• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಯಾರ್ಯಾರಿಗೆ ನೀಡುವಂತೆ ಶಿಫಾರಸು?

|

ನವದೆಹಲಿ, ಸೆಪ್ಟೆಂಬರ್ 29: ಯಾರಿಗೆ ಕೊರೊನಾ ಸೋಂಕಿನಿಂದ ಅತಿ ಹೆಚ್ಚು ಅಪಾಯವಿದೆ ಅವರಿಗೆ ಮಾತ್ರ ಕೊವಿಡ್ 19 ಲಸಿಕೆಯನ್ನು ಉಚಿತವಾಗಿ ನೀಡಬೇಕೆಂದು ತಜ್ಞರ ತಂಡ ಶಿಫಾರಸು ಮಾಡಿದೆ.

ಹಾಗೆಯೇ ಉಳಿದವರೆಲ್ಲರೂ ತಮ್ಮ ಹಣದಲ್ಲಿಯೇ ಲಸಿಕೆ ಖರೀದಿಸಬೇಕು ಎಂಬ ಮಾಹಿತಿ ತಿಳಿದುಬಂದಿದೆ.ಇದುವರೆಗೆ ಸಿದ್ಧಪಡಿಸಿದ ಕಾರ್ಯತಂತ್ರದ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಸಹ-ಅಸ್ವಸ್ಥತೆ ಹೊಂದಿರುವ ಜನರು ಮತ್ತು ಮುಂಚೂಣಿ ಕೆಲಸಗಾರರಿಗೆ ಮಾತ್ರ ಲಸಿಕೆ ನೀಡಲು ಸರ್ಕಾರ ಹಣ ಪಾವತಿಸಲಿದೆ.

ಭಾರತದಲ್ಲಿ ಒಂದೇ ದಿನ 70589 ಮಂದಿಗೆ ಕೊವಿಡ್-19 ಪಾಸಿಟಿವ್ ಭಾರತದಲ್ಲಿ ಒಂದೇ ದಿನ 70589 ಮಂದಿಗೆ ಕೊವಿಡ್-19 ಪಾಸಿಟಿವ್

ನೀತಿ ಆಯೋಗದ ಸದಸ್ಯ ಡಾ. ವಿ. ಕೆ. ಪೌಲ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೀಶ್ ಭೂಷಣ್ ನೇತೃತ್ವದ ಗುಂಪು ಸಿದ್ದಪಡಿಸಿರುವ ಲಸಿಕೆಯ ಯೋಜನೆಯನ್ನು ಅನುಮೋದನೆಗಾಗಿ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ.

ಇದುವರೆಗೆ ಅನೇಕ ಮೆಟ್ರೋಪಾಲಿಟನ್ ನಗರಗಳಲ್ಲಿ ನಡೆಸಿದ ಸೆರೋ ಸರ್ವೇಗಳ ಪ್ರಕಾರ, ಸುಮಾರು ಶೇ. 25-30% ಜನಸಂಖ್ಯೆಯು ಈಗಾಗಲೇ ಸಾರ್ಸ್ CoV-2 ಗೆ ಒಡ್ಡಿಕೊಂಡಿವೆ.ಪರಿಣಾಮಕಾರಿ ಔಷಧಿ ಬರುವ ಹೊತ್ತಿಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಗುಂಪಿನ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಒಂದು ಅಂದಾಜಿನಂತೆ ಲಸಿಕೆ ಅಗತ್ಯವಿರುವ ಜನಸಂಖ್ಯೆಯು 30 ರಿಂದ 40 ಕೋಟಿ ಇರಬಹುದು. ಹೆಚ್ಚು ದುರ್ಬಲರಾಗಿರುವವರು ಮತ್ತು ಈ ಗುಂಪಿನ ಪೈಕಿ ಸಾರ್ಸ್ CoV-2 ಪ್ರತಿಕಾಯಕ್ಕಾಗಿ ನೆಗೆಟಿವ್ ಬಂದಿರುವವರಿಗೆ ಮಾತ್ರ ಲಸಿಕೆ ನೀಡಲು ಸರ್ಕಾರ ಹಣ ಪಾವತಿಸಲಿದೆ ಎಂದು ಅವರು ತಿಳಿಸಿದ್ದಾರೆ.

English summary
India's expert group on Covid-19 vaccine administration is considering a antibody test driven immunization plan that will include only high-risk population while the majority of the citizens may be required to pay for the vaccines from their own pockets, this newspaper has learnt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X