ದೆಹಲಿಯಲ್ಲಿ ತೀವ್ರ ಚಳಿ: ಮಂಜಿನಿಂದಾಗಿ ಹತ್ತಕ್ಕೂ ಹೆಚ್ಚು ರೈಲುಗಳು ವಿಳಂಬ
ದೆಹಲಿ ಡಿಸೆಂಬರ್ 24: ದೆಹಲಿಯಲ್ಲಿ ತೀವ್ರ ಚಳಿ ಮುಂದುವರಿದಿದೆ. ಶನಿವಾರ ಬೆಳಗ್ಗೆ ದೆಹಲಿಯ ಹಲವು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಗೋಚರತೆ ಬಹುತೇಕ ತಗ್ಗಿರುವುದು ಕಂಡುಬಂದಿದೆ. ದಟ್ಟವಾದ ಮಂಜು ರಸ್ತೆ ಮತ್ತು ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ದೆಹಲಿಯ ಮುಖ್ಯ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯ ಕನಿಷ್ಠ ತಾಪಮಾನ 5.4 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಇದು ಸಾಮಾನ್ಯಕ್ಕಿಂತ ಮೂರು ಡಿಗ್ರಿ ಕಡಿಮೆಯಾಗಿದೆ. ಇದರಿಂದಾಗಿ ಒಟ್ಟು 14 ರೈಲುಗಳು ಒಂದೂವರೆ ಗಂಟೆಯಿಂದ ಮೂರೂವರೆ ಗಂಟೆ ತಡವಾಗಿ ಸಂಚರಿಸುತ್ತಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 5:30ಕ್ಕೆ, ದೆಹಲಿಯ ಎರಡು ಹವಾಮಾನ ಕೇಂದ್ರಗಳಲ್ಲಿ ಕಡಿಮೆ ಗೋಚರತೆ, ಪಾಲಂನಲ್ಲಿ 100 ಮೀಟರ್ ಮತ್ತು ಸಫ್ದರ್ಗಂಜ್ ನಲ್ಲಿ 200 ಮೀಟರ್ ದಾಖಲಾಗಿದೆ.
ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿ ದಟ್ಟವಾದ ಮಂಜು
ಮುಖ್ಯವಾಗಿ ಪಂಜಾಬ್, ಉತ್ತರ ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿ ಮಂಜಿನ ಪದರವನ್ನು ಗಮನಿಸಲಾಗಿದೆ ಎಂದು ಎಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರದ ಕೆಲವು ಭಾಗಗಳಲ್ಲಿ ಕಡಿಮೆ ಗೋಚರಣೆ ದಾಖಲಾಗಿದೆ. ಉತ್ತರ ಪ್ರದೇಶದ ಅನೇಕ ಪ್ರದೇಶಗಳು ಇನ್ನೂ ಮಂಜಿನ ಪ್ರಭಾವದಿಂದ ದೂರವಿದೆ. ಅಲ್ಲಿ ಪಂಜಾಬ್‌ನ ಪಟಿಯಾಲಾದಲ್ಲಿ 25 ಮೀಟರ್ ಮತ್ತು ರಾಜಸ್ಥಾನದ ಗಂಗಾನಗರದಲ್ಲಿ 0 ಮೀಟರ್ ಇತ್ತು.
ಎಎಂಡಿ ಪ್ರಕಾರ, ಗೋಚರತೆ 0 ಮತ್ತು 50 ಮೀಟರ್‌ಗಳ ನಡುವೆ 'ಅತ್ಯಂತ ದಟ್ಟವಾದ' ಮಂಜು ಸಂಭವಿಸುತ್ತದೆ. 51 ಮತ್ತು 200 ರ ನಡುವೆ 'ದಟ್ಟವಾದ ಮಂಜು', 201 ಮತ್ತು 500 ರ ನಡುವೆ 'ಮಧ್ಯಮ ಮಂಜು' ಮತ್ತು 501 ಮತ್ತು 1,000 ರ ನಡುವೆ 'ಕಡಿಮೆ ಮಂಜು' ದಾಖಲಾಗಿದೆ.

ದೆಹಲಿಯಲ್ಲಿ ಅತ್ಯಂತ ಚಳಿ ದಾಖಲು
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರದಂದು ಅತ್ಯಂತ ಚಳಿಯನ್ನು ದಾಖಲಿಸಿದೆ ಎಂದು ಹೇಳಿದೆ. ಶುಕ್ರವಾರ (ಡಿಸೆಂಬರ್ 22) ಬೆಳಗ್ಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಗುರುವಾರದ ತಾಪಮಾನಕ್ಕಿಂತ ಎರಡು ಹಂತಗಳಷ್ಟು ಕಡಿಮೆಯಾಗಿದೆ. ಗುರುವಾರ 7.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಡಿಸೆಂಬರ್ 28ರವರೆಗೆ ದೆಹಲಿಯಲ್ಲಿ ಚಳಿ ಹೆಚ್ಚಳ
ಭಾರತ ಹವಾಮಾನ ಇಲಾಖೆ (IMD) ತನ್ನ ಬುಲೆಟಿನ್‌ನಲ್ಲಿ ಇಂಡೋ-ಗಂಗಾ ಬಯಲು ಪ್ರದೇಶದಲ್ಲಿ ಲಘು ಗಾಳಿ ಮತ್ತು ಹಿಮಾಲಯದಿಂದ ಡಿಸೆಂಬರ್ 28 ರವರೆಗೆ ಒಣ ಉತ್ತರ / ವಾಯುವ್ಯ ಮಾರುತಗಳು ಇತರ ಕೆಲವು ಪ್ರದೇಶಗಳಲ್ಲಿ ಮತ್ತು ವಾಯುವ್ಯ ಮತ್ತು ಶೀತ ಅಲೆಗಳ ಪರಿಸ್ಥಿತಿಗಳು ಮಧ್ಯ ಭಾರತದಲ್ಲಿ ಮುಂದುವರಿಯುತ್ತದೆ ಎಂದು ಮುನ್ಸೂಚನೆ ನೀಡಿದೆ. ದೆಹಲಿಯಲ್ಲೂ ಡಿಸೆಂಬರ್ ವರೆಗೆ ಚಳಿ ಹೆಚ್ಚಾಗಲಿದೆ.

ಜನವರಿ 1 ರಿಂದ ಜನವರಿ 15 ರವರೆಗೆ ದೆಹಲಿಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಗುರುವಾರ ಹೊರಡಿಸಿದ ಸುತ್ತೋಲೆಯಲ್ಲಿ ದೆಹಲಿ ಶಿಕ್ಷಣ ನಿರ್ದೇಶನಾಲಯ ಚಳಿಗಾಲದ ಕಾರಣ ಜನವರಿ 1 ರಿಂದ ಜನವರಿ 15 ರವರೆಗೆ ದೆಹಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಹೇಳಿದೆ. IX ರಿಂದ XII ತರಗತಿಗಳ ವಿದ್ಯಾರ್ಥಿಗಳು ಜನವರಿ 2 ರಿಂದ ಜನವರಿ 14 ರವರೆಗೆ ಕೆಲವು ತರಗತಿಗಳಿಗೆ ಹಾಜರಾಗಬಹುದು.












Click it and Unblock the Notifications