ಗೆದ್ದೆ ಗೆಲ್ಲುವ ನಂಬಿಕೆಯಲ್ಲಿ ಬಿಜೆಪಿ; ಅದ್ಧೂರಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆ!
ನವದೆಹಲಿ, ಜೂನ್. 03: ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಎಕ್ಸಿಟ್ ಪೋಲ್ ರಿಸಲ್ಟ್‌ಗಳು ಎಲ್ಲವೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ನೀಡಿವೆ. ಈ ಫಲಿತಾಂಶಗಳಿಂದ ಸಕತ್ ಜೋಶ್‌ನಲ್ಲಿರುವ ಬಿಜೆಪಿ ಈಗಾಗಲೇ ಹೊಸ ಸರ್ಕಾರದ ಅಧಿಕೃತ ಪ್ರಮಾಣ ವಚನ ಸಮಾರಂಭದ ಸಿದ್ಧತೆಯಲ್ಲಿ ತೊಡಗಿದೆ ಎಂಬ ವರದಿಗಳು ಸಿಕ್ಕಿವೆ.
ಹೊಸ ಸರ್ಕಾರದ ಅಧಿಕೃತ ಪ್ರಮಾಣ ವಚನ ಸಮಾರಂಭದ ಜೊತೆಗೆ, ಬಿಜೆಪಿಯು "ರಾಜಕೀಯ ಕಾರ್ಯಕ್ರಮ" ವನ್ನು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮಗಳು ವಾರಾಂತ್ಯದಲ್ಲಿ ನಿಗದಿಯಾಗುವ ಸಾಧ್ಯತೆಯಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿಗೆ ಬಹುಮತವನ್ನು ನೀಡಿವೆ. ದಕ್ಷಿಣ ಭಾರತದಲ್ಲೂ ಬಿಜೆಪಿ ಕಮಾಲ್ ಮಾಡಲಿದೆ ಎಂದೇ ಹಲವು ಸಮೀಕ್ಷೆಗಳು ಹೇಳಿವೆ.

ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆ!
ಇನ್ನು, ಮಂಗಳವಾರದ ಮತ ಎಣಿಕೆಗೆ ಮುಂಚಿತವಾಗಿ, ರಾಷ್ಟ್ರಪತಿಗಳ ಸಚಿವಾಲಯವು ಮೇ 28 ರಂದು "ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಂತ್ರಿ ಮತ್ತು ಇತರ ಮಂತ್ರಿಗಳ ಪ್ರಮಾಣವಚನ ಸಮಾರಂಭಕ್ಕಾಗಿ ಅಲಂಕಾರಿಕ ಒಳಾಂಗಣ ಸಸ್ಯಗಳು ಮತ್ತು ಅಲಂಕಾರಿಕ ಸಸ್ಯಗಳನ್ನು ಪೂರೈಸಬೇಕು" ಎಂದು ಟೆಂಡರ್ ಅನ್ನು ಬಿಡುಗಡೆ ಮಾಡಿದೆ.
21.97 ಲಕ್ಷ ಅಂದಾಜು ವೆಚ್ಚದ ಟೆಂಡರ್ ಸೋಮವಾರದಿಂದ ಬಿಡ್‌ಗೆ ಓಪನ್ ಆಗಲಿದೆ. ಗುತ್ತಿಗೆದಾರರಿಗೆ ಇವುಗಳನ್ನು ಪೂರೈಸಲು ಐದು ದಿನಗಳ ಕಾಲಾವಕಾಶವಿದೆ. ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಳೆದ ವಾರವೇ ಸಿದ್ಧತೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ಈ ವಿಷಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.
