• search

ಗುಜರಾತಿನಲ್ಲಿ ಬಿಜೆಪಿ ಗೆಲುವಿನ ರಹಸ್ಯ ಬಹಿರಂಗ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಅಹಮಹಾಬಾದ್, ಡಿಸೆಂಬರ್ 22: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗುಜರಾತಿನಲ್ಲಿ ಪ್ರತಿಷ್ಠಿತ ಕದನವನ್ನು ಗೆದ್ದುಕೊಂಡಿದ್ದಾರೆ. ವಿಜಯ್ ರೂಪಾನಿ ಹಾಗೂ ನಿತಿನ್ ಪಟೇಲ್ ಅವರು ಕ್ರಮವಾಗಿ ಸಿಎಂ ಹಾಗೂ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

  ಸಂಘಟನಾ ಚತುರ, ಅಮಿತ್ ಆಪ್ತ ವಿಜಯ್ ರೂಪಾನಿ!

  ಡಿಸೆಂಬರ್ 25ರಂದು ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಹುಟ್ಟುಹಬ್ಬದ ದಿನದಂದು ರೂಪಾನಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಗುಜರಾತಿನಲ್ಲಿ ಕೇಸರಿ ಪಡೆ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳ ಬಗ್ಗೆ ವರದಿ ಬಹಿರಂಗವಾಗಿದೆ.

  ಗುಜರಾತ್ -ಹಿಮಾಚಲ: ಯಾರು ಗೆದ್ದರು? ಯಾರು ಬಿದ್ದರು?

  150 ಸ್ಥಾನಗಳ ಗುರಿಯನ್ನು ಹೊಂದಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ಹೀಗೂ ಈ ದಿನಕ್ಕೆ 100 ಸ್ಥಾನಕ್ಕೇರಿದೆ. ಸೌರಾಷ್ಟ್ರ ಸೇರಿದಂತೆ ಬಿಜೆಪಿ ಪ್ರಭಾವವಿರುವ ಕ್ಷೇತ್ರಗಳಲ್ಲಿ ಸೋಲಿನ ಹೊಸ್ತಿಲಲ್ಲಿ ನಿಂತು ಗೆಲುವಿನ ತಿಲಕ ಧರಿಸಿದ ಬಿಜೆಪಿಗೆ ಗುಜರಾತಿಗೆ ಗೆಲುವು ಸಂಭ್ರಮಕ್ಕಿಂತ ಎಚ್ಚರಿಕೆ ಗಂಟೆಯಾಗಿದೆ.

  ಅಹಂಕಾರ ಆತ್ಮವಿಶ್ವಾಸಗಳ ಅದ್ಭುತ ಸ್ಟ್ರಾಟಜಿಸ್ಟ್ ಅಮಿತ್ ಶಾ

  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುಜರಾತಿನಲ್ಲಿ ಹಿಂದೂತ್ವ ಪರ ಒಲವು ತೋರಿ, ಚುನಾವಣೆ ಪ್ರಚಾರ ಮಾಡಿದ್ದರು. ದೇಗುಲದ ಟೂರ್ ಮಾಡಿದ್ದರು. ಈಗ ಇದೇ ಪ್ರಕ್ರಿಯೆ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಮುಂದುವರೆಯಲಿದ್ದು, ರಾಹುಲ್ ಹಾಗೂ ಮೋದಿ ಇಬ್ಬರೂ ಕರ್ನಾಟಕ ದೇಗುಲ ದರ್ಶನ ಮಾಡಲಿದ್ದಾರೆ.

  ಮಣಿಶಂಕರ್ ಅಯ್ಯರ್ ಹೇಳಿಕೆ

  ಮಣಿಶಂಕರ್ ಅಯ್ಯರ್ ಹೇಳಿಕೆ

  2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆಗೊಳ್ಳಲು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ 'ಚಾಯ್ ವಾಲ' ಹೇಳಿಕೆಯೂ ಕಾರಣ ಎಂದರೆ ತಪ್ಪಾಗಲಾರದು. ಈಗ ಪ್ರಧಾನಿಯಾಗಿರುವ ಮೋದಿ ವಿರುದ್ಧ 'ನೀಚ್' ಎಂದು ಅಯ್ಯರ್ ಪದ ಪ್ರಯೋಗ ಮಾಡಿದರು. ಇದನ್ನು ವ್ಯಕ್ತಿಗತವಾಗಿ ತೆಗೆದುಕೊಳ್ಳದ ಮೋದಿ, ಚುನಾವಣೆ ಅಸ್ತ್ರವಾಗಿ ಬಳಸಿಕೊಂಡು ಕೆಳ ದರ್ಜೆಯ ಹಿಂದುಳಿದ ವರ್ಗದ ಭಾವನೆಗಳನ್ನು ಕೆರಳಿಸಿ ಮತವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾದರು.

