ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ತಿಂಗಳವರೆಗೆ ಪ್ರಯಾಣಿಕರ ದೋಣಿಗಳಿಗೆ ಶುಲ್ಕದಲ್ಲಿ ವಿನಾಯಿತಿ

|
Google Oneindia Kannada News

ನವದೆಹಲಿ, ಜುಲೈ, 25: ಜಾಗತಿಕ ಮಟ್ಟದಲ್ಲಿ ಇಂಧನಗಳ ಬೆಲೆ ಹೆಚ್ಚಳದ ಪ್ರಬಾವದಿಂದ ಜಲಮಾರ್ಗ ವಲಯಕ್ಕೆ ಸಚಿವಾಲಯ 6 ತಿಂಗಳವರೆಗೂ ವಿನಾಯಿತಿ ನೀಡಲು ಮುಂದಾಗಿದೆ. ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಎಲ್ಲಾ ಪ್ರಮುಖ ಬಂದರುಗಳಿಗೆ ಈ ಬಗ್ಗೆ ನಿರ್ದೇಶನ ನೀಡಿದೆ.

ಪ್ರಸ್ತುತ ರೋ ಪ್ಯಾಕ್ಸ್‌ ಅಥವಾ ಪ್ರಯಾಣಿಕರ ದೋಣಿಗಳಿಗೆ ಮುಂದಿನ 6 ತಿಂಗಳವರೆಗೆ ವಿಧಿಸಲಾಗುತ್ತಿರುವ ಬಾಡಿಗೆಯಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ಮತ್ತು ಹಡಗು ಸಂಬಂಧಿತ ಶುಲ್ಕಗಳಲ್ಲಿ ವಿನಾಯಿತಿ ನೀಡಲು ಮುಂದಾಗಿದೆ. ಸಮುದ್ರದ ಇಂಧನಗಳಾದ ಲೋ ಸಲ್ಫರ್‌, ಹೈ ಫ್ಲಾಶ್‌, ಹೈ ಸ್ಪೀಡ್‌ ಡೀಸೆಲ್‌ ಬೆಲೆ ಪ್ರತಿ ಕಿಲೋ ಲೀಟರ್‌ಗೆ 76,000 ರೂಪಾಯಿ ಇಂದ 1,21,000 ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಲೋ ಸಲ್ಫರ್‌ ಫ್ಯೂಯಲ್‌, ಆಯಿಲ್‌ಗಳ ಬೆಲೆ ಕಿಲೋ ಲೀಟರ್‌ಗೆ 40,608 ರೂಪಾಯಿ ಇಂದ 80,917 ರೂ.ಗೆ ಏರಿಕೆಯಾಗಿದೆ.

ಕೇಂದ್ರ ಬಜೆಟ್ 2022: ದೇಶದ ಸಾಮಾನ್ಯ ಪ್ರಜೆಗಳಿಗೆ ಸಿಕ್ಕಿದ್ದು ಏನು?ಕೇಂದ್ರ ಬಜೆಟ್ 2022: ದೇಶದ ಸಾಮಾನ್ಯ ಪ್ರಜೆಗಳಿಗೆ ಸಿಕ್ಕಿದ್ದು ಏನು?

2021-22ರ ಆರಂಭದಲ್ಲಿ ಸಮುದ್ರದ ಇಂಧನದ ವೆಚ್ಚವು ಚಿಲ್ಲರೆ ಡೀಸೆಲ್‌ಗಿಂತ 10-15 ಪ್ರತಿಶತ ಕಡಿಮೆ ಇತ್ತು. ಇದೀಗ ಇವುಗಳ ಬೆಲೆ ಶೇಕಡಾ 40ಕ್ಕಿಂತ ಹೆಚ್ಚಳವಾಗಿದೆ. ಆದ್ದರಿಂದ ಸಚಿವಾಲಯವು ಫೆರ್ರಿ ಜಲಮಾರ್ಗ ಸಾರಿಗೆಯನ್ನು ಹೆಚ್ಚಾಗಿ ಉತ್ತೇಜಿಸುತ್ತಿದೆ. ಇದು ಇತರ ಸಾರಿಗೆ ವಿಧಾನಗಳಿಗೆ ಹೋಲಿಸಿದರೆ ಇದರ ವೆಚ್ಚ ಕಡಿಮೆ ಇದೆ. ಅಲ್ಲದೇ ಇದರಿಂದ ಸಾಂಪ್ರದಾಯಿಕ ಸಾರಿಗೆ ವಿಧಾನಗಳಿಗೆ ಸಹಾಯಕವಾಗಲಿದೆ.

