Tirupati Laddu row: ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪ ಬಳಕೆ; ಬಂತು ಟಿಟಿಡಿ ಎಕ್ಸಕ್ಲೂಸಿವ್‌ ರಿಪೋರ್ಟ್

ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ತಿರುಮಲ (ಟಿಟಿಡಿ) ತಿರುಪತಿ ದೇವಸ್ಥಾನಂನಿಂದ ಆಂಧ್ರಪ್ರದೇಶದ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ಹಲವು ಗಂಭೀರವಾದ ಅಂಶಗಳು ಇವೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವನ್ನು (ತುಪ್ಪದೊಂದಿಗೆ) ಬಳಸಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಕಳೆದ ಒಂದು ವಾರದಿಂದಲೂ ಈ ವಿಷಯ ಗಂಭೀರ ಚರ್ಚೆಗೆ ಕಾರಣವಾಗಿದೆ. ಇದೀಗ ಈ ವಿಷಯದ ಬಗ್ಗೆ ಟಿಟಿಡಿ ವರದಿ ಸಲ್ಲಿಸಿದ್ದು ಅದರಲ್ಲಿ ಹಲವು ಪ್ರಮುಖ ಅಂಶಗಳು ಇವೆ.

ತಿರುಪತಿ ತಿರುಮಲ ದೇವಸ್ಥಾನದ ಲಡ್ಡಿನಲ್ಲಿ ಹಸುವಿನ ಕೊಬ್ಬು, ಹಂದಿಯ ಕೊಬ್ಬು ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎನ್ನುವ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಇದು ಸಾಕಷ್ಟು ವಿವಾದ ಹಾಗೂ ಹಿಂದೂ ಭಕ್ತಾಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದದ ಬಗ್ಗೆ ಭಕ್ತರಲ್ಲಿ ವಿಶೇಷ ಭಕ್ತಿ ಹಾಗೂ ಗೌರವ ಭಾವ ಇದೆ. ಇದೀಗ ಈ ವಿವಾದದ ಬಗ್ಗೆ ಟಿಟಿಡಿ ಸ್ಪಷ್ಟನೆ ನೀಡಿದ್ದು, ಶಂಕಿತ ಕಲಬೆರೆಕೆ ತುಪ್ಪವನ್ನು ಲಾಡುಗಳ ತಯಾರಿಕೆಯಲ್ಲಿ ನಾವು ಬಳಸಿಲ್ಲ ಎಂದು ಹೇಳಿದೆ. ಅಲ್ಲದೇ ತಮಿಳುನಾಡಿನ ಮೂಲದ ಎಆರ್‌ ಡೇರಿಯಿಂದ ಪೂರೈಕೆ ಮಾಡಲಾಗಿದ್ದ ತುಪ್ಪದ (ಕಲಬೆರೆಕೆಯ ಶಂಕೆಯ ಮೇಲೆ) ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಆ ತುಪ್ಪವನ್ನು ನಾವು ಲಡ್ಡು ತಯಾರಿಸುವುದಕ್ಕೆ ಬಳಕೆ ಮಾಡಿಲ್ಲ ಎಂದು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Exclusive report from TTD to Andhra Govt on allegations of adulterated ghee in Tirupati laddu

40 ಪುಟಗಳ ಸುದೀರ್ಘ ವರದಿ: ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಹಾಗೂ ಈಚೆಗೆ ಚರ್ಚೆ ನಡೆಯುತ್ತಿರುವ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಟಿಟಿಡಿಯು ಸುದೀರ್ಘ 40 ಪುಟಗಳ ವರದಿಯನ್ನು ಆಂಧ್ರಪ್ರದೇಶದ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಅದರಲ್ಲಿ ನಾವು ತಿರುಪತಿ ಲಡ್ಡನ್ನು ತಯಾರಿಸುವ ಹಂತಲ್ಲಿ ಶಂಕಿತ ಕಲಬೆರಕೆ ತುಪ್ಪವನ್ನು ಲಾಡುಗಳ ತಯಾರಿಕೆಯಲ್ಲಿ ನಾವು ಬಳಸಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಕಲಬೆರಕೆ ತುಪ್ಪದ ಪರೀಕ್ಷೆ ಇಲ್ಲ: ಟಿಟಿಡಿ ನೀಡಿರುವ ವರದಿಯಲ್ಲಿ ಇರುವ ಅತ್ಯಂತ ಗಂಭೀರ ಹಾಗೂ ಆಶ್ಚರ್ಯಕರ ಸಂಗತಿ ಎಂದರೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ತುಪ್ಪದ ಪರೀಕ್ಷೆಗಳೇ ನಡೆದಿಲ್ಲ ಎನ್ನುವುದು (ಕಲಬೆರಕೆ ತುಪ್ಪದ ಪರೀಕ್ಷೆ, ಪ್ರಯೋಗಾಲದಯಲ್ಲಿ). ವಿವಿಧ ಮಾನದಂಡಗಳನ್ನು ಈಗಾಗಲೇ ನಿಗದಿ ಮಾಡಿರುವುದು ನಿಜ. ಆದರೆ, ಟಿಟಿಡಿ ಪ್ರಯೋಗಾಲದಯಲ್ಲಿ ಕಲಬೆರಕೆ ತುಪ್ಪವನ್ನು ಪರೀಕ್ಷೆ ಮಾಡುವುದಕ್ಕೆ ಅವಶ್ಯವಿರುವ ಎಕ್ಯೂಮೆಂಟ್ಸ್‌ ಇಲ್ಲಿ ಇಲ್ಲ. ಇದೇ ಕಾರಣಕ್ಕೆ ಕಲಬೆರಕೆ ತುಪ್ಪದ ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ ಎಂದು ಹೇಳಿದೆ. ಬಹುಕೋಟಿ ಹಾಗೂ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿರುಪಲ ದೇವಸ್ಥಾನದಲ್ಲಿ ಒಂದೇ ಒಂದು ಪ್ರಯೋಗಾಲಯವೂ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ.

