Get Updates
Get notified of breaking news, exclusive insights, and must-see stories!

ಮೋದಿ ಆಡಳಿತ ಅಂತ್ಯ; ಆನಂದಿಬೆನ್ ಆಳ್ವಿಕೆ ಆರಂಭ

ಅಹಮದಾಬಾದ್, ಮೇ21- ನಿರೀಕ್ಷೆಯಂತೆ ಹಿರಿಯ ಸಚಿವೆ ಆನಂದಿಬೆನ್ ಪಟೇಲ್ ಅವರು ಇದೀಗತಾನೆ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅವರು ನಾಳೆ ಗುರುವಾರ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಗುಜರಾತಿನ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರ 12 ವರ್ಷ, 7 ತಿಂಗಳು, 14 ದಿನ ಅಥವಾ 4610 ದಿನಗಳ ನಿರಂತರ ಆಡಳಿತ ಇಂದು ಅಂತ್ಯಗೊಂಡಿದ್ದು, ಅವರೀಗ ದೇಶದ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದಾರೆ.

ಪಸ್ತುತ, ಆನಂದಿಬೆನ್ ಪಟೇಲ್ ಅವರು ಪಸ್ತುತ ಕಂದಾಯ, ನಗರಾಭಿವೃದ್ಧಿ ಮತ್ತು ನಗರ ವಸತಿ, ರಸ್ತೆ ನಿರ್ಮಾಣ, ನೈಸರ್ಗಿಕ ವಿಪತ್ತು ನಿರ್ವಹಣೆ ಮತ್ತು ಬೃಹತ್ ಬಂಡವಾಳ ಯೋಜನೆಗಳ ಖಾತೆಯನ್ನು ನಿಭಾಯಿಸುತ್ತಿದ್ದಾರೆ. (ಆನಂದಿಬೆನ್ ಪಟೇಲ್ ಅವರ ಆಯ್ಕೆ ಬಗ್ಗೆ ದಟ್ಸ್ ಕನ್ನಡ ಏಪ್ರಿಲ್ 30ರಂದೇ ಖಚಿತ ದನಿಯಲ್ಲಿ ಹೇಳಿತ್ತು)

72 ವರ್ಷದ ಆನಂದಿಬೆನ್ ಪಟೇಲ್ ಅವರು ಮೆಹಸಾನಾ ಜಿಲ್ಲೆಯ ವಿಜಾಪುರ ತಾಲೂಕಿನ ಖರೋಡ್ ಗ್ರಾಮದವರು. ಬಿಎಸ್ಸಿ ಆಗುತ್ತಿದ್ದಂತೆ ಮಫತ್ ಭಾಯ್ ಪಟೇಲ್ ಜತೆ ಮದುವೆ. ದಂಪತಿಗೆ ಸಂಜಯ್ ಪಟೇಲ್ ಮತ್ತು ಅನಾರ್ ಪಟೇಲ್ ಎಂಬಿಬ್ಬರು ಮಕ್ಕಳಿದ್ದಾರೆ. ಮದುವೆಯ ನಂತರ ಅಹಮದಾಬಾದಿಗೆ ಬಂದವರು ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. ತುಂಬು/ ಕೂಡು ಕುಟುಂಬವನ್ನು ಸರಿದೂಗಿಸಲು ಬಿಎಡ್ ಮಾಡಿಕೊಂಡು 1970ರಲ್ಲಿ ಶಾಲಾ ಶಿಕ್ಷಕಿಯಾದರು. ಮುಂದೆ 30 ವರ್ಷ ಕಾಲ ಮೊಹ್ನಿಬಾ ವಿದ್ಯಾಲಯದ ಜತೆ ನಿರಂತರವಾಗಿ ಗುರುತಿಸಿಕೊಂಡರು.

ಆನಂದಿಬೆನ್ ರಾಜಕೀಯ ಪ್ರವೇಶವೇ ಸಾಹಸದಿಂದ ಕೂಡಿದೆ. 1987ರಲ್ಲಿ ಶಾಲಾ ಪ್ರವಾಸ ಕೈಗೊಂಡಿದ್ದಾಗ ಒಂದು ಆಕಸ್ಮಿಕ ಘಟನೆ ನಡೆಯುತ್ತದೆ. ಇಬ್ಬರು ಬಾಲಕಿಯರು ನರ್ಮದಾ ನದಿಯಲ್ಲಿ ಆಕಸ್ಮಿಕವಾಗಿ ಜಾರಿಬೀಳುತ್ತಾರೆ. ಆಗ ಹಿಂದೆಮುಂದೆ ನೋಡದ ಆನಂದಿಬೆನ್, ಸೀದಾ ನದಿಗೆ ಹಾರಿ ಇಬ್ಬರನ್ನೂ ದಡ ಮುಟ್ಟಿಸುತ್ತಾರೆ. ಮುಂದೆ ರಾಜಕೀಯ ದಡ ಸೇರಲು ಆ ಘಟನೆಯೇ ಅವರಿಗೆ ದಾರಿಯಾಗುತ್ತದೆ. ಬಿಜೆಪಿ ಪಕ್ಷವು ಸಾಹಸಿ ಆನಂದಿಬೆನ್ ಅವರ ಕೈಹಿಡಿಯುತ್ತದೆ. 1987ರಲ್ಲಿ ಗುಜರಾತ್ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗುತ್ತಾರೆ.