  ಜಿ ಎಸ್ ಟಿ ಸುಧಾರಣೆ

  ಜಿ ಎಸ್ ಟಿ ಸುಧಾರಣೆ

  ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಹೊಂದಿರುವ ಸಾವಿರಾರು ವಸ್ತುಗಳ ಬೆಲೆ ತಗ್ಗಿಸುವ ಮೂಲಕ ಚುನಾವಣೆಗೂ ಮುನ್ನ ಗುಜರಾತಿನ ವ್ಯಾಪಾರಿಗಳ ಮನ ಗೆಲ್ಲುವಲ್ಲಿ ತಕ್ಕಮಟ್ಟಿನ ಯಶಸ್ಸು ಸಾಧಿಸಿದರು. ಸೂರತ್ ನ ವಜ್ರದ ವ್ಯಾಪಾರಿಗಳು, ಜವಳಿ, ತೈಲ, ಗಾದಿ ಮತ್ತು ಗ್ರಾಮೋದ್ಯಮ ಹೀಗೆ ವಿವಿಧ ಕ್ಷೇತ್ರಗಳ ಮೇಲಿನ ತೆರಿಗೆ ಹೊರೆ ಇಳಿಸಿದ್ದು ಚುನಾವಣೆಯಲ್ಲಿ ಪರಿಣಾಮಕಾರಿಯಾಯಿತು.

  ವಿಜಯ್ ರೂಪಾನಿ

  ವಿಜಯ್ ರೂಪಾನಿ

  ಗ್ರಾಮೀಣ ಭಾಗದಲ್ಲಿ ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದ ಅಮಿತ್ ಶಾ ಅವರು, ರೂಪಾನಿ ಮೂಲಕ ಅಸೆಂಬ್ಲಿ ಚುನಾವಣೆಗೂ ಕೆಲ ವಾರಗಳ ಮುಂಚೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಘೋಷಿಸಿದರು. 3 ಲಕ್ಷ ರು ತನಕ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಘೋಷಿಸಿದರು. ಇದರಿಂದ 25ಲಕ್ಷಕ್ಕೂ ಅಧಿಕ ರೈತರಿಗೆ ನೇರವಾಗಿ ಲಾಭ ಸಿಗುವಂತಾಯಿತು.

  ಹಾರ್ದಿಕ್ ಪಟೇಲ್

  ಹಾರ್ದಿಕ್ ಪಟೇಲ್

  ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರ ಅಬ್ಬರವನ್ನು ತಣ್ಣಗಾಗಿಸಲು ಹಾರ್ದಿಕ್ ಪಟೇಲ್ ಹೋಲುವ ಸೆಕ್ಸ್ ವಿಡಿಯೋಗಳು ನೆರವಾಯಿತು. ವಿಡಿಯೋಗಳ ಸತ್ಯಾಸತ್ಯತೆ ಪ್ರಶ್ನಾರ್ಹವಾದರೂ ಚುನಾವಣೆ ಸಂದರ್ಭದಲ್ಲಿ ವಿಡಿಯೋಗಳ ಅಬ್ಬರ ಜೋರಾಯಿತು.ಮದ್ಯ, ವ್ಯಭಿಚಾರ, ಅನಾಚಾರ,ಭ್ರಷ್ಟಾಚಾರ ಎಂದರೆ ಬೆಚ್ಚುವ ಗಾಂಧಿಜೀ ನಾಡಿನಲ್ಲಿ ಇಂಥದ್ದೊಂದು ವಿಡಿಯೋ ಗಿಮಿಕ್ ಭಾರಿ ಪರಿಣಾಮಕಾರಿಯಾಯಿತು.

  ನಿಜಾಮಿ/ ಪಾಕಿಸ್ತಾನ ಹೇಳಿಕೆ

  ನಿಜಾಮಿ/ ಪಾಕಿಸ್ತಾನ ಹೇಳಿಕೆ

  ಕಾಶ್ಮೀರದ ರಾಜಕಾರಣಿ ಸಲ್ಮಾನ್ ನಿಜಾಮಿ ಅವರು ರಾಹುಲ್ ಗಾಂಧಿ ಅವರ ಜತೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರ ಬಗ್ಗೆ ಮೋದಿ ಬಲವಾಗಿ ಟೀಕಿಸಿದರು. ಉಗ್ರ ಅಫ್ಜಲ್ ಗುರು ಪರವಾಗಿ ನಿಜಾಮಿ ಟ್ವೀಟ್ ಮಾಡಿದ್ದನ್ನು ಎತ್ತಿ ಹಿಡಿದು, ಮತದಾರರಲ್ಲಿರುವ ದೇಶಭಕ್ತಿಯನ್ನು ಕೆರಳಿಸಿದರು.

  ಪಾಕಿಸ್ತಾನದ ಜತೆ ಯುಪಿಎ ನಂಟು:ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಎನ್ ಡಿಎ ಮಟ್ಟ ಹಾಕಲು ಸಂಚು ರೂಪಿಸಿದ್ದರು ಎಂದು ಮೋದಿ ಆರೋಪಿಸಿದ್ದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The following six factors helped the BJP turn the tide in Gujarat. The following six factors helped the BJP turn the tide in Gujarat: The Mani Shankar Aiyar, GST, Vijay Rupani reforms, Anti- Pakistan, Hardik Tapes, Nizami factor.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more