Fact Check: ಲಾಕ್ಡೌನ್ ಫಂಡ್, ಸರ್ಕಾರದಿಂದ 5 ಸಾವಿರ ರು?

ಬೆಂಗಳೂರು, ಮೇ 25: ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮೋದಿ ಸರ್ಕಾರದಿಂದ ಪ್ರತಿಯೊಬ್ಬರಿಗೂ 15 ಸಾವಿರ ರು ಸಿಗಲಿದೆ. ತಪ್ಪದೇ ಅರ್ಜಿ ತುಂಬಿ ಪಡೆದುಕೊಳ್ಳಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ನೆನಪಿರಬಹುದು. ಈಗ ಇದೇ ರೀತಿ ಮತ್ತೊಂದು ಸುಳ್ಳು ಸುದ್ದಿ ಹಬ್ಬಿದೆ. ಲಾಕ್ಡೌನ್ ಫಂಡ್ ಸ್ಥಾಪಿಸಲಾಗಿದೆ. ಎಲ್ಲರಿಗೂ ಇದರಿಂದ ಹಣ ಸಿಗಲಿದೆ ಎಂಬ ಸುದ್ದಿ ಹಬ್ಬಿದೆ.

ವಾಟ್ಸಾಪ್ ನಲ್ಲಿ ಹರಡುತ್ತಿರುವ ಸುದ್ದಿಯ ಪ್ರಕಾರ, ಕೇಂದ್ರ ಸರ್ಕಾರವು ಲಾಕ್ಡೌನ್ ಪರಿಹಾರ ನಿಧಿಯ ರೂಪದಲ್ಲಿ ಎಲ್ಲರಿಗೂ 5,000 ರು ನೀಡುತ್ತಿದೆ. ಈ ಸೌಲಭ್ಯ ಪಡೆಯಲು ಈ ಸಂದೇಶದ ಜೊತೆಗಿರುವ ಲಿಂಕ್ ಕ್ಲಿಕ್ ಮಾಡಿ ಎಂದು ಹೇಳಲಾಗುತ್ತದೆ. ಈ ಸಂದೇಶ ನಂಬಿ ಆ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಮಾಹಿತಿಯನ್ನು ಕೇಳಲಾಗುತ್ತದೆ. ಮಾಹಿತಿ ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗುತ್ತದೆ. ಇಲ್ಲಿವೇ ಬೇರೊಂದು ವಂಚನೆ ವೆಬ್ ತಾಣಕ್ಕೆ ಕರೆದೊಯ್ಯುತ್ತದೆ.

ಈ ರೀತಿಯ ಸುದ್ದಿ ವಾಟ್ಸಾಪ್ ಅಲ್ಲದೆ ಎಸ್ಎಂಎಸ್ ಮೂಲಕವೂ ನಿಮ್ಮನ್ನು ತಲುಪಬಹುದು. ಆದರೆ, ಯಾವುದೇ ಕಾರಣಕ್ಕೂ ಇಂಥ ಸುದ್ದಿಯನ್ನು ನಂಬಬೇಡಿ, ಲಿಂಕ್ ಕ್ಲಿಕ್ ಮಾಡಬೇಡಿ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

Fake: Govt has not promised a Rs 5,000 lockdown fund

ಇದು ಒಂದು ಬಾರಿ ಸಿಗುವ ಸೌಲಭ್ಯ ತ್ವರಿತವಾಗಿ ಪಡೆದುಕೊಳ್ಳಿ ಎಂದು ಹೇಳಲಾಗುತ್ತೆ.ನಿಮ್ಮ ಹೆಸರು, ಫೋನ್ ನಂಬರ್,ವಿಳಾಸ ಹಾಗೂ ಪಿನ್ ನಂಬರ್ ಕೇಳಲಾಗುತ್ತದೆ. ಲಿಂಕ್ ಬಳಸಿ ಹೊಸ ವೆಬ್ ತಾಣದಲ್ಲಿ ಫೇಸ್ಬುಕ್ ಕಾಮೆಂಟ್ ರೀತಿ ಬಾಕ್ಸ್ ಕಂಡು ಬರಲಿದ್ದು, ಅಲ್ಲಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿ, ತಮಗೆ ಹಣ ಸಂದಾಯವಾಗಿದೆ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.

ಆದರೆ, ಇದೊಂದು ಸುಳ್ಳು ಸುದ್ದಿಯಾಗಿದೆ. ಕೇಂದ್ರ ಸರ್ಕಾರವು ಯಾವುದೇ ರೀತಿ ಹಣವನ್ನು ನೀಡುತ್ತಿಲ್ಲ, ಯಾವುದೇ ರೀತಿ ಹಣ ರವಾನೆ, ಹಣ ಪಾವತಿ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಿಲ್ಲ ಎಂದು ಪಿಐಬಿ ಸ್ಪಷ್ಟನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+