ಈ ಮಧ್ಯೆ, 1994ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಪ್ರತಿಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಜತೆ ನಿಕಟವಾಗಿ ಕೆಲಸ ಮಾಡುತ್ತಾರೆ. 1998ರಲ್ಲಿ ರಾಜ್ಯಸಭೆಗೆ ರಾಜೀನಾಮೆ ನೀಡಿ ಗುಜರಾತ್ ರಾಜ್ಯ ಪಾಲಿಟಿಕ್ಸ್ ಗೆ ಧುಮುಕಿದರು. 1998ರಲ್ಲಿ ಮೊದಲ ಬಾರಿಗೆ ಮಂಡಲ್ ಶಾಸಕಿಯಾಗುತ್ತಾರೆ. ಆಗಿನಿಂದಲೂ ಶಾಸಕಿಯಾಗಿ ಆಯ್ಕೆಯಾಗುತ್ತಲೇ ಇದ್ದಾರೆ. ನಾಲ್ಕು ಬಾರಿ ಶಾಸಕಿಯಾಗಿ ಆಯ್ಕೆಯಾದ ಏಕೈಕ ಮಹಿಳೆ ಆನಂದಿಬೆನ್ ಪಟೇಲ್. ಇಷ್ಟೊಂದು ದೀರ್ಘಾವಧಿಗೆ ಶಾಸಕಿಯಾಗಿ ಸೇವೆ ಸಲ್ಲಿಸಿದ ಬೇರೊಬ್ಬ ಮಹಿಳೆ ಇಲ್ಲ. ಮೋದಿಗಿಂತ 10 ವರ್ಷ ಹಿರಿಯರು.

Narendra Modi, Anandiben Patel

1998ರಲ್ಲಿ ಮಂಡಲ್ ಜಿಲ್ಲೆಯಿಂದ ಅಸೆಂಬ್ಲಿಗೆ ಆಯ್ಕೆಯಾದ ಆನಂದಿಬೆನ್ ಪಟೇಲ್ ಅವರು ಕೇಶುಭಾಯಿ ಪಟೇಲ್ ಮಂತ್ರಿಮಂಡಲದಲ್ಲಿ ಶಿಕ್ಷಣ ಸಚಿವರಾಗಿ ನೇಮಕಗೊಂಡರು. 2002ರಲ್ಲಿ ಪಟಾನ್ ಕ್ಷೇತ್ರದಿಂದ ಆಯ್ಕೆಯಾದ ನಂತರ ಈ ಬಾರಿ ಮೋದಿ ಸರಕಾರದಲ್ಲಿ ಮತ್ತೆ ಶಿಕ್ಷಣ ಸಚಿವೆಯಾದರು. 'ಲೋಕದರ್ಬಾರ್' ಜನತಾದರ್ಶನ ನಡೆಸುವ ಮೂಲಕ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸತೊಡಗಿದರು.

2007ರಲ್ಲಿ ಮತ್ತೊಮ್ಮೆ ಪಟಾನ್ ಕ್ಷೇತ್ರದಿಂದ ಆಯ್ಕೆಯಾದ ಆನಂದಿಬೆನ್, ಈ ಬಾರಿ ಕಂದಾಯ ಮತ್ತರು ರಸ್ತೆ ನಿರ್ಮಾಣ ಖಾತೆಯನ್ನು ನಿಭಾಯಿಸಲಾರಂಭಿಸಿದರು. ನಾಲ್ಕನೆಯ ಬಾರಿಗೂ ಘಟ್ಲೋಡಿಯಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದ ಆನಂದಿಬೆನ್ ನಾಲ್ಕು ಖಾತೆಗಳನ್ನು ಹೆಚ್ಚಿಗೆ ನಿಭಾಯಿಸಲಾರಂಭಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+