Exit Poll: ಮಹಾರಾಷ್ಟ್ರ ಮಹಾ ಚುನಾವಣೆಯಲ್ಲಿ ಯಾರಿಗೆ ಗೆಲುವು?

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಒಟ್ಟು 288 ಸ್ಥಾನಕ್ಕೆ ನಡೆದ ವೋಟಿಂಗ್ ಇಡೀ ಭಾರತದ ಗಮನ ಸೆಳೆದಿತ್ತು. ಅದರಲ್ಲೂ ಕಾಂಗ್ರೆಸ್ & ಬಿಜೆಪಿಯ ನಡುವೆ ಭಾರಿ ದೊಡ್ಡ ತಿಕ್ಕಾಟ ಕೂಡ ಏರ್ಪಟ್ಟಿತ್ತು. ಹಾಗಾದ್ರೆ ಈಗ ಮಹಾರಾಷ್ಟ್ರ ಮಹಾ ಚುನಾವಣೆಯಲ್ಲಿ ಯಾರಿಗೆ ಗೆಲುವು? ಎಕ್ಸಿಟ್ ಪೋಲ್ ಹೇಳುವುದು ಏನು? ಕಾಂಗ್ರೆಸ್ ಇಲ್ಲಿ ಕೂಡ ಸೋತು ಹೋಗುತ್ತಾ? ಬಿಜೆಪಿಗೆ ಆಘಾತ ಸಿಗುತ್ತಾ? ಯಾರು ಗೆಲ್ಲುತ್ತಾರೆ? ಸಮೀಕ್ಷೆಗಳ ವರದಿ ಹೇಗಿದೆ? ಬನ್ನಿ ತಿಳಿಯೋಣ.

ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟಕ್ಕೆ ಈ ಬಾರಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಭಾರಿ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದರಲ್ಲೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಮತ್ತೆ ತನ್ನ ಶಕ್ತಿ ಪ್ರದರ್ಶನ ಮಾಡಬೇಕಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಬಂದು ಮಹಾರಾಷ್ಟ್ರ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಹಾಗಾದ್ರೆ ಇದೀಗ ಹೊರ ಬಿದ್ದಿರುವ ಮಹಾರಾಷ್ಟ್ರ ಎಕ್ಸಿಟ್ ಪೋಲ್ ಪ್ರಕಾರ ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ?

Exit Poll 2024 Chanakya Strategies Exit Poll Of The Maharashtra Assembly Election 2024

ಮಹಾರಾಷ್ಟ್ರ ಚುನಾವಣೆ ಗೆಲ್ಲುವುದು ಯಾರು?

'ಚಾಣಕ್ಯ ಸ್ಟ್ರಾಟಜೀಸ್' ಎಕ್ಸಿಟ್ ಪೋಲ್ ಸಮೀಕ್ಷೆ ಇದೀಗ ಭಾರಿ ಕುತೂಹಲ ಕೆರಳಿಸಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ಮುನ್ಸೂಚನೆ ಸಿಗುತ್ತಿದೆ. ಕಾಂಗ್ರೆಸ್ ಈ ರಾಜ್ಯದಲ್ಲಿ ತನ್ನ ಶಕ್ತಿಯನ್ನ ಮೀರಿ ಪ್ರಯತ್ನ ಮಾಡಿದ್ದು, ಗೆಲುವಿಗಾಗಿ ಹಂಬಲಿಸಿತ್ತು.

ಈ ಸಮಯದಲ್ಲೇ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರು ಬಂದು ಮಹಾರಾಷ್ಟ್ರ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಹಾಗಾದ್ರೆ ಇಲ್ಲಿ ಗೆಲ್ಲುವುದು ಯಾರು? 'ಚಾಣಕ್ಯ ಸ್ಟ್ರಾಟಜೀಸ್' ಎಕ್ಸಿಟ್ ಪೋಲ್ ಹೇಳಿದ ಭವಿಷ್ಯ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಎನ್‌ಡಿಎ ಒಕ್ಕೂಟಕ್ಕೆ ಇಷ್ಟು ಸ್ಥಾನ!

ಅಂದಹಾಗೆ ಇದೀಗ 'ಚಾಣಕ್ಯ ಸ್ಟ್ರಾಟಜೀಸ್' ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ, ಎನ್‌ಡಿಎ ಒಕ್ಕೂಟಕ್ಕೆ ಬರೋಬ್ಬರಿ 152 ರಿಂದ 160 ಸ್ಥಾನ ಸಿಗುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಹಾಗೇ ಮತ್ತೊಂದು ಕಡೆ ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ 130 ರಿಂದ 138 ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ಅಂದಾಜು ಮಾಡಿದೆ. ಮತ್ತೊಂದು ಕಡೆ ಇತರ ಪಕ್ಷಗಳು & ಪಕ್ಷೇತರರು 6 ರಿಂದ 8 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.

ಜಾರ್ಖಂಡ್ ಭವಿಷ್ಯ ಏನಾಗುತ್ತದೆ?

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕೇವಲ ರಾಜಕೀಯ ಅಖಾಡವಾಗಿ ಉಳಿದಿಲ್ಲ. ಯಾಕೆ ಅಂದ್ರೆ ಕಾಂಗ್ರೆಸ್ ನಾಯಕರ ಪಾಲಿಗೆ ಈ ರಾಜ್ಯದಲ್ಲಿ ಗೆದ್ದೇ ಗೆಲ್ಲಬೇಕಾದ ಅನಿವಾರ್ಯ ಸ್ಥಿತಿ ಕೂಡ ಇದೆ. ಹರ್ಯಾಣ ಸೇರಿದಂತೆ ಅದಕ್ಕೂ ಹಿಂದಿನ ವಿಧಾನಸಭಾ ಚುನಾವಣೆಗಳು ಸ್ವತಃ ಕಾಂಗ್ರೆಸ್ ನಾಯಕರಿಗೆ ಆಘಾತ ನೀಡಿವೆ. ಹೀಗಿದ್ದಾಗ ಜಾರ್ಖಂಡ್ ರಾಜ್ಯದಲ್ಲಿ ಕೂಡ ಇದೀಗ ಕಾಂಗ್ರೆಸ್ ಮೈತ್ರಿಕೂಟ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಾರ್ಖಂಡ್ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಕಮಾಲ್ ಮಾಡುವ ನಿರೀಕ್ಷೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+