ಟಿಟಿಡಿ ಎಕ್ಸಕ್ಲೂಸಿವ್‌ ರಿಪೋರ್ಟ್‌ ಮುಖ್ಯಾಂಶ

* ದಿನಕ್ಕೆ 15 ಸಾವಿರ ಕೆಜಿ ತುಪ್ಪದಂತೆ ಪ್ರತಿ ವರ್ಷವೂ ಅಂದಾಜು 200 ಕೋಟಿ ರೂಪಾಯಿ ಮೌಲ್ಯದ ತುಪ್ಪವನ್ನು ಖರೀಡಿ ಮಾಡುವುದಕ್ಕೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಲಾಗುತ್ತಿದೆ.

* ತಿರುಪತಿ ತಿರುಮಲ ದೇವಸ್ಥಾನ ಹಾಗೂ ತಿರುಚನೂರು ದೇವಸ್ಥಾನಗಳಲ್ಲಿ ಲಡ್ಡು ಸೇರಿದಂತೆ ವಿವಿಧ ಪ್ರಸಾದವನ್ನು ತಯಾರಿಸುವುದಕ್ಕೆ ಆರು ತಿಂಗಳಿಗೊಮ್ಮೆ ಇ -ಟೆಂಡರ್‌ ಕರೆಯಲಾಗುತ್ತದೆ. ಇದಕ್ಕೆ ಅಗ್‌ಮಾರ್ಕ್‌ ಹೊಂದಿರುವುದು ಕಡ್ಡಾಯ ಎಂದು ಹೇಳಲಾಗಿರುತ್ತದೆ. ಹಸುವಿನ ತುಪ್ಪವನ್ನು ಈ ಟೆಂಡರ್‌ನ ಮೂಲಕವೇ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಟಿಟಿಡಿ ಮತ್ತು ಎಫ್‌ಎಸ್‌ಎಸ್‌ಏಐ ಮಾನದಂಡಗಳಿಗೆ ಅನುಗುಣವಾಗಿ ತುಪ್ಪದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರತಿ ಬಾರಿಯೂ ಸೂಚನೆ ನೀಡಲಾಗಿರುತ್ತದೆ.

* ಗುತ್ತಿಗೆದಾರರು ಕಳುಹಿಸುವ ತುಪ್ಪದ ಬಗ್ಗೆ ಕೆಲವು ನಿರ್ದಿಷ್ಟ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅದರಲ್ಲಿ ವ್ಯತ್ಯಾಸ ಕಂಡು ಬಂದರೆ ಆ ತುಪ್ಪವನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ.

* ಎನ್‌ಎಬಿಎಲ್‌ ಮಾನ್ಯತೆ ಪಡೆದಿರುವ ಲ್ಯಾಬ್‌ಗಳಲ್ಲಿ ಕಲಬೆರೆಕೆ ತುಪ್ಪಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ಮಾಡುವುದಕ್ಕೆ ಅವಕಾಶ ಇದೆ. ಆದರೆ, ಈ ರೀತಿ ಪರೀಕ್ಷೆಯನ್ನು ಇಲ್ಲಿಯವರೆಗೂ ಮಾಡಿಸಲಾಗಿಲ್ಲ ಎನ್ನುವುದು ಸೇರಿದಂತೆ ಹಲವು ಅಂಶಗಳು ಇದರಲ್ಲಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+