆಸಿದಾಗ ಇದೊಂದು ಸುಳ್ಳು ಕರೆ ಎಂದು ತಿಳಿದು ಬಂದಿದೆ.[ಹೈಜಾಕ್ ಬೆದರಿಕೆ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್]

Fake, investigators say on hijack threat

6 ಜನ ವಿಮಾನ ಅಪಹರಣ ಮಾಡುವ ಬಗ್ಗೆ ಚರ್ಚಿಸುತ್ತಿದ್ದರು ಎಂದು ಹೈದರಾಬಾದ್ ಮೂಲದ ಮಹಿಳೆಯೊಬ್ಬರು ಇ-ಮೇಲ್ ಮಾಡಿದ್ದರು. ಈ ಇ-ಮೇಲ್ ನಲ್ಲೇ ಆಕೆ, "ನಾನು ಕೇಳಿಸಿಕೊಂಡಿದ್ದು ಸತ್ಯವೋ ಸುಳ್ಳೊ ಗೊತ್ತಿಲ್ಲ. ಆದರೆ ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ನಿಮ್ಮ ಗಮನಕ್ಕೆ ತರುತ್ತಿದ್ದೇನೆ," ಎಂದು ಹೇಳಿದ್ದರು.

ಆದರೆ ಸದ್ಯ ಅಧಿಕಾರಿಗಳ ತನಿಖೆಯಿಂದ ಇದೊಂದು ನಕಲಿ ಕರೆ ಎಂಬುದು ಗೊತ್ತಾಗಿದೆ. ಆದರೆ ಅಪರಿಚಿತ ಮಹಿಳೆ ಯಾಕೆ ಕರೆ ಮಾಡಿದರು? ಆಕೆ ಯಾರು ಎಂಬುದು ಇನ್ನೂ ಗೊತ್ತಾಗಬೇಕಿದೆ. ಮಹಿಳೆ ಸಿಕ್ಕ ನಂತರ ಆಕೆಯನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Republic Day protocol was triggered off at three major airports following a hijack threat on Sunday. However investigations that have been conducted suggest that the hijack call was a hoax.
Please Wait while comments are loading...