ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರಿಗೆ ಭರ್ಜರಿ ಗೆಲುವು!
ದೇಶದಲ್ಲಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲೂ ಪ್ರಾತಿನಿಧ್ಯ ನೀಡಲಾಗುತ್ತಿದೆ. ಈ ಕಾರಣಕ್ಕೆ ಮೀಸಲಾತಿ ಕೂಡ ಇದೆ. ಅದರಲ್ಲೂ ರಾಜಕೀಯ ಅಖಾಡದಲ್ಲಿ, ಮಹಿಳೆಯರ ಕೈ ಕೂಡ ಬಲವಾಗುತ್ತಿದೆ. ಇನ್ನು ಈ ಹಿನ್ನೆಲೆ ಮತದಾನ ಮಾಡುವಲ್ಲಿಯೂ, ಮಹಿಳಾ ಮತದಾರರು ಮುಂದೆ ಬರುತ್ತಿದ್ದಾರೆ. ಇದೀಗ ಇಲ್ಲೊಂದು ಅತಿ ಹಿಂದುಳಿದ ರಾಜ್ಯದಲ್ಲಿ ಕೂಡ ಮಹಿಳಾ ಮತದಾರರು ಚರಿತ್ರೆ ಬರೆದಿದ್ದಾರೆ.
ಹೌದು, ಛತ್ತೀಸ್‌ಗಢ ರಾಜ್ಯದ ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಈ ರಾಜ್ಯದಲ್ಲಿ ನಾನಾ ಸಮಸ್ಯೆ ಇದ್ದರೂ ಪ್ರಮುಖವಾಗಿ ನಕ್ಸಲರ ಕಾಟ ಹೆಚ್ಚಾಗುತ್ತಿದೆ. ಛತ್ತೀಸ್‌ಗಢದಲ್ಲಿ ನಕ್ಸಲ್ ಹಾವಳಿ ಹೆಚ್ಚಾಗಿದ್ದು ಇದು ದೇಶೀಯ ಮಟ್ಟದಲ್ಲಿ ಕೂಡ ದೊಡ್ಡ ತಲೆನೋವು ತಂದೊಡ್ಡಿದೆ. ಅದ್ರಲ್ಲೂ ಛತ್ತೀಸ್‌ಗಢದ ಸ್ಥಳೀಯರಿಗೆ ಪದೇ ಪದೆ ಈ ನಕ್ಸಲ್ ದಾಳಿಯ ಭಯ ಕಾಡುತ್ತಿದೆ. ಈ ಎಲ್ಲಾ ವಿಚಾರಗಳನ್ನ ಇಟ್ಟುಕೊಂಡು ಕಾಂಗ್ರೆಸ್ & ಬಿಜೆಪಿ ಛತ್ತೀಸ್‌ಗಢ ರಾಜ್ಯದಲ್ಲಿ ಫೈಟ್ ಮಾಡಿದ್ದವು. ಆದ್ರೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳು ಗೆಲ್ಲುವ ಮೊದಲೇ ಈ ರಾಜ್ಯದಲ್ಲಿ ಮಹಿಳೆಯರು ಗೆದ್ದು ಬೀಗಿದ್ದಾರೆ, ಹೇಗೆ ಗೊತ್ತಾ?

