ಕಾಂಗ್ರೆಸ್ ಐಟಿ ಸೆಲ್ ಗೆ ಆಘಾತ, 687 ಫೇಸ್ ಬುಕ್ ಪುಟಗಳು ಬಂದ್
ಬೆಂಗಳೂರು, ಏಪ್ರಿಲ್ 01: ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಮಿತಿ ಮೀರಿದ್ದು, ದೇಶದ ಪುರಾತನ ಪಕ್ಷಕ್ಕೆ ಇದಕ್ಕೆ ಭಾರಿ ಬೆಲೆ ತೆತ್ತಿದೆ. ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಗೆ ಸೇರಿದ ಸುಮಾರು 687 ಪುಟ ಹಾಗೂ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಫೇಸ್ ಬುಕ್ ಹೇಳಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭೆ ಚುನಾವಣೆ ವೇಳೆ ನಿಷ್ಪಕ್ಷಪಾತ, ಪಾರದರ್ಶಕ ಪ್ರಕ್ರಿಯೆಯನ್ನು ಕಾಯ್ದುಕೊಳ್ಳಲು ಚುನಾವಣಾ ಆಯೋಗ ಎಲ್ಲಾ ರೀತಿಯಿಂದಲೂ ಯತ್ನಿಸುತ್ತಿದೆ. ಚುನಾವಣಾ ಆಕ್ರಮ ತಡೆಗಟ್ಟಲು ತಂತ್ರಜ್ಞಾನದ ಮೊರೆ ಕೂಡಾ ಹೋಗಲಾಗಿದೆ.
ಫೇಸ್ ಬುಕ್ ಪುಟ ಬಂದ್ ಮಾಡಿದ್ದು ಏಕೆ?: ಈ ಪುಟಗಳು ಹಾಗೂ ಖಾತೆಗಳು ಫೇಕ್ ಸುದ್ದಿ ಹಬ್ಬಿಸುತ್ತಿವೆ ಎಂಬ ಕಾರಣಕ್ಕೆ ಮಾತ್ರ ಬಂದ್ ಮಾಡಿಲ್ಲ. ಬದಲಿಗೆ ದೃಢಪಡದ ಸುದ್ದಿಗಳನ್ನು ಸ್ಪಾಮ್ ಮಾದರಿ ಪ್ರಸಾರ ಮಾಡಿದ ಕಾರಣ ನೀಡಲಾಗಿದೆ.

ಇದೇ ರೀತಿ ಪಾಕಿಸ್ತಾನ ಮೂಲದ 103 ಇನ್ಸ್ಟಗ್ರಾಮ್ ಖಾತೆ, ಪುಟಗಳನ್ನು ಕೂಡಾ ತೆಗೆದು ಹಾಕಲಾಗಿದೆ ಎಂದು ಫೇಸ್ ಬುಕ್ ಕ್ರಿಪ್ಟೋಸೆಕ್ಯುರಿಟಿ ಪಾಲಿಸಿ ಮುಖ್ಯಸ್ಥರಾದ ನಾಥನಿಯಲ್ ಗ್ಲೆಶೆರ್ ಹೇಳಿದ್ದಾರೆ.
ಈ ಖಾತೆ ಅಥವಾ ಪುಟದ ಮಾಲೀಕರು ತಮ್ಮ ಐಡೆಂಡೆಟಿ ದೃಢಪಡಿಸಿಲ್ಲ. ದೃಢಪಡದ ಸುದ್ದಿಗಳನ್ನು ಪ್ರಸಾರ ಮಾಡಿ ಸ್ಪಾಮ್ ಮಾಡುತ್ತಿರುವುದು ಪತ್ತೆಯಾಗಿದ್ದು, ಹೀಗಾಗಿ ಕ್ರಮ ಜರುಗಿಸಲಾಗಿದೆ ಎಂದು ವಿವರಿಸಿದ್ದಾರೆ.
ಆಗಸ್ಟ್ 2014ರಿಂದ ಮಾರ್ಚ್ 2019ರ ಅವಧಿಯಲ್ಲಿ ಸುಮಾರು 39000 ಡಾಲರ್ ಮೊತ್ತವನ್ನು ಜಾಹೀರಾತು ರೂಪದಲ್ಲಿ ಈ ಪುಟಗಳು ಖರ್ಚು ಮಾಡಿವೆ ಎಂದು ಫೇಸ್ ಬುಕ್ ಹೇಳಿದೆ.ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
Reuters: Facebook says it has removed 15 pages and accounts linked to individuals related to an Indian IT firm named Silver Touch, a company associated with Prime Minister Narendra Modi’s NaMo app pic.twitter.com/rCwnA2Jpnu
— ANI (@ANI) April 1, 2019
ಬಿಜೆಪಿಗೂ ಆಘಾತ: ನಮೋ ಆಪ್ ಜತೆ ಗುರುತಿಸಿಕೊಂಡಿರುವ ಸಿಲ್ವರ್ ಟಚ್ ಗೆ ಸಂಬಂಧಿಸಿದ 15 ಫೇಸ್ ಬುಕ್ ಪುಟಗಳನ್ನು ಕೂಡಾ ತೆಗೆದು ಹಾಕಲಾಗಿದೆ. ಈ ಪುಟಗಳು ಕೂಡಾ ಫೇಸ್ ಬುಕ್ ನ ನಿಯಮಾವಳಿಗೆ ಬದ್ಧವಾಗಿಲ್ಲ ಹಾಗೂ ಪುಟಗಳ ಮಾಲೀಕರು ತಮ್ಮ ಅಸ್ತಿತ್ವದ ಗುರುತು ದೃಢಪಡಿಸಿಲ್ಲ ಎಂದು ಫೇಸ್ ಬುಕ್ ಹೇಳಿದೆ.












Click it and Unblock the Notifications