Exemption in Fares for Passenger Boats up to 6 Months

''ಇದರಿಂದ ರೈಲು ಮಾರ್ಗಗಗಳಲ್ಲಿ ಏಕಕಾಲದಲ್ಲಿ ಸಂಚಾರ ದಟ್ಟಣೆ, ಶಬ್ದಮಾಲಿನ್ಯ ಮತ್ತು ರಸ್ತೆಗಳಲ್ಲಿನ ಅಪಘಾತಗಳು ಸಹ ಕಡಿಮೆಯಾಗಬಹುದು. ಇಂತಹ ಜಲಮಾರ್ಗ ಆಧಾರಿತ ಸಾರಿಗೆ ಸೇವೆಯು ವೆಚ್ಚವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಲಿದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಮತ್ತು ಹಲವಾರು ಹಡಗು ಸಾಗಣೆಯನ್ನು ಉತ್ತೇಜಿಸುತ್ತದೆ'' ಎಂದು ಜಲಮಾರ್ಗಗಳ ಸಾರಿಗೆ ಸಚಿವಾಲಯ ತಿಳಿಸಿದೆ.

ಸಮುದ್ರದ ಇಂಧನಗಳ ಬೆಲೆಗಳು ಮತ್ತು ಜಿಎಸ್‌ಟಿ ದೋಣಿ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವುದರಿಂದ ಚರ್ಚೆಗೆ ಮುಂದಾಗಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ಇತ್ತೀಚೆಗೆ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸೋನೋವಾಲ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇಂಧನ ಸಚಿವ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರಗಳನ್ನು ಬರೆದು, ಸಮಸ್ಯೆಗಳನ್ನು ವಿವಾರಿಸಿದ್ದಾರೆ ಮತ್ತು ಕ್ರಮವಾಗಿ ತೆರಿಗೆ ಮತ್ತು ಇಂಧನ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಈ ವಲಯಕ್ಕೆ ತಮ್ಮ ಬೆಂಬಲವನ್ನು ನೀಡುವಂತೆ ವಿನಂತಿಸಿದ್ದಾರೆ.

Exemption in Fares for Passenger Boats up to 6 Months

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಇಂಧನದ ವೆಚ್ಚವು ಈಗ ನಮ್ಮ ಸ್ಥಳೀಯ ರೋ -ಪ್ಯಾ ಕ್ಸ್ ಮತ್ತು ಪ್ಯಾಸೆಂಜರ್ ಫೆರ್ರಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ಎಮ್‌ಒಪಿಎಸ್‌ಡ್ಬ್ಯೂನಿಂದ ಹಡಗು ಮತ್ತು ಬಂದರು ಸಂಬಂಧಿತ ಶುಲ್ಕಗಳ ವಿನಾಯಿತಿಯು ಮುಂದಿನ 6 ತಿಂಗಳವರೆಗೆ ವಿನಾಯಿತಿಯನ್ನು ಒದಗಿಸುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ವಲಯಕ್ಕೆ ಅಗತ್ಯವಾದ ಬೆಂಬಲವನ್ನು ಒದಗಿಸಲು ಇಂಧನ ಬೆಲೆಗಳಲ್ಲಿನ ಕಡಿತವನ್ನು ಪರಿಗಣಿಸಲು ಮತ್ತು ಹಣಕಾಸು ಸಚಿವಾಲಯವು ಅದರ ಮೇಲಿನ ಸಂಬಂಧಿತ ತೆರಿಗೆಗಳನ್ನು ಕಡಿಮೆ ಮಾಡಲು ಎಂಒಪಿಎನ್‌ಜಿಗೆ ಕೇಳಿಕೊಂಡಿದ್ದೇವೆ ಎಂದು ಸೋನೋವಾಲ್ ಹೇಳಿದರು.

ಕಾರ್ಯಕ್ರಮದ ಅಡಿಯಲ್ಲಿ ಘೋಘಾ ಮತ್ತು ಹಜಿರಾ ನಡುವೆ ದೀನದಯಾಳ್ ಬಂದರು ಪ್ರಾಧಿಕಾರವು ಜಾರಿಗೊಳಿಸಿದ ರೋ - ಪ್ಯಾಕ್ಸ್ ಸೇವೆಗಳ ಪ್ರಯಾಣದ ಸಮಯವನ್ನು 12 ಗಂಟೆ ಕಡಿಮೆ ಮಾಡಿದೆ. 4 ಗಂಟೆಗಳವರೆಗೆ ಈ ರೋ -ಪ್ಯಾಕ್ಸ್ ದೋಣಿ ಸೇವೆಯು ಆರಂಭದಿಂದಲೂ 78,000 ವಾಹನಗಳು ಮತ್ತು 2.6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸಲಿದೆ. ಇನ್ನು ಮಹಾರಾಷ್ಟ್ರ ಮಾರಿಟೈಮ್ ಬೋರ್ಡ್ ಮುಂಬೈ - ಮಾಂಡ್ವಾ ಮಾರ್ಗದಲ್ಲಿ ಈ ದೋಣಿಯ ಸೇವೆಯನ್ನು ಪ್ರಾರಂಭಿಸಿತು. 5.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ದೋಣಿಯ ಸೇವೆಯನ್ನು ಪಡೆದುಕೊಂಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಸಾಗಿಸಲಾಗಿದೆ ಎಂದು ಹೇಳಿದರು.

English summary
The Ministry has proposed to provide an exemption for the waterway sector for up to 6 months from the impact of the increase in fuel prices at the global level. The Ministry of Shipping and Waterways has directed all major ports in this regard. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X