ಹೊಸ ಚರಿತ್ರೆ ಸೃಷ್ಟಿಸಿದ ನಾರಿಯರು!
ಅಂದಹಾಗೆ ಈಗ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂನ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಈ ಪೈಕಿ ಉಳಿದ 4 ರಾಜ್ಯದಲ್ಲಿ ಒಂದು ಲೆಕ್ಕವಾದರೆ ಛತ್ತೀಸ್‌ಗಢ ಚುನಾವಣೆ ಇನ್ನೊಂದು ಲೆಕ್ಕ. ಛತ್ತೀಸ್‌ಗಢ ಮಾತ್ರ ದೇಶದ ಗಮನ ಸೆಳೆಯುತ್ತಿದೆ. ನಕ್ಸಲ್ ಹಾವಳಿ ಹಿನ್ನೆಲೆ & ಭದ್ರತೆ ಅಗತ್ಯತೆ ಕಾರಣಕ್ಕಾಗಿ ಛತ್ತೀಸ್‌ಗಢ ರಾಜ್ಯದಲ್ಲಿ 2 ಹಂತದಲ್ಲಿ ಚುನಾವಣೆ ನಡೆದಿದೆ. ನವೆಂಬರ್ 7 & ನವೆಂಬರ್ 17ಕ್ಕೆ ಚುನಾವಣೆ ನಡೆದಿದೆ. ಹೀಗಾಗಿ 90 ಸ್ಥಾನಗಳ ಈ ರಾಜ್ಯದಲ್ಲಿ ಬಿಜೆಪಿ & ಕಾಂಗ್ರೆಸ್ ಕದನ ಮುಗಿದು, ಫಲಿತಾಂಶಕ್ಕೆ ಕಾಯುತ್ತಿವೆ ಎರಡೂ ಪಕ್ಷಗಳು. ಈ ಮಧ್ಯೆ ಛತ್ತೀಸ್‌ಗಢ ಚುನಾವಣೆ ಅಖಾಡದಲ್ಲಿ ದಿಗ್ವಿಜಯ ಸಿಕ್ಕಿದೆ.
ಮಹಿಳಾ ಮತದಾರರ ಸಂಖ್ಯೆ ಎಷ್ಟು?
ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತದಾನದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಮುಂದೆ ಇದ್ದಾರೆ. ಪುರುಷರಿಗಿಂತಲು 64 ಸಾವಿರ ಮಹಿಳೆಯರು ಹೆಚ್ಚಾಗಿ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಒಟ್ಟು 90 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 50 ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಈ ರಾಜ್ಯದಲ್ಲಿ 1.55 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ. ಅವರಲ್ಲಿ 78.12 ಲಕ್ಷ ಮಂದಿ ಮಹಿಳೆಯರಿದ್ದರೆ, 77.48 ಲಕ್ಷ ಮಂದಿ ಪುರುಷರು ಇದ್ದಾರೆ.
ಎಷ್ಟು ಮಹಿಳಾ ಅಭ್ಯರ್ಥಿಗಳು ಇದ್ದರು?
ಇನ್ನು ಈ ಚುನಾವಣೆಯಲ್ಲಿ 18 ಮಹಿಳಾ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿತ್ತು ಹಾಗೂ ಬಿಜೆಪಿ ಪಕ್ಷ ಒಟ್ಟು 15 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಹೀಗಾಗಿ ಸಖತ್ ಗಮನ ಸೆಳೆದಿದ್ದ ಛತ್ತೀಸ್‌ಗಢ ಚುನಾವಣೆ ಮತ್ತಷ್ಟು ಸದ್ದು ಮಾಡಿದೆ. ಇದೇ ಮೊದಲನೇ ಬಾರಿಗೆ ಹಿಗೆ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಗಮನವನ್ನ ಸೆಳೆದಿದ್ದಾರೆ ಛತ್ತೀಸ್‌ಗಢ ರಾಜ್ಯದಲ್ಲಿ.

ಕೇಂದ್ರ ನಾಯಕರಿಂದ ಭರ್ಜರಿ ಪ್ರಚಾರ
ಒಟ್ನಲ್ಲಿ ಪಂಚರಾಜ್ಯ ಚುನಾವಣೆಯಲ್ಲಿ ಭಾರಿ ಗಮನ ಸೆಳೆದಿರುವ ಛತ್ತೀಸ್‌ಗಢ ರಾಜ್ಯದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಹಾಗೇ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ರಾಜ್ಯದ ಚುನಾವಣಾ ಅಖಾಡ ತೀವ್ರ ತಿಕ್ಕಾಟಕ್ಕೆ ಸಾಕ್ಷಿಯಾಗಿತ್ತು. ಬಿಜೆಪಿ ಕೇಂದ್ರ ವರಿಷ್ಠರು ಹಾಗೂ ಮುಖಂಡರು ಛತ್ತೀಸ್‌ಗಢದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವ್ರು ಸೇರಿದಂತೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕೂಡ ಛತ್ತೀಸ್‌ಗಢದಲ್ಲಿ ಬಿಜೆಪಿ ನಾಯಕರಿಗೆ ಬಲ ತುಂಬಿದ್ದರು.
ಹಾಗೇ ಮತ್ತೊಂದು ಕಡೆ ಕಾಂಗ್ರೆಸ್‌ನ ಕೇಂದ್ರ ನಾಯಕರು ಕೂಡ, ಛತ್ತೀಸ್‌ಗಢ ರಾಜ್ಯದಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಹೀಗೆ ಛತ್ತೀಸ್‌ಗಢ ರಾಜ್ಯದಲ್ಲಿ ಯಾರಿಗೆ ಜಯ ಸಿಗುತ್ತೆ? ಯಾರಿಗೆ ಸೋಲು? ಎಂಬ ಲೆಕ್ಕಾಚಾರ ಈಗ ಜೋರಾಗಿ ನಡೆಯುತ್ತಿದೆ. ಡಿಸೆಂಬರ್ 3ಕ್ಕೆ ಈ ಎಲ್ಲಾ ಕುತೂಹಲಕ್ಕೂ ಉತ್ತರ ಸಿಗಲಿದೆ, ಹೀಗಾಗಿ ಇನ್ನೂ ಎರಡು ವಾರ ಕಾಯಬೇಕಿದೆ.
-
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್












Click it and Unblock the Notifications