ಲೋಕಸಭೆಯ ಸಚಿವಾಲಯವು ದೇಶಾದ್ಯಂತ ಹೊಸದಾಗಿ ಚುನಾಯಿತ ಸಂಸದರ ಪ್ರಯಾಣ, ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಂತಹ ಸಾರಿಗೆ ಸ್ಥಳಗಳಿಗೆ ಆಗಮಿಸಲು ಮತ್ತು ರಾಜಧಾನಿಯಲ್ಲಿ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮಾಣ ವಚನದ ದಿನವೇ ರಾಅಜಕೀಯ ಕಾರ್ಯಕ್ರಮ
ಅಧಿಕೃತ ಪ್ರಮಾಣ ವಚನ ಸ್ವೀಕಾರದ ದಿನವೇ 'ರಾಜಕೀಯ ಕಾರ್ಯಕ್ರಮ' ಭಾರತ ಮಂಟಪ ಅಥವಾ ಕರ್ತವ್ಯ ಪಥದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದು ಧ್ವನಿ ಮತ್ತು ಬೆಳಕಿನ ಪ್ರದರ್ಶನದೊಂದಿಗೆ "ಭಾರತದ ಸಾಂಸ್ಕೃತಿಕ ಪರಂಪರೆಯ" ಒಂದು ಶೋ ಇರಲಿದೆ. ಕಾರ್ಯಕ್ರಮದಲ್ಲಿ "ವಿದೇಶಿ ಸರ್ಕಾರಗಳ ಪ್ರತಿನಿಧಿಗಳು" ಸೇರಿದಂತೆ 8,000 ದಿಂದ 10,000 ಜನರು ಭಾಗವಹಿಸುವ ಸಾಧ್ಯತೆಯಿದೆ.
ಹಿರಿಯ ಸರ್ಕಾರಿ ಅಧಿಕಾರಿಯ ಪ್ರಕಾರ, ಪ್ರಮಾಣ ವಚನ ಸಮಾರಂಭದ ನಂತರ ಆಚರಣೆ/ಸಾಂಸ್ಕೃತಿಕ ಕಾರ್ಯಕ್ರಮದ ಯೋಜನೆಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ, ಆದರೆ ಜೂನ್ 9 ರಂದು ನಡೆಯಲಿದೆ. 2019 ರಲ್ಲಿ, ಫಲಿತಾಂಶಗಳನ್ನು ಘೋಷಿಸಿದ ಒಂದು ವಾರದ ನಂತರ ಮೇ 30 ರಂದು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತು.
ಹವಾಮಾನ ಪರಿಸ್ಥಿತಿ ಬಗ್ಗೆಯೂ ಯೋಚನೆ
ಸದ್ಯ ದೇಶದಲ್ಲಿ ಹವಾಮಾನ ಪರಿಸ್ಥಿತಿಗಳು ಅಷ್ಟು ಸರಿಯಾಗಿಲ್ಲ. ಹೀಗಾಗಿ ಅದನ್ನು ಕೂಡ ಗಮನದಲ್ಲಿಟ್ಟುಕೊಂಡು ದೊಡ್ಡ ಸಭೆಯನ್ನು ಆಯೋಜಿಸುವ ಜೊತೆಗೆ "ರಾಜಕೀಯ ಘಟನೆ" ಕುರಿತು ಚರ್ಚಿಸಲಾಗಿದೆ. ರಾಮಲೀಲಾ ಮೈದಾನ ಮತ್ತು ಕೆಂಪು ಕೋಟೆಯಿಂದ ಭಾರತ್ ಮಂಟಪಂ ಮತ್ತು ಯಶೋಭೂಮಿ ಕನ್ವೆನ್ಷನ್ ಸೆಂಟರ್ ವರೆಗಿನ ವಿವಿಧ ಸ್ಥಳಗಳನ್ನು ಆಯ್ಕೆಗಳಾಗಿ ಇಟ್ಟುಕೊಳ್ಳಲಾಗಿದೆ. ತಾಪಮಾನವನ್ನು ಗಮನಿಸಿದರೆ ಈವೆಂಟ್ ಅನ್ನು ಭಾರತ ಮಂಟಪ ಅಥವಾ ಯಶೋಭೂಮಿಯಂತಹ ಒಳಾಂಗಣ ಸೌಲಭ್ಯಗಳಲ್ಲಿ ನಡೆಸುವ ಸಾಧ್ಯತೆಯಿದೆ" ಎಂದು ಪಕ್ಷದ ನಾಯಕರು ಹೇಳಿದ್ದಾರೆ.












Click it and Unblock